ಇಂದು​ ಬಿಡುಗಡೆಯಾಗಲಿರುವ ನೂತನ ‘Xiaomi Mi 9T Pro‘ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ.?

XIAOMI MI 9T PRO; ನೂತನ ಸ್ಮಾರ್ಟ್​ಫೋನ್​ನಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಇದು F​/1.8 ಅಪಾರ್ಚರ್​​ಹೊಂದಿದೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

news18
Updated:June 12, 2019, 2:32 PM IST
ಇಂದು​ ಬಿಡುಗಡೆಯಾಗಲಿರುವ ನೂತನ  ‘Xiaomi Mi 9T Pro‘ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ.?
ಶಿಯೋಮಿ
  • News18
  • Last Updated: June 12, 2019, 2:32 PM IST
  • Share this:
ಚೀನಾದ ಪ್ರತಿಷ್ಠಿತ ಸ್ಮಾರ್ಟ್​ಫೋನ್​ ತಯಾರಿಕ ಕಂಪನಿಯಾದ ಶಿಯೋಮಿ ನೂತನ ಮಿ 9T ಪ್ರೊ ಸ್ಮಾರ್ಟ್​ಫೋನ್​ ಇಂದು ಬಿಡುಗಡೆ ಮಾಡುತ್ತಿದೆ. ಚೀನಾ ಈ ಮೊದಲು ಬಿಡುಗಡೆ ಮಾಡಿರುವ ರೆಡ್​ಮಿ K20 ಸರಣಿ ಫೋನ್​ಗಳ ಸುಧಾರಿತ ಸ್ಮಾರ್ಟ್​ಫೋನ್​ ಎಂದು ಹೇಳಲಾಗುತ್ತಿದ್ದು, ಮ್ಯಾಡ್ರಿಡ್​, ಮಿಲಾನ್​ ಮತ್ತು ಪ್ಯಾರಿಸ್​​ನಲ್ಲಿಂದು ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ.

ಶಿಯೋಮಿ 9T ಪ್ರೊ ಸ್ಮಾರ್ಟ್​ಫೋನ್​ 6.39 ಇಂಚಿನ ಡಿಸ್​ಪ್ಲೇ ಹೊಂದಿದ್ದು, 1080x​2340 ಪಿಕ್ಸೆಲ್​ ಹೊಂದಿದೆ. ಅಂತೆಯೇ, ಈ ಸ್ಮಾರ್ಟ್​ಫೋನ್​ 2.8GHz​ ಓಕ್ಟಾ ಕೋರ್​ ಸ್ನಾಪ್​ಡ್ರಾಗನ್​​ 855 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತಿದ್ದು, 6GB RAM​ ಅಳವಡಿಸಲಾಗಿದೆ.

ಇದನ್ನೂ ಓದು: ಲವ್​ ಬ್ರೇಕಪ್​ನಿಂದಾಗಿ ಬಾಟಲ್​ ಹಿಡಿದು ಪೀಬೋರ್ಡ್​ ಆದರೇ ಬಾಲಿವುಡ್ ನಟ ಶಾಹಿದ್ ಕಪೂರ್?

ನೂತನ ಸ್ಮಾರ್ಟ್​ಫೋನ್​ನಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಇದು F​/1.8 ಅಪಾರ್ಚರ್​​ಹೊಂದಿದೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಗ್ರಾಹಕರಿಗಾಗಿ ಇಂದು ಬಿಡುಗಡೆಯಾಗುತ್ತಿರುವ ಶಿಯೋಮಿ 9T ಪ್ರೊ ಸ್ಮಾರ್ಟ್​ಫೋನ್​ನಲ್ಲಿ 64GB ಸ್ಟೊರೇಜ್​​ ನೀಡಲಾಗಿದೆ. ಅಂತೆಯೇ, ಸ್ಮಾರ್ಟ್​ಫೋನ್​ 3G ಮತ್ತು 4G ನೆಟ್​ವರ್ಕ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಡ್ಯುಯೆಲ್​ ಸಿಮ್​ ಅಳವಡಿಸಬಹುದಾಗಿದೆ.

ಶಿಯೋಮಿ 9T  ಪ್ರೊನಲ್ಲಿ Wi-Fi 802.11 a/b/g/n​/ac, ಜೊತೆಗೆ ಬ್ಲೂಟೂತ್​ v5.00, USB ಟೈಪ್​​ C ಹೊಂದಿದೆ. ದೀರ್ಘಕಾಲದ  ಬಾಳ್ವಿಕೆಗಾಗಿ 4000mAh ಬ್ಯಾಟರಿಯನ್ನು ನೀಡಲಾಗಿದೆ.
First published: June 12, 2019, 2:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading