HOME » NEWS » Tech » XIAOMI MI 11 LAUNCH LIKELY MONDAY COULD BE PRICED AROUND RS 70000 HG

ಶಿಯೋಮಿ Mi 11 ಸ್ಮಾರ್ಟ್​ಫೋನ್​ ನಾಳೆ ಮಾರುಕಟ್ಟೆಗೆ; ಬೆಲೆ?

Xiaomi Mi 11: ನೂತನ ಶಿಯೋಮಿ Mi 11 ಸ್ಮಾಟ್​ಫೋನ್​ ಬೆಲೆಗೆ ತಕ್ಕಂತೆ ಫೀಚರ್ಸ್​ ಹೊಂದಿದೆ ಎನ್ನಲಾಗಿದೆ. ಸ್ಮಾರ್ಟ್​ಫೋನ್​ ಮುಂಭಾಗದಲ್ಲಿ 6.81 ಇಂಚಿನ E4 ಅಮೋಲ್ಡ್​​ ಡಿಸ್​ಪ್ಲೇ ಜೊತೆಗೆ ಕ್ಯೂಹೆಚ್​ಡಿ+ ರೆಸಲ್ಯೂಶನ್​ ನೀಡಿದೆ. ಕ್ವಾಲ್​​ಕಾಮ್​ ಸ್ನಾಪ್​​ಡ್ರಾಗನ್​ 888 ಎಸ್​​ಒಸಿಯಿಂದ ಕಾರ್ಯನಿರ್ವಹಿಸುತ್ತಿದೆ.

news18
Updated:February 7, 2021, 2:32 PM IST
ಶಿಯೋಮಿ Mi 11 ಸ್ಮಾರ್ಟ್​ಫೋನ್​ ನಾಳೆ ಮಾರುಕಟ್ಟೆಗೆ; ಬೆಲೆ?
Xiaomi Mi 11
  • News18
  • Last Updated: February 7, 2021, 2:32 PM IST
  • Share this:
ಚೀನಾ ಮೂಲದ ಶಿಯೋಮಿ Mi 11 ಹೆಸರಿನ ಸ್ಮಾರ್ಟ್​ಫೋನನ್ನು ಉತ್ಪಾದಿಸಿದ್ದು, ಫೆಬ್ರವರಿ 8ರಂದು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ, ಪ್ರಾರಂಭದಲ್ಲಿ ಚೀನಾದಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದು, ಆ ಬಳಿಕ ಎಲ್ಲಾ ಮಾರುಕಟ್ಟೆಗೆ ಪರಿಚಯಿಸಲು ಚಿಂತನೆ ನಡೆಸುತ್ತಿದೆ.

ಅಂದಹಾಗೆಯೇ, ನೂತನ ಶಿಯೋಮಿ Mi 11 ಸ್ಮಾಟ್​ಫೋನ್​ ಬೆಲೆಗೆ ತಕ್ಕಂತೆ ಫೀಚರ್ಸ್​ ಹೊಂದಿದೆ ಎನ್ನಲಾಗಿದೆ. ಸ್ಮಾರ್ಟ್​ಫೋನ್​ ಮುಂಭಾಗದಲ್ಲಿ 6.81 ಇಂಚಿನ E4 ಅಮೋಲ್ಡ್​​ ಡಿಸ್​ಪ್ಲೇ ಜೊತೆಗೆ ಕ್ಯೂಹೆಚ್​ಡಿ+ ರೆಸಲ್ಯೂಶನ್​ ನೀಡಿದೆ. ಕ್ವಾಲ್​​ಕಾಮ್​ ಸ್ನಾಪ್​​ಡ್ರಾಗನ್​ 888 ಎಸ್​​ಒಸಿಯಿಂದ ಕಾರ್ಯನಿರ್ವಹಿಸುತ್ತಿದೆ.

Mi 11 ಸ್ಮಾರ್ಟ್​ಫೋನ್​ ತ್ರಿವಳಿ ಕ್ಯಾಮೆರಾ ಸೆಟಪ್​​​ ಹೊಂದಿದ್ದು, ಸ್ಮಾಟ್​ಫೋನ್​ ಹಿಂಭಾಗದಲ್ಲಿ 108 ಮೆಗಾಫಿಕ್ಸೆಲ್​ ಪ್ರೈಮರಿ ಸೆನ್ಸಾರ್​​ ಜೊತೆಗೆ 13 ಮೆಗಾಫಿಕ್​ಸೆಲ್​​ ಅಲ್ಟ್ರಾ ವೈಡ್​ ಆ್ಯಂಗಲ್​ ಸೆನ್ಸಾರ್​ ಮತ್ತು 5 ಮೆಗಾಫಿಕ್ಸೆಲ್​​ ಮಾಕ್ರೊ ಸೆನ್ಸಾರ್​​ ನೀಡಿದೆ.

ಇನ್ನು ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ. Mi 11 ಸ್ಮಾರ್ಟ್​ಫೋನ್​ 4,600 mAh​ ಬ್ಯಾಟರಿ ಹೊಂದಿದ್ದು, ಟರ್ಬೊ ಚಾರ್ಜ್​ 55ವ್ಯಾಟ್​​ ಮತ್ತು ವೈರ್​ಲೆಸ್​ ಚಾರ್ಜ್​ ಆಯ್ಕೆಯನ್ನು ನೀಡಿದೆ.
Youtube Video

ಬೆಲೆ:

ಶಿಯೋಮಿ ಪರಿಚಯಿಸುತ್ತಿರುವ 8GB +128GB ಸ್ಟೊರೇಜ್​ ಆಯ್ಕೆಯುಳ್ಳ Mi 11 ಸ್ಮಾರ್ಟ್​ಫೋನಿನ ಚೀನಾದ ​ಬೆಲೆ (VNY 3,999)45,300 ರೂ ಎಂದು ಹೇಳಲಾಗುತ್ತಿದೆ. 8GB+256GB ಆಯ್ಕೆಯ ಸ್ಮಾರ್ಟ್​ಫೋನಿನ ಬೆಲೆ 48,700 ರೂ (CNY 4,299). ಅಂತೆಯೇ 12GB+256GB ವೇರಿಯಂಟ್​ ಬೆಲೆ (CNY 4,699) 53,200 ರೂ. ಇನ್ನು ಯುರೋಪ್​ನಲ್ಲಿ Mi 11 ಬೆಲೆ 70 ಸಾವಿರ ಇರಲಿದೆ ಎಂದು ಅಂದಾಜಿಸಲಾಗಿದೆ.
Published by: Harshith AS
First published: February 7, 2021, 2:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories