ಆ್ಯಪಲ್​ ಏರ್​ಪೋಡ್​ಗೆ ಪ್ರಬಲ ಪೈಪೋಟಿ: ಅಗ್ಗದ ಬೆಲೆಗೆ ಮೀ ಏರ್​ಡಾಟ್ಸ್​ ಬಿಡುಗಡೆ

ದುಬಾರಿ ಬೆಲೆಯ ಸ್ಮಾರ್ಟ್​ಫೋನ್​ಗಳ ಮೂಲಕ ಖ್ಯಾತಿಗಳಿಸಿರುವ ಆ್ಯಪಲ್​ ಕಂಪೆನಿಯೊಂದಿಗೆ ಪ್ರಬಲ ಪೈಪೋಟಿ ನಡೆಸಲು ಶಿಯೋಮಿ ಕಂಪೆನಿ ಮುಂದಾಗಿದೆ. ಇದೀಗ ಆ್ಯಪಲ್​ ಬಿಡುಗಡೆಗೊಳಿಸಿರುವ ಉತ್ಪನ್ನಗಳ ಮಾದರಿಯಲ್ಲೇ ಶಿಯೋಮಿ ಕೂಡ ನೂತನ ಮೊಬೈಲ್ ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

zahir | news18
Updated:January 10, 2019, 4:24 PM IST
ಆ್ಯಪಲ್​ ಏರ್​ಪೋಡ್​ಗೆ ಪ್ರಬಲ ಪೈಪೋಟಿ: ಅಗ್ಗದ ಬೆಲೆಗೆ ಮೀ ಏರ್​ಡಾಟ್ಸ್​ ಬಿಡುಗಡೆ
ಮೀ ಏರ್​ಡಾಟ್ಸ್​
zahir | news18
Updated: January 10, 2019, 4:24 PM IST
ಚೀನಾದ ಎಲೆಕ್ಟ್ರಾನಿಕ್ಸ್ ಕಂಪೆನಿ ಶಿಯೋಮಿ ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್​ಗಳನ್ನು ಪರಿಚಯಿಸಿ ಕಡಿಮೆ ಸಮಯದಲ್ಲೇ ಫೋನ್​ ಪ್ರಿಯರ ಮನಗೆದ್ದಿದ್ದರು. ಈ ಮೂಲಕ ಭಾರತೀಯ ಫೋನ್ ಮಾರುಕಟ್ಟೆಯಲ್ಲಿ ಆ್ಯಪಲ್​ ಕಂಪೆನಿಗೆ ಪ್ರಬಲ ಪೈಪೋಟಿ ನೀಡುವ ಸೂಚನೆ ನೀಡಿತ್ತು. ಈ ಹಿಂದೆ ಐಫೋನ್​ಗಳಲ್ಲಿರುವ ಕೆಲ ಫೀಚರ್​ಗಳನ್ನು ತನ್ನ ಮೀ ಸೀರೀಸ್​ ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿತ್ತು. ಇದೀಗ ಐಫೋನ್​ನ ದುಬಾರಿ ಏರ್​ಪೋಡ್​​ಗೆ ಸ್ಫರ್ಧಿಯಾಗಿ ಶಿಯೋಮಿ ಮೀ ಏರ್​ಡಾಟ್ಸ್​ ಇಯರ್​ ಫೋನ್​ನ್ನು ಬಿಡುಗಡೆ ಮಾಡಿದೆ.

ಆ್ಯಪಲ್​ನ ಏರ್​ಪೋಡ್ಸ್​ನಲ್ಲಿ ನೀಡಲಾಗಿರುವ ಎಲ್ಲ ಫೀಚರ್​ಗಳನ್ನು ಏರ್​ಡಾಟ್ಸ್​ನಲ್ಲಿ ನೀಡಲಾಗಿದ್ದು, ಈ ಇಯರ್​ಬಡ್ಸ್​ನ್ನು ಕೂಡ ಚಾರ್ಜರ್ ಬಾಕ್ಸ್​ನಲ್ಲಿರಿಸಿ ಚಾರ್ಜ್​ ಮಾಡಿಕೊಳ್ಳಬಹುದು. ಅದೇ ರೀತಿ ಏರ್​ಡಾಟ್ಸ್​ ಬಾಕ್ಸ್​ನ್ನು ಯುಎಸ್​ಬಿ ಟೈಪ್​ ಸಿ ಚಾರ್ಜರ್​ನಿಂದ ಚಾರ್ಜ್​ ಮಾಡಬೇಕಾಗುತ್ತದೆ. ಶಿಯೋಮಿಯ ಹೊಸ ಇಯರ್​ ಬಡ್ಸ್​​​ ಅನ್ನು ಆಂಡ್ರಾಯ್ಡ್​ ಮತ್ತು ಐಒಎಸ್​ ಸ್ಮಾರ್ಟ್​ಫೋನ್​ಗಳಲ್ಲಿ ಕನೆಕ್ಟ್​ ಮಾಡಿಕೊಳ್ಳಬಹುದು. ಇದರ ತೂಕ  ಕೇವಲ 5.8 ಗ್ರಾಂಗಳಷ್ಟಿದ್ದು, ಕಿವಿಗೂ ಭಾರವೆನಿಸುವುದಿಲ್ಲ.

7mm ನಿಯೋಡಿಮಿಯಮ್ ಕಬ್ಬಿಣದ ಬೋರಾನ್ ಮ್ಯಾಗ್ನೆಟಿಕ್ ಮತ್ತು ಟೈಟಾನಿಯಮ್-ಲೇಪಿತ ಡಯಾಫ್ರಾಮ್ ಡೈನಾಮಿಕ್ ರಿಂಗ್ ಸ್ಪೀಕರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಹಾಗೆಯೇ ಟಚ್​ ಮೂಲಕವೇ ಸಂಗೀತವನ್ನು ಆಲಿಸಲು ಮತ್ತು ಕರೆಗಳನ್ನು ಸ್ವೀಕರಿಸುವ ಸೌಲಭ್ಯ ಇದರಲ್ಲಿ ನೀಡಲಾಗಿದೆ. ಈ ಹಿಂದೆ ಶಿಯೋಮಿ ಪರಿಚಯಿಸಿದ್ದ ಹೆಡ್​ಫೋನ್​ ಮತ್ತು ಇಯರ್​ಫೋನ್​ಗಳಿಗಿಂತ ಏರ್​ಡಾಟ್ಸ್​ ಅತ್ಯುತ್ತಮ ಸುಧಾರಿತ ಧ್ವನಿ ಗುಣಮಟ್ಟ ಹೊಂದಿರುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ: ಪೇಟಿಎಂ, ಫೋನ್‌ ಪೇ, ಗೂಗಲ್ ಪೇ ಬಳಕೆದಾರರೇ ಎಚ್ಚರ: ಮೊಬೈಲ್​ ಮೂಲಕ ಹಣ ಪಾವತಿಸುವ​ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ

ಈ ನೂತನ ಇಯರ್​ ಫೋನ್​ನ್ನು ಕೇವಲ ಒಂದು ಗಂಟೆಯಲ್ಲಿ ಪೂರ್ಣ ಚಾರ್ಜ್ ಮಾಡಿಕೊಳ್ಳಬಹುದು. ಹಾಗೆಯೇ ಒಂದು ಬಾರಿ ಚಾರ್ಜ್​ ಮಾಡಿಕೊಂಡರೆ 10 ಗಂಟೆಗಳವರೆಗೆ ಬಳಸಬಹುದಾಗಿದೆ. ಸದ್ಯ ಇದನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದ್ದು ಇದರ ಬೆಲೆ 399 ಸಿಎನ್​ಐ. ಅಂದರೆ  ಭಾರತದಲ್ಲಿ ಇದರ ಬೆಲೆ 4 ಸಾವಿರ ಆಗಿರಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ದೇಶದಲ್ಲಿ ಐಫೋನ್ ಏರ್​ಪೋಡ್​ ಬೆಲೆ 12 ಸಾವಿರವಿದ್ದು,  ಮೀ ಏರ್​ಡಾಟ್ಸ್  ಬಿಡುಗಡೆಯಾದರೆ ಆ್ಯಪಲ್​ ಏರ್​ಪೋಡ್​​ ಬೇಡಿಕೆ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: IPL​ vs PSL: ಐಪಿಎಲ್​ನ ಒಬ್ಬ ಆಟಗಾರನಿಗೆ ಸಿಗುವ ಮೊತ್ತಕ್ಕೆ ಇಡೀ ಪಾಕ್ ತಂಡವನ್ನೇ ಖರೀದಿಸಬಹುದು..!
Loading...

ಏರ್​ಡಾಟ್ಸ್​ ವಿಶೇಷತೆ
ಕೇವಲ 5.8 ಗ್ರಾಂ ತೂಕ
ಸುಧಾರಿತ ಸೌಂಡ್ ಸಿಸ್ಟಂ
ವಾಟರ್​ ರಿಸಿಸ್ಟೆಂಟ್
ಆಟೋಮ್ಯಾಟಿಕ್ ಡಿಸ್ಕನೆಕ್ಟ್ ಸೌಲಭ್ಯ
ವೇಗದ ಚಾರ್ಜಿಂಗ್​ ವ್ಯವಸ್ಥೆ
10 ಗಂಟೆಗಳ ಚಾರ್ಜ್​ ಸಾಮರ್ಥ್ಯ
ಕಡಿಮೆ ಬೆಲೆ- 4000 ರೂ.

ಇದನ್ನೂ ಓದಿ: ಫೋನ್​ ಬ್ಯಾಟರಿ ಖಾಲಿಯಾಗಲು ಯಾವ ಆ್ಯಪ್ ಕಾರಣ ಎಂದು ತಿಳಿದುಕೊಳ್ಳಬೇಕೇ?

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...