ಶಿಯೋಮಿಯ ಈ ಸ್ಪೀಕರ್​ ಬೆಲೆ ಕೇವಲ RS 1,499/-


Updated:June 22, 2018, 1:36 PM IST
ಶಿಯೋಮಿಯ ಈ ಸ್ಪೀಕರ್​ ಬೆಲೆ ಕೇವಲ RS 1,499/-

Updated: June 22, 2018, 1:36 PM IST
ನವದೆಹಲಿ: ಈಗಾಗಲೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್​ಫೊನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಖ್ಯಾತಿ ಗಳಿಸಿರುವ ಚೀನಾ ಮೂಲದ ಶಿಯೋಮಿ ಇದೀಗ ಅತ್ಯಂತ ಕಡಿಮೆ ಬೆಲೆಗೆ ಒಂದು ಸ್ಥಳದಿಂದ ಬೇರೆಡೆಗೆ ಸಾಗಿಸಬಹುದಾದ ಸ್ಪೀಕರ್​ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಗುರುವಾರದಂದು ಶಿಯೋಮಿ ಸಂಸ್ಥೆ  Mi ಪಾಕೆಟ್ ಸ್ಪೀಕರ್ 2 ವನ್ನು ಟೆಕ್​ ಮಾರುಕಟ್ಟೆಗೆ ಪರಿಚಯ ಮಾಡಿದ್ದು,  ಇದು ಗಾತ್ರದಲ್ಲಿ ಚಿಕ್ಕದಾದರೂ ಸಹ ಉತ್ತಮ ಸೌಂಡ್ ಕ್ವಾಲಿಟಿಯನ್ನು ಹೊಂದಿದೆ.

ಕಾರ್ಯ ನಿರ್ವಹಣೆ
ಶಿಯೋಮಿ Mi ಪಾಕೆಟ್ ಸ್ಪೀಕರ್ 2 ಬ್ಲೂಟೂತ್​ ಮೂಲಕ ಕಾರ್ಯ ನಿರ್ವಹಿಸುತ್ತದೆ. 10 ಮೀಟರ್​ ದೂರದ ವರೆಗೂ ನೆಟ್​ವರ್ಕ್​ ಎಳೆಯುವ ಸಾಮರ್ಥ್ಯ ಈ ಸ್ಪೀಕರ್​ನಲ್ಲಿ ಲಭ್ಯವಿದ್ದು, ಬ್ಲೂಟೂತ್​ 4.1 ನಲ್ಲಿ ಕಾರ್ಯನಿರ್ವಹಿಸುವ ಮೊದಲ ಪಾಕೆಟ್ ಸರಣಿಯ ಸ್ಪೀಕರ್ ಇದಾಗಿದೆ. ಜೂ.21ರಿಂದ ಮಿ. ಕಾಮ್ ನಲ್ಲಿ ಮಾತ್ರವೇ ಮಾರಾಟವಾಗುತ್ತದೆ. .

ಬ್ಯಾಟರಿ ಕುರಿತು
Mi ಪಾಕೆಟ್ ಸ್ಪೀಕರ್ 2 ನಲ್ಲಿ 1,200 mAh ಬ್ಯಾಟರಿ ವ್ಯವಸ್ಥೆಯಿದ್ದು, ಒಂದು ಬಾರಿ ಚಾರ್ಜ್​ ಮಾಡಿದರೆ ಸತತ ಏಳುಗಂಟೆಗಳ ಕಾಲ ಈ ಸ್ಪೀಕರ್​ನ್ನು ಬಳಕೆ ಮಾಡಬಹುದು.


Loading...

ಸಂಭಾಷಣೆಗೂ ಸೈ
ಈ ಸ್ಪೀಕರ್​ನಲ್ಲಿ ಮೈಕ್ರೋಫೋನ್​ನ್ನು ಅಳವಡಿಸಲಾಗಿದ್ದು, ಕರೆಗಳ ಮೂಲಕ ಸಂಭಾಷಣೆ ನಡೆಸಲು ಈ ಸ್ಪೀಕರ್​ ಸೂಕ್ತವಾಗಿದೆ. ಅತ್ಯಂತ ಸರಳವಾಗಿ ಈ ಸಾಧನವನ್ನು ಗ್ರಾಹಕರು ಬಳಕೆ ಮಾಡಬಹುದು ಎಂದು ಶಿಯೋಮಿ ಸಂಸ್ಥೆ ಹೇಳಿಕೊಂಡಿದೆ.

ಬಣ್ಣ ಮತ್ತು ಬೆಲೆ
ಶಿಯೋಮಿ Mi ಪಾಕೆಟ್ ಸ್ಪೀಕರ್ 2 ಬ್ಲಾಕ್ ಮತ್ತು ವೈಟ್ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ. ಇದರ ಬೆಲೆ 1,499, ಇತರೇ ಬ್ಲೂಟೂತ್​ ಸ್ಪೀಕರ್​ಗಳಿಗೆ ಹೋಲಿಸಿದರೆ ಶಿಯೋಮಿಯ ಈ ಸ್ಪೀಕರ್​ ಅತ್ಯಂತ ಕಡಿಮೆ ದರಕ್ಕೆ ದೊರೆಯುತ್ತದೆ.
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...