ಬರುತ್ತಿದೆ ಶಿಯೋಮಿ ಹೊಸ ಮೊಬೈಲ್​, ಏನಿದೆ ಅಪ್​ಡೇಟ್​?


Updated:June 30, 2018, 3:41 PM IST
ಬರುತ್ತಿದೆ ಶಿಯೋಮಿ ಹೊಸ ಮೊಬೈಲ್​, ಏನಿದೆ ಅಪ್​ಡೇಟ್​?

Updated: June 30, 2018, 3:41 PM IST
ಅತ್ಯಂತ ಜನಪ್ರಿಯ ಸ್ಮಾರ್ಟ್​ಫೋನ್​ಗಳಲ್ಲಿ ಒಂದಾಗಿರುವ ಶಿಯೋಮಿ ಹೊಸ ಮೊಬೈಲ್​ವೊಂದನ್ನು ಬಿಡುಗಡೆ ಮಾಡಿದ್ದು, ಇದರೊಂದಿಗೆ ಉತ್ತಮ ಥೀಮ್​ ಹೊಂದಿರುವ ಬ್ಯಾಕ್​ಪ್ಯಾನೆಲ್​ ಮತ್ತು ಟಿಟ್ಯೂಲರ್ ಕ್ಯಾರೆಕ್ಟರ್ ಇರುವ ಟರ್‌ಕ್ವೈಸ್ 10,000 mAh ಪವರ್ ಬ್ಯಾಂಕ್‌ನ್ನು ಬಹುಮಾನವಾಗಿ ಗ್ರಾಹಕರಿಗೆ ನೀಡಲು ಸಂಸ್ಥೆ ನಿರ್ಧರಿಸಿದೆ.

ಶಿಯೋಮಿ MI 6X ಮತ್ತೊಂದು ಆವೃತ್ತಿಯಾಗಿ ಹ್ಯಾಟ್‌ಸ್ಯುನ್ ಮಿಕು ಎಂಬ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. 6GB RAM ಹಾಗು 64GB ಆಂತರಿಕ ಮೆಮೋರಿ ವ್ಯವಸ್ಥೆಯಿರುವ ಈ ಫೋನ್​ನಲ್ಲಿ 6Xನಲ್ಲಿರವ 5.99 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನೇ ಹೊಂದಿದೆ.

ಇತ್ತೀಚೆಗಷ್ಟೇ 6X ಕಪ್ಪು, ನೀಲಿ, ಕೆಂಪು, ಗೋಲ್ಡ್, ಮತ್ತು ರೋಸ್ ಗೋಲ್ಡ್ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಈಗ ಬಿಡುಗಡೆಯಾಗಿರುವ ಹ್ಯಾಟ್​ಸ್ಯುನ್​ ಹಸಿರು ಬಣ್ಣದಲ್ಲಿ ಲಭ್ಯವಿದ್ದು, Mi 6X ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಹೊಂದಿರಲಿದೆ. ಆಂಡ್ರಾಯ್ಡ್‌ ಓರಿಯೋ 8.0 ಒಎಸ್ ಬೆಂಬಲಿತ MIUI 9.5‌ನಿಂದ ಕಾರ್ಯನಿರ್ವಹಿಸಲಿದೆ.

4X RAM ಹೊಂದಿರುವ ಈ ಮೊಬೈಲ್​ 4GB/ 64GB, 6GB/64GB ಮmತ್ತು 6GB/128GB ಮೆಮೊರಿ ವ್ಯವಸ್ಥೆಯನ್ನು ಹೊಂದಿಕೊಂಡು ಮಾರುಕಟ್ಟೆಗೆ ಪ್ರವೇಶಿಲಿದೆ. ಇನ್ನು ಕ್ಯಾಮೆರಾ ಪ್ರಿಯರಿಗೆ ಹೆಚ್ಚು ಮನ್ನಣೆ ನೀಡಿರುವ ಶಿಯೋಮಿ, Mi 6Xನಲ್ಲಿ 20MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಕೃತಕ ಬುದ್ಧಿಮತ್ತೆಯ ಅನೇಕ ಫೀಚರ್ಸ್ ಒಳಗೊಂಡಿದೆ. ಹಿಂಬದಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, 12MP ಮತ್ತು 20MP ಲೆನ್ಸ್‌ ಹೊಂದಿದೆ. f/1.75 ಮತ್ತು f/1.8 ಅಪಾರ್ಚರ್ ವ್ಯವಸ್ಥೆ ಮಾಡಲಾಗಿದೆ.

ಚೀನಾ ಬೆಲೆ : 2099 ಯನ್
ಈ ಬೆಲೆಯನ್ನು ಭಾರತೀಯ ರೂಪಾಯಲ್ಲಿ ಹೋಲಿಸದರೆ ಈ ಮೊಬೈಲ್​ ಸುಮಾರು 21 ಸಾವಿರ ರೂ. ಬೆಲೆ ಬಾಳುತ್ತದೆ.
First published:June 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ