ರೆಡ್ಮಿ ವಾಚ್ ಚೀನಾದಲ್ಲಿ ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ಈಗ ಶಿಯೋಮಿ ಕಂಪನಿ ಮಿ ವಾಚ್ ಲೈಟ್ ಅನ್ನು ಪರಿಚಯಿಸಿದೆ.
ನೂತನ ವಾಚ್ ರೆಡ್ಮಿ ವಾಚ್ ಹೋಲಿಕೆಯಂತಿದ್ದು, ಸ್ವಾರ್ ವಿನ್ಯಾಸದಲ್ಲಿದೆ. ಪಿಂಕ್, ಐವೊರಿ, ಕಪ್ಪು, ಆಕಾಶ ನೀಲಿ ಮತ್ತು ಒಲೈವ್ ಬಣ್ಣದಲ್ಲಿ ಪರಿಚಯಿಸಿದೆ.
ಮಿ ವಾಚ್ ಲೈಟ್ 1.4 ಇಂಚಿನ ಡಿಸ್ಪ್ಲೇ ಹೊಂದಿದ್ದು, 320ಎಕ್ಸ್320 ರೆಸಲ್ಯೂಶನ್ ಹೊಂದಿದೆ. ಫಿಟ್ನೆಸ್ಗೆ ಯೋಗ್ಯವಾದ ವಾಚ್ ಇದಾಗಿದ್ದು, ಎದೆಬಡಿತ ನೋಡಬಹುದಾಗಿದೆ. ಜೊತೆಗೆ ಸ್ಪೋರ್ಟ್ಸ್ ಮೋಡ್ ನೀಡಲಾಗಿದೆ. ಓಟ, ಸೈಕ್ಲಿಂಗ್, ಈಜಾಡಲು ಬಳಸಬಹುದಾಗಿದೆ.
ನೀರಿನಿಂದ ರಕ್ಷಿಸುವಂತೆ ವಾಚ್ ವಿನ್ಯಾಸಗೊಳಿಸಲಾಗಿದೆ. ಮಾತ್ರವಲ್ಲದೆ, ನಿದ್ದೆ ಮತ್ತು ಉಸಿರಾಟದ ವ್ಯಾಯಮ ಮಾಡಬಹುದಾದ ಫೀಚರ್ ಅನ್ನು ಇದರಲ್ಲಿ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ