ಶಿಯೋಮಿ ಮಿ ಬ್ಯಾಂಡ್ 3i ಬಿಡುಗಡೆ; ಕಡಿಮೆ ಬೆಲೆ ಮಿ.ಕಾಂನಲ್ಲಿ ಲಭ್ಯ

Mi Band 3i: ಮಿ 3ಐ ಬ್ಯಾಂಡ್​ ಅನ್ನು ಒಂದು ಬಾರಿ ಚಾರ್ಜ್​ ಮಾಡಿದರೆ 20 ದಿನಗಳವರೆಗೆ ಬಳಸಬಹುದಾಗಿದೆ.

Harshith AS | news18-kannada
Updated:November 22, 2019, 7:41 PM IST
ಶಿಯೋಮಿ ಮಿ ಬ್ಯಾಂಡ್ 3i ಬಿಡುಗಡೆ; ಕಡಿಮೆ ಬೆಲೆ ಮಿ.ಕಾಂನಲ್ಲಿ ಲಭ್ಯ
ಮಿ ಬ್ಯಾಂಡ್ 3i
  • Share this:
ಶಿಯೋಮಿ ಸಂಸ್ಥೆ ಕಳೆದ ಕೆಲ ತಿಂಗಳ ಹಿಂದೆ ಮಿ ಬ್ಯಾಂಡ್​ 4 ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಮಾತ್ರವಲ್ಲದೆ, ಮಾರುಕಟ್ಟೆಗೆ ಬಾರಿ ಬೇಡಿಕೆಯನ್ನು ಸೃಷ್ಠಿಸಿತ್ತು. ಇದೀಗ ಸಂಸ್ಥೆ ಮಿ ಬ್ಯಾಂಡ್​ 3ಐ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಶಿಯೋಮಿ ಬಿಡುಗಡೆಗೊಳಿಸಿದ ಮಿ 3ಐ ಬ್ಯಾಂಡ್​ 0.78 ಇಂಚಿನ ಅಮೋಲ್ಡ್ ಟಚ್​​ ಡಿಸ್​ಪ್ಲೇ ಹೊಂದಿದ್ದು, ಆ್ಯಂಟಿ ಫಿಂಗರ್​ ಪ್ರಿಂಟ್​ ಹೊಂದಿದೆ. ಇದರ ಜೊತೆಗೆ ಇನ್​ಸ್ಟಾಗ್ರಾಂ ಅಥವಾ ಇತರ ಆ್ಯಪ್​ಗಳ ನೋಟಿಫಿಕೇಷನ್​, ಫೋನ್​ ಕರೆಗಳನ್ನು ರಿಜೆಕ್ಟ್​ ಮಾಡುವ ಫೀಚರ್​ ಇದರಲ್ಲಿದೆ.

ಫಿಟ್​ನೆಟ್​ಗೆ ಅನುಕೂಲಕರವಾಗಿ ಮಿ3ಐ ಬ್ಯಾಂಡ್​ ಅನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಟ್ರಾಕ್​ ಸ್ಟೆಪ್​, ಕ್ಯಾಲೊರಿಸ್​, ರನ್ನಿಂಗ್​, ಸೈಕ್ಲಿಂಗ್​, ಸ್ಲೀಪ್​ ಮೊನಿಟರ್​ ಫೀಚರ್​ ಅನ್ನು ಅಳವಡಿಸಿಕೊಂಡಿದೆ.ಮಿ 3ಐ ಬ್ಯಾಂಡ್​ ಅನ್ನು ಒಂದು ಬಾರಿ ಚಾರ್ಜ್​ ಮಾಡಿದರೆ 20 ದಿನಗಳವರೆಗೆ ಬಳಸಬಹುದಾಗಿದೆ. ಮಾರುಕಟ್ಟೆಗೆ ಪ್ರವೇಶಿಸಿರುವ ಈ ಬ್ಯಾಂಡ್​ ಬೆಲೆ 1,299 ರೂ. ಆಗಿದ್ದು, ಗ್ರಾಹಕರಿಗಾಗಿ ಮಿ.ಕಾಂ ವೆಬ್​ಸೈಟ್​ನಲ್ಲಿ ಮಾರಾಟ ನಡೆಸುತ್ತಿದೆ.

ಶಿಯೋಮಿ ಕಂಪೆನಿ  ಮಿ 1, ಮಿ2, ಮಿ3, ಮಿ4 ಸ್ಮಾರ್ಟ್​ಬ್ಯಾಂಡ್​ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಿ4 ಬ್ಯಾಂಡ್​ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಸಿತ್ತು. ಇದರ ಬೆಲೆ 2,299 ರೂ. ಆಗಿದೆ.  ಆದರೆ ಕಡಿಮೆ ದರ ಬ್ಯಾಂಡ್​ಗಳಿಗೆ ಹುಡುಕಾಟ ನಡೆಸುವ ಯುವ ಜನತೆಗೆಗಾಗಿ ಮಿ 3ಐ ಬ್ಯಾಂಡ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
First published: November 22, 2019, 7:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading