ಬೆಸ್ಟ್​ ಕ್ಯಾಮೆರಾ ಫೋನ್​ ಶಿಯೋಮಿಯವರ ನೂತನ Mi A2


Updated:August 1, 2018, 5:41 PM IST
ಬೆಸ್ಟ್​ ಕ್ಯಾಮೆರಾ ಫೋನ್​ ಶಿಯೋಮಿಯವರ ನೂತನ Mi A2

Updated: August 1, 2018, 5:41 PM IST
ಚೀನಾದ ಸ್ಮಾರ್ಟ್​ಫೊನ್​ ಶಿಯೋಮಿ ಸಂಸ್ಥೆ ತನ್ನು ನೂತನ ಶಿಯೋಮಿ ಎಂಐ ಎ2 ಮೊಬೈಲ್​ನ್ನು ಅಮೇಜಾನ್​ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಎಂಐ ಎ2 ಕುರಿತು ತನ್ನ ಪೇಜ್​ನಲ್ಲಿ ಟೀಸರ್​ ಬಿಡುಗಡೆ ಮಾಡಿರುವ ಅಮೆಜಾನ್​ ಆ.8ರಂದು ಮಾರಾಟ ಮಾಡುವುದಾಗಿ ಘೋಷಿಸಿಕೊಂಡಿದೆ. ಈ ಹಿಂದೆ ಸ್ಪೈನ್​ನಲ್ಲಿ ಬಿಡುಗಡೆಯಾಗಿರುವ ಎಂಐ ಎ2ನ ಬೆಲೆ ಮಾತ್ರಾ ಇನ್ನೂ ಬಹಿರಂಗವಾಗಿಲ್ಲ. ಎಂಐ ಎ2 ಬೆಲೆಯನ್ನು ಬಿಡುಗಡೆ ದಿನದಂದೇ ತಿಳಿಸುವುದಾಗಿ ಶಿಯೋಮಿಯ ಭಾರತದ ಮುಖ್ಯಸ್ಥ ಮನು ಕುಮಾರ್​ ಜೈನ್​ ಹೇಳಿದ್ದರು.

ನೂತನವಾಗಿ ಬಿಡುಗಡೆಯಾಗುವ ಎಂಐ ಎ2 ಮೊಬೈಲ್​ಗೆ ಅಮೆಜಾನ್​ ವಿಶೇಷ ಪೇಜ್​ ಕೂಡಾ ಸಿದ್ಧಪಡಿಸಿದ್ದು, ಇದರಲ್ಲಿ ಮೊಬೈಲ್​ನ ಕ್ಯಾಮೆರಾ, ಪ್ರೊಸೆಸರ್​ ಮುಂತಾದ ಮಾಹಿತಿಗಳ ಕುರಿತು ಮಾಹಿತಿ ನೀಡಿದೆ.

ಇನ್ನು ಗ್ಯಾಡ್ಜಟ್​ 360ಯ ವರದಿ ಪ್ರಕಾರ, ಭಾರತೀಯ ಮಾರುಕಟ್ಟೆಗೆ ಶಿಯೋಮಿ 4GB RAM ಮತ್ತು 32GB ಆಂತರಿಕ ಮೆಮೊರಿ ಆವೃತ್ತಿ ಮೊಬೈಲ್​ನ್ನು ಬಿಡುಗಡೆ ಮಾಡುವುದಿಲ್ಲ. 32GB ಆವೃತ್ತಿ ಬದಲು 64 ಜಿಬಿ ಮತ್ತು 128 ಜಿಬಿ ಮೆಮೊರಿ ಆವೃತ್ತಿ ಮೊಬೈಲ್​ನ್ನು ಪರಿಚಯಿಸಲು ಶಿಯೋಮಿ ತೀರ್ಮಾನಿಸಿದೆ.

ಸ್ಪೈನ್​ನಲ್ಲಿ ಬಿಡುಗಡೆಯಾಗಿರುವ ಮೊಬೈಲ್​ನ ಮಾಹಿತಿ ಪ್ರಕಾರ, Mi A2 ಗೂಗಲ್​ನ ಆ್ಯಂಡ್ರಾಯ್ಡ್​ ಒನ್​ (ಆ್ಯಂಡ್ರಾಯ್ಡ್​ 8.1 ಓರಿಯೋ) ಆಪರೇಟಿಂಗ್​ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಮೊಬೈಲ್​ಗೆ ಸ್ನಾಪ್​ಡ್ರಾಗನ್​ 660 ಪ್ರೊಸೆಸರ್​ ಕೂಡಾ ಬೆಂಬಲ ನೀಡಲಿದೆ.

ಸೋನಿಯವರIMX486 12 ಮೆಗಾಪಿಕ್ಸೆಲ್​ ಕ್ಯಾಮೆರಾ, ಮತ್ತು ಸೋನಿಯವರ IMX376 20 ಎಂಪಿ ಸೆಕಂಡರಿ ಕ್ಯಾಮೆರಾ ವ್ಯವಸ್ಥೆ ಇದರಲ್ಲಿದ್ದು, ಮುಂಭಾಗದಲ್ಲೂ ಸೋನಿಯವರ IMX376 20 ಎಂಪಿ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. 3010mAh ಬ್ಯಾಟರಿ ಸಪೋರ್ಟ್​ ಕೂಡಾ ದೊರಕಲಿದೆ.

4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿರುವ ಮೊಬೈಲ್​ EUR 279 (ಅಂದಾಜು Rs. 22,500), ಹಾಗು 6GB RAM ಮತ್ತು 128GB ಮೆಮೊರಿಯ ಮೊಬೈಲ್​ಗೆ EUR 349 ( ಅಂದಾಜು Rs. 28,100) ಬೆಲೆ ನಿಗದಿ ಪಡಿಸಲಾಗಿದೆ.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ