ತ್ರಿವಳಿ ಕ್ಯಾಮೆರಾವಿರುವ ನೂತನ ‘mi 9 SE‘ ಸ್ಮಾರ್ಟ್​ಫೋನ್​ ಬಿಡುಗಡೆ

ಸ್ನಾಪ್​​​ ಡ್ರಾಗನ್​ 712 ಪ್ರೊಸೆಸರ್​ ಹೊಂದಿರುವ mi 9SE ಸ್ಮಾರ್ಟ್​ಫೋನ್​ ಆ್ಯಂಡ್ರಾಯ್ಡ್​ 9.0ನಲ್ಲಿ ಕಾರ್ಯನಿರ್ವಹಿಸುತ್ತಿದೆ. 6GB RAM ಹೊಂದಿದೆ. ಅಲ್ಲದೆ, ಸೆಲ್ಫಿಗೆ ಯೋಗ್ಯವಾದ 20 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಲಾಗಿದೆ

ಶಿಯೋಮಿ ‘mi 9 SE‘​

ಶಿಯೋಮಿ ‘mi 9 SE‘​

 • News18
 • Last Updated :
 • Share this:
  ಚೀನಾದ ಪ್ರಸಿದ್ಧ ಸ್ಮಾರ್ಟ್​ಫೋನ್​ ತಯಾರಿಕಾ ಸಂಸ್ಥೆ ಶಿಯೋಮಿ ನೂತನ ‘mi 9 SE‘ ಹೆಸರಿನ ಸ್ಮಾರ್ಟ್​ಫೋನ್​ವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗ್ರಾಹಕರಿಗಾಗಿ ತಯಾರಿಸಿದ ವಿನೂತನ ಶೈಲಿಯ ಈ ಸ್ಮಾರ್ಟ್​ಫೋನ್​ ತ್ರಿವಳಿ ಕ್ಯಾಮೆರಾವನ್ನು ಹೊಂದಿದೆ.

  ಸ್ನಾಪ್​​​ ಡ್ರಾಗನ್​ 712 ಪ್ರೊಸೆಸರ್​ ಹೊಂದಿರುವ mi 9SE ಸ್ಮಾರ್ಟ್​ಫೋನ್​ ಆ್ಯಂಡ್ರಾಯ್ಡ್​ 9.0ನಲ್ಲಿ ಕಾರ್ಯನಿರ್ವಹಿಸುತ್ತಿದೆ. 6GB RAM ಹೊಂದಿದೆ. ಅಲ್ಲದೆ, ಸೆಲ್ಫಿಗೆ ಯೋಗ್ಯವಾದ 20 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಲಾಗಿದೆ​. ಹಿಂಭಾಗಗಕ್ಕೆ 48 ಮೆಗಾಪಿಕ್ಸೆಲ್​ + 8 ಮೆಗಾಪಿಕ್ಸೆಲ್​ + 13 ಮೆಗಾಪಿಕ್ಸೆಲ್​ ತ್ರಿವಳಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

  ಇನ್ನು ದೀರ್ಘಕಾಲದ ಬಳಕೆಗಾಗಿ 3070 mAh ಬ್ಯಾಟರಿ ಅಳವಡಿಸಲಾಗಿದ್ದು, 64 ಸ್ಟೊರೇಜ್​ ನೀಡಲಾಗಿದೆ. ಅಲ್ಲದೆ, ಮೆಮೊರಿಯನ್ನು ವಿಸ್ತರಿಸುವ ಅವಕಾಶವಿದೆ.

  ಶಿಯೋಮಿ ‘mi 9 SE‘​ ಮೊಬೈಲ್​ ವೈಶಿಷ್ಯಗಳು:

  ಡಿಸ್​​ಪ್ಲೇ: 5.97 ಇಂಚಿನ ಸ್ಯಾಮ್​ಸಂಗ್​ AMOLED ಡಿಸ್​​ಪ್ಲೇ

  ಕ್ಯಾಮೆರಾ: ಸೆಲ್ಫಿಗೆ ಯೋಗ್ಯವಾದ 20 ಮೆಗಾಫಿಕ್ಸೆಲ್ ಕ್ಯಾಮೆರಾ, ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್​ + 8 ಮೆಗಾಪಿಕ್ಸೆಲ್​ + 13 ಮೆಗಾಪಿಕ್ಸೆಲ್​ ತ್ರಿವಳಿ ಕ್ಯಾಮೆರಾ

  ಪ್ರೊಸೆಸರ್​: ಸ್ನಾಪ್​ ಡ್ರಾಗನ್​ 712 ಪ್ರೊಸೆಸರ್​

  RAM: 6GB RAM

  ಸ್ಟೋರೆಜ್​​: 128GB + 64GB

  ಬ್ಯಾಟರಿ: 3,070mAh

  ಅಂದಾಜು ಬೆಲೆ:  6GB RAM + 64GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ 21,200 ರೂ.

  6GB RAM +128GB ಸ್ಟೊರೇಜ್​​​​​ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ 24,350 ರೂ.
  First published: