HOME » NEWS » Tech » XIAOMI MI BAND 4C WITH UP TO 14 DAYS BATTERY LIFE LAUNCHED HG

Xiaomi Mi Band 4C: ಬಿಡುಗಡೆಯಾಯ್ತು ಶಿಯೋಮಿ ನೂತನ ಬ್ಯಾಂಡ್​; ಭಾರತದಲ್ಲಲ್ಲ... ಮತ್ತೆಲ್ಲಿ?

Xiaomi Mi Band 4C: ತೈವಾನ್​ನಲ್ಲಿ ಶಿಯೋಮಿ ಕಂಪೆನಿ ಸಿದ್ಧಪಡಿಸಿದ ಮಿ 4C ಬ್ಯಾಂಡ್​ ಅನ್ನು ಪರಿಚಯಿಸಿದೆ. ನೂತನ ಬ್ಯಾಂಡ್​​​ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ತನ್ನ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ.

news18-kannada
Updated:July 17, 2020, 5:21 PM IST
Xiaomi Mi Band 4C: ಬಿಡುಗಡೆಯಾಯ್ತು ಶಿಯೋಮಿ ನೂತನ ಬ್ಯಾಂಡ್​; ಭಾರತದಲ್ಲಲ್ಲ... ಮತ್ತೆಲ್ಲಿ?
Xiaomi Mi Band 4C
  • Share this:
ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್​​​ಗಳನ್ನು ಭಾರತದಲ್ಲಿ ಬ್ಯಾನ್​ ಮಾಡಿದೆ. ಜನಪ್ರಿಯ ಆ್ಯಪ್​ಗಳು ಇದರಲ್ಲಿ ಸೇರಿತ್ತು. ಹಾಗಾಗಿ ಭಾರತೀಯ ಅನೇಕ ಬಳಕೆದಾರರನ್ನು ಮತ್ತು ಮಾರುಕಟ್ಟೆಯನ್ನು ಚೀನಾ ಕಳೆದುಕೊಂಡಿದೆ. ಹೀಗಿರುವಾಗ ಉಳಿದ ದೇಶದಲ್ಲಿ ತನ್ನ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಚೀನಾ ಮುಂದಾಲೋಚನೆ ಮಾಡಿದ್ದು, ಅದರಂತೆ ಇದೀಗ ಶಿಯೋಮಿ ಕಂಪೆನಿಯ ಮಿ 4C ಹೆಸರಿನ ಬ್ಯಾಂಡ್​ವೊಂದನ್ನು ಬಿಡುಗಡೆ ಮಾಡಿದೆ.

ತೈವಾನ್​ನಲ್ಲಿ ಶಿಯೋಮಿ ಕಂಪೆನಿ ಸಿದ್ಧಪಡಿಸಿದ ಮಿ 4C ಬ್ಯಾಂಡ್​ ಅನ್ನು ಪರಿಚಯಿಸಿದೆ. ನೂತನ ಬ್ಯಾಂಡ್​​​ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ತನ್ನ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ.

ಶಿಯೋಮಿ ಈ ಮೊದಲು ಮಿ ಬ್ಯಾಂಡ್​, ಮಿ ಬ್ಯಾಂಡ್​  2, ಮಿ ಬ್ಯಾಂಡ್​ 3, ಮಿ ಬ್ಯಾಂಡ್​ 4 ಬಿಡುಗಡೆ ಮಾಡಿತ್ತು. ಭಾರತದಲ್ಲೂ ಪರಿಚಯಿಸಿತ್ತು. ಇದರ ಜೊತೆಗೆ  ಮಿ ಬ್ಯಾಂಡ್​ ಆ್ಯಪ್​​​​ ಅನ್ನು ಬಿಡುಗಡೆ ಮಾಡಿತ್ತು. ಬಳಕೆದಾರರ ಫಿಟ್​ನೆಸ್​ ಕುರಿತಾದ  ಮಾಹಿತಿ ಆ್ಯಪ್​ ಮೂಲಕ ಸ್ಮಾರ್ಟ್​ಫೋನ್​ನಲ್ಲಿ ವೀಕ್ಷಣೆ ಮಾಡಬಹುದಾಗಿತ್ತು. ಆದರೆ ಕೇಂದ್ರ ಸರ್ಕಾರ ಬ್ಯಾನ್​ ಮಾಡಿದ 59 ಆ್ಯಪ್​ಗಳ ಪಟ್ಟಿಯಲ್ಲಿ ಮಿ ಆ್ಯಪ್​ ಕೂಡ ಸೇರಿತ್ತು. ಹಾಗಾಗಿ ಸದ್ಯಕ್ಕಂತೂ ಭಾರತದಲ್ಲಿ ಮಿ ಬ್ಯಾಂಡ್​ಗಳು ಮಾರುಕಟ್ಟೆಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇನ್ನು ಕೇಂದ್ರ ಸರ್ಕಾರ ಆಂತರಿಕ ಮತ್ತು ಬಾಹ್ಯ ಭದ್ರತೆಗೆಗಾಗಿ ಚೀನಾ ಆ್ಯಪ್​ಗಳನ್ನು ಬ್ಯಾನ್​ ಮಾಡಿದೆ.MI Band 4C ವಿಶೇಷ:

ಶಿಯೋಮಿ ಸಿದ್ಧಪಡಿಸಿದ ಮಿ ಬ್ಯಾಂಡ್​ 4c 1.08 ಇಂಚಿನ ಕಲರ್​ ಟಚ್​ ಸ್ಕ್ರೀನ್​ ಹೊಂದಿದ್ದು, 128x​220 ಪಿಕ್ಸೆಲ್​​ ಮತ್ತು 2D ಟೆಂಪರ್ಡ್​ ಗ್ಲಾಸ್​ ಹೊಂದಿದೆ. 130mAh​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಒಂದು ಬಾರಿ ಚಾರ್ಜರ್ ಮಾಡಿದರೆ 14 ದಿನಗಳ ಕಾಲ ನಿರಂತರವಾಗಿ ಬಳಸಬಹುದಾಗಿದೆ.

13 ಗ್ರಾಂ ತೂಕವಿರುವ ಮಿ ಬ್ಯಾಂಡ್​ 4C ಬ್ಲೂಟೂತ್​​ V5.0, ಆ್ಯಂಡ್ರಾಯ್ಡ್​ ಒಎಸ್​​ ವರ್ಷನ್​ 4.4 ಮತ್ತು ಐಒಎಸ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ.Gold Mask: ಒರಿಸ್ಸಾ ಉದ್ಯಮಿಯೊಬ್ಬರ ಬಳಿಯಿದೆ ಬರೋಬ್ಬರಿ 3.5 ಲಕ್ಷ ರೂ. ಚಿನ್ನದ ಮಾಸ್ಕ್​!

ಅಷ್ಟು ಮಾತ್ರವಲ್ಲದೆ, 5AMT ವಾಟರ್​​ ರೆಸಿಸ್ಟೆಂಟ್​​, 5 ಸ್ಟೋಟ್ಸ್​ ಮೋಡ್​​ ಆಯ್ಕೆಯನ್ನು ನೀಡಿದೆ. ಓಟ, ಸೈಕ್ಲಿಂಗ್​, ವ್ಯಾಯಾಮ, ವೇಗದ ನಡತೆ, ಜೊತೆಗೆ 24 ಗಂಟೆಗಳ ಹಾರ್ಟ್​ ರೇಟ್​ ಮಾನಿಟರ್​ ಮಾಡುತ್ತದೆ. ಮಿ ಬ್ಯಾಂಡ್​ 4C ಮೂಲಕ ಫೋನ್​ ಕರೆ, ಮ್ಯೂಸಿಕ್​  ಆಯ್ಕೆಯನ್ನು ನಿಯಂತ್ರಣದಲ್ಲಿರಬಹುದಾಗಿದೆ.

ತನ್ನ ಮಗಳನ್ನೇ ಗರ್ಭಿಣಿ ಮಾಡಿ ವಿವಾಹವಾದ ತಂದೆ!

ಸದ್ಯ ಗ್ರಾಹಕರಿಗಾಗಿ ಕಪ್ಪು, ನೀಲಿ, ಹಸಿರು, ಕಿತ್ತಾಳೆ ಬಣ್ಣದಲ್ಲಿ ಪರಿಚಯಿಸಿದೆ. ತೈವಾನ್​ನಲ್ಲಿ ಮಿ ಬ್ಯಾಂಡ್​ 4c ಬೆಲೆ 1740 ರೂ. ಎಂದು ಅಂದಾಜಿಸಲಾಗಿದೆ
Published by: Harshith AS
First published: July 17, 2020, 5:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading