ಕೇವಲ 4.ರೂಗೆ ಶಿಯೋಮಿ ರೆಡ್​ಮಿ ಮೊಬೈಲ್​ ಮತ್ತು ಟಿವಿ ಪಡೆಯುವುದು ಹೇಗೆ?

news18
Updated:July 10, 2018, 2:22 PM IST
ಕೇವಲ 4.ರೂಗೆ ಶಿಯೋಮಿ ರೆಡ್​ಮಿ ಮೊಬೈಲ್​ ಮತ್ತು ಟಿವಿ ಪಡೆಯುವುದು ಹೇಗೆ?
news18
Updated: July 10, 2018, 2:22 PM IST
ನವದೆಹಲಿ: ಅತ್ಯಂತ ಕಡಿಮೆ ಬಜೆಟ್​ನಲ್ಲಿ ಹೆಚ್ಚಿಜನ ಫೀಚರ್​ಗಳನ್ನು ನೀಡಿ ಫೇಮಸ್​ ಆಗಿರುವ ಚೀನಾದ ರೆಡ್​ಮಿ ಶಿಯೋಮಿ ಮೊಬೈಲ್​ ತನ್ನ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಇಂದಿನಿಂದ (ಜು.10) ಮೂರು ದಿನಗಳ ಭರ್ಜರಿ ಆಫರ್​ ಘೋಷಿಸಿದೆ.

ಸಂಜೆ ನಾಲ್ಕು ಗಂಟೆಗೆ ಫ್ಲಾಶ್​ ಸೇಲ್​ ನೀಡಲು ಮುಂದಾಗಿರುವ ಶಿಯೋಮಿ ಕೇವಲ 4 ರೂ.ಗೆ 8999 ರೂ. ಬೆಲೆ ಬಾಳುವ ರೆಡ್ಮಿ ರೆಡ್​ಮಿ Y1 ಮೊಬೈಲ್​ ಹಾಗೂ 44,999 ರೂ ಬೆಲೆಯ Mi LED ಸ್ಮಾರ್ಟ್​ ಟಿವಿ 4 55ನ್ನು ಮಾರಾಟಕ್ಕೆ ಇಟ್ಟಿದೆ. ಇನ್ನುಳಿದಂತೆ ತನ್ನ ಹಲಾವರು ಮೊಬೈಲ್​ ಹಾಗೂ ಇತರೇ ಪ್ರಾಡೆಕ್ಟ್​ಗಳು ಅತ್ಯಂತ ಕಡಿಮೆ ಬೆಲಯಲ್ಲಿ ಮಾರಾಟಕ್ಕಿದೆ.

ಇದರೊಂದಿಗೆ ವಿಶೇಷ ಡಿಸ್ಕೌಂಟ್, ಎಂಐ ವಾರ್ಷಿಕ ಬ್ಲಾಕ್‌ಬ್ಲಾಸ್ಟರ್ ಸೇಲ್, ಬ್ಲಿಂಕ್ ಆ್ಯಂಡ್ ಮಿಸ್ ಡೀಲ್, ವಿಶೇಷ ಕೂಪನ್ ಹಾಗೂ ಸೀಮಿತ ಆಫರ್‌ಗಳನ್ನು ಪ್ರಕಟಿಸಿದೆ.

ಬ್ಲಿಂಕ್​ ಅಂಡ್​ ಮಿಸ್​ ಡೀಲ್​

Mi Body Composition Scale + Mi Band 2 ನ್ನು 1,999 ರೂಗೆ ಮಾರಾಟಕ್ಕಿಟ್ಟಿದೆ, ಇದರ ಮೂಲ ಬೆಲೆ 3,999 ರೂ. ಇದರೊಂದಿಗೆ ರೆಡ್​ಮಿ Note 5 + Mi VR Play 2 ಕೂಡಾ ಬ್ಲಿಂಕ್​ ಆ್ಯಂಡ್​ ಮಿಸ್​ ಡೀಲ್​ನಲ್ಲಿ ಮಾರಾಟಕ್ಕಿದೆ.

12 ಪಿಎಂ ಬ್ಲಾಕ್​ಬಸ್ಟರ್​
ಮಿ ಎಲ್​ಇಡಿ ಸ್ಮಾರ್ಟ್​ ಟಿವಿ 13,999 ರೂನಿಂದ ಮಾರಾಟವಾಗುತ್ತಿದೆ, ಇದರೊಂದಿಗೆ ರೆಡ್​ ಮಿ ನೋಟ್​ 5 ಪ್ರೊ ಕೂಡಾ 14,999 ರೂ. ಗೆ ಮಾರಾಟವಾಗುತ್ತಿದೆ.
Loading...

ಟ್ರಾವೆಲ್​ ಬ್ಯಾಕ್​ಪ್ಯಾಕ್​, ಫಿಟ್​ಬಿಟ್​ ಸೇರಿದಂತೆ ಹಲವಾರು ಉಪಕರಣಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಮಾರಾಟ

ನಾಲ್ಕನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಶಿಯೋಮಿ ಈ ಎಲ್ಲಾ ಆಫರ್​ಗಳನ್ನು ತನ್ನ ಮೂಲ ತಾಣ ಶಿಯೋಮಿ.ಕಾಂನಲ್ಲೇ ನಡೆಯಲಿದೆ.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ