Xiaomi Mi 10: ದೇಶಿಯ ಮಾರುಕಟ್ಟೆಗೆ Mi 10 ಸ್ಮಾರ್ಟ್​ಫೋನ್​; 12GB ರ‍್ಯಾಮ್​ 256GB ಸ್ಟೊರೇಜ್!​

Xiaomi Mi 10 to Launch: ಶಿಯೋಮಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ಮಿ 10 ಸ್ಮಾರ್ಟ್​ಪೋನ್ ಅನ್ನು​ ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಆನಂತರ ಕೊರೋನಾ ವೈರಸ್​ ಅವಾಂತರದಿಂದಾಗಿ ಉಳಿದ ಮಾರುಟಕಟ್ಟೆಗೆ ಪರಿಚಯಿಸಲು ಹಾಕಿಕೊಂಡಿದ್ದ ಕಾರ್ಯಕ್ರಮವನ್ನು ರದ್ದು ಮಾಡಿತ್ತು. ಇಂದು ಮಿ 10 ಸ್ಮಾರ್ಟ್​ಫೋನ್​ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

news18-kannada
Updated:May 8, 2020, 2:43 PM IST
Xiaomi Mi 10: ದೇಶಿಯ ಮಾರುಕಟ್ಟೆಗೆ Mi 10 ಸ್ಮಾರ್ಟ್​ಫೋನ್​; 12GB ರ‍್ಯಾಮ್​ 256GB ಸ್ಟೊರೇಜ್!​
ಶಿಯೋಮಿ ಮಿ 10
  • Share this:
ಶಿಯೋಮಿ ಸಂಸ್ಥೆ ಸಿದ್ಧಪಡಿಸಿದ ಮಿ 10 ಸ್ಮಾರ್ಟ್​ಫೋನ್​ ಇಂದು ಭಾರತದಲ್ಲಿ ಬಿಡುಗಡೆಯಾಗಿದೆ. ಆನ್​ಲೈನ್​​ ಇವೆಂಟ್​  ಮೂಲಕ ನೂತನ ಸ್ಮಾರ್ಟ್​ಫೋನ್​ ಅನ್ನು ದೇಶಿಯ ಮಾರುಕಟ್ಟೆಗೆ ಶಿಯೋಮಿ ಸಂಸ್ಥೆ ಪರಿಚಯಿಸಿದೆ.

ಶಿಯೋಮಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ಮಿ 10 ಸ್ಮಾರ್ಟ್​ಪೋನ್ ಅನ್ನು​ ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಆನಂತರ ಕೊರೋನಾ ವೈರಸ್​ ಅವಾಂತರದಿಂದಾಗಿ ಉಳಿದ ಮಾರುಟಕಟ್ಟೆಗೆ ಪರಿಚಯಿಸಲು ಹಾಕಿಕೊಂಡಿದ್ದ ಕಾರ್ಯಕ್ರಮವನ್ನು ರದ್ದು ಮಾಡಿತ್ತು. ಇಂದು ಮಿ 10 ಸ್ಮಾರ್ಟ್​ಫೋನ್​ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಶಿಯೋಮಿ ಮಿ 10 ವಿಶೇಷತೆ:

ನೂತನ ಸ್ಮಾಟ್​ಫೋನ್ ಮೇಲ್ನೊಟಕ್ಕೆ​ ಮಿ 10 ಪ್ರೊ ಹೋಲಿಕೆಯನ್ನು ಹೊಂದಿದ್ದು, 6.67 ಇಂಚಿನ 1080p ಅಮೋಲ್ಡ್​ ಡಿಸ್​ಪ್ಲೇ ಹೊಂದಿದೆ. ಇದರಲ್ಲಿ ಸ್ನಾಪ್​ಡ್ರ್ಯಾಗನ್​ 865 ಚಿಪ್​ಸೆಟ್​ ಅಳವಡಿಸಲಾಗಿದೆ. ಜೊತೆಗೆ 5G ನೆಟ್​ವರ್ಕ್​ ಸಪೋರ್ಟ್​​ ಹೊಂದಿದೆ. ಇನ್ನು 12GB  LPDDR5 RAM​​​  ಮತ್ತು 256GB UFS​ ಸ್ಟೊರೇಜ್​ ಆಯ್ಕೆಯನ್ನುನೀಡಿದೆ.

ಕ್ಯಾಮೆರಾ:

ಮಿ 10 ಸ್ಮಾರ್ಟ್​ಫೋನ್​​ 108 ಮೆಗಾಫಿಕ್ಸೆಲ್​ ಕ್ಯಾಮೆರಾ 1/1.33 ಇಂಚು OIS​ ಸೆನ್ಸಾರ್​, 13 ಮೆಗಾಫಿಕ್ಸೆಲ್​​​​ ಅಲ್ಟ್ರಾ ವೈಡ್​​​​ ಕ್ಯಾಮೆರಾ, ಇದರ ಜೊತೆಗೆ 2 ಮೆಗಾಫಿಕ್ಸೆಲ್​​​ ಮ್ಯಾ​ಕ್ರೊ ಸೆನ್ಸಾರ್​​ ಮತ್ತು 2 ಮೆಗಾಫಿಕ್ಸೆಲ್​​​​​​ ಡೆಪ್ತ್​​​ ಸೆನ್ಸಾರ್​​ ನೀಡಿದೆ, ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಿದೆ.

ಬ್ಯಾಟರಿ:ಶಿಯೋಮಿ ಮಿ 10 ಸ್ಮಾರ್ಟ್​ಫೋನ್​​ 4,780mAh​​ ಬ್ಯಾಟರಿಯನ್ನು ಹೊಂದಿದೆ. ಇದರ ಜೊತೆಗೆ 30ವ್ಯಾಟ್​​​ ಫಾಸ್ಟ್​​ ವೈರ್​ ಚಾರ್ಜರ್​​​ ಮತ್ತು ವೈರ್​​ಲೆಸ್​ ಚಾರ್ಜರ್​ ಆಯ್ಕೆಯನ್ನು ನೀಡಿದೆ.

ಮಿ10 ಬೆಲೆ:

ಶಿಯೋಮಿ ಮೂರು ವೆರಿಯಂಟ್​ಗಳಲ್ಲಿ ಮಿ 10 ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡಿದೆ. 8GB RAM ಮತ್ತು 128GB ಸ್ಟೊರೇಜ್​​ ಆಯ್ಕೆಯ ಸ್ಮಾರ್ಟ್​ಫೋನ್​  ಬೆಲೆ 41 ಸಾವಿರ ರೂ. ಇರಲಿದೆ.  8GB RAM ಮತ್ತು 256GB ಸ್ಟೊರೇಜ್​​ ಹೊಂದಿರುವ ಮಿ 10 ಬೆಲೆ 44 ಸಾವಿರ ರೂಪಾಯಿ. ಅಂತೆಯೇ 12GB RAM​ ಮತ್ತು 256GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ 48 ಸಾವಿರ ರೂಪಾಯಿ ಎಂದು ಶಿಯೋಮಿ ಸಂಸ್ಥೆ ತಿಳಿಸಿದೆ.

ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ 300ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಊಟ ಕೊಟ್ಟ ರಾಗಿಣಿ!

First published: May 8, 2020, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading