108 ಮೆಗಾಫಿಕ್ಸೆಲ್ ಕ್ಯಾಮೆರಾವಿರುವ ಶಿಯೋಮಿ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​; ನ. 5 ರಂದು ಮಾರುಕಟ್ಟೆಗೆ

Xiaomi Mi CC9 Pro: ಶಿಯೋಮಿ ಮಿ ಸಿಸಿ9 ಪ್ರೊ ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ​ 108 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ 13 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ.

news18-kannada
Updated:November 5, 2019, 2:36 PM IST
108 ಮೆಗಾಫಿಕ್ಸೆಲ್ ಕ್ಯಾಮೆರಾವಿರುವ ಶಿಯೋಮಿ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​; ನ. 5 ರಂದು ಮಾರುಕಟ್ಟೆಗೆ
Xiaomi Mi CC9 Pro: ಶಿಯೋಮಿ ಮಿ ಸಿಸಿ9 ಪ್ರೊ ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ​ 108 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ 13 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ.
  • Share this:
ಶಿಯೋಮಿ ಕಂಪೆನಿ 108 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಿರುವ 'ಮಿ ಸಿಸಿ9 ಪ್ರೊ' ಹೆಸರಿನ ಸ್ಮಾರ್ಟ್​ಫೋನ್​ ಅನ್ನು ಸಿದ್ಧಪಡಿಸಿದೆ. ನವೆಂಬರ್​ 5 ರಂದು ಈ ನೂತನ ಸ್ಮಾರ್ಟ್​ಫೋನ್​ ಅನ್ನು ಚೀನಾದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಶಿಯೋಮಿ ಕಂಪೆನಿಯು ಚೀನಾದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಿ ಸಿಸಿ9 ಪ್ರೊ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಪರಿಚಯಿಸುವುದಾಗಿ ತಿಳಿಸಿದೆ. ಇದರ ಜೊತೆಗೆ ‘ಮಿ ಟಿವಿ 5‘ ಮಾರುಕಟ್ಟೆಗೆ ಪರಿಚಯಿಸಲಿದೆ.

ಶಿಯೋಮಿ 'ಮಿ ಸಿಸಿ9 ಪ್ರೊ'


‘ಮಿ ಸಿಸಿ9 ಪ್ರೊ‘ ಸ್ಮಾರ್ಟ್​ಫೋನ್ 6.4​ಫುಲ್​ ಹೆಚ್​ಡಿ+ ಅಮೋಲ್ಡ್​ ವಾಟರ್​ ಡ್ರಾಪ್​ ನಾಚ್​ ಡಿಸ್​ಪ್ಲೇ ಹೊಂದಿದ್ದು, ಸ್ನಾಪ್​ಡ್ರ್ಯಾಗನ್​​ ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್​ ಬೆಂಬಲವನ್ನು ಪಡೆದಿದೆ. ಈ ನೂತನ ಸ್ಮಾರ್ಟ್​ಫೋನ್​ 6GB RAM​ ಒಳಗೊಂಡಿದೆ.

ಕ್ಯಾಮೆರಾ ವಿಶೇಷತೆ:

ಶಿಯೋಮಿ 'ಮಿ ಸಿಸಿ9 ಪ್ರೊ' ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ​ 108 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ 13 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಫೋಟೋ ತೆಗೆಯಲು ಸಹಾಯಕವಾಗುವಂತೆ ಎಲ್​ಇಡಿ ಪ್ಲಾಶ್​ ಕೂಡ ನೀಡಲಾಗಿದೆ. ಸ್ಮಾರ್ಟ್​ಫೋನ್​​ ಮುಂಭಾಗದಲ್ಲಿ 32 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ.ಬ್ಯಾಟರಿ ಬಾಳಿಕೆ:

ಬಳಕೆಗೆ ಯೋಗ್ಯವಾಗುವಂತೆ 4,000mAh ಬ್ಯಾಟರಿಯನ್ನು ನೀಡಲಾಗಿದೆ. ಮಾತ್ರವಲ್ಲದೆ, ವೇಗವಾಗಿ ಚಾರ್ಜ್​ ಮಾಡಬಹುದಾದ ಚಾರ್ಜಿಂಗ್​ ವ್ಯವಸ್ಥೆ, ಯುಎಸ್​ಬಿ ಟೈಪ್​-ಸಿ ಪೋರ್ಟ್​ ಅನ್ನು ಅಳವಡಿಸಿದೆ.

ಇದಲ್ಲದೆ, 4G ನೆಟ್​ವರ್ಕ್​ ಅನುಗುಣವಾಗಿ ​ 'ಮಿ ಸಿಸಿ9 ಪ್ರೊ' ಸ್ಮಾರ್ಟ್​ಫೋನ್​ ಅನ್ನು ತಯಾರಿಸಲಾಗಿದೆ. ಡುಯೆಲ್​ ಸಿಮ್​ ಆಯ್ಕೆಯಿದೆ. ಜೊತೆಗೆ ಫಿಂಗರ್​ ಪ್ರಿಂಟ್​ ಸೆನ್ಸಾರ್​ ಹೊಂದಿದೆ.

ಇನ್ನು ಸ್ಮಾರ್ಟ್​ಫೋನ್​ ಮೆಮೊರಿಯನ್ನು 128GBಯಿಂದ 256GBವರೆಗೆ ವೃದ್ಧಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ. ಶಿಯೋಮಿ 'ಮಿ ಸಿಸಿ9 ಪ್ರೊ' ಸ್ಮಾರ್ಟ್​ಫೋನ್ ಬೆಲೆ 26 ಸಾವಿರ ರೂ. ಇರಲಿದ್ದು, ಸದ್ಯದಲ್ಲೇ ದೇಶಿಯಾ ಮಾರುಕಟ್ಟೆಗೆ ಬರಲಿದೆ.

First published:October 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading