HOME » NEWS » Tech » XIAOMI LAUNCHES FIRST FOLDABLE MI MIX FOLD WITH LIQUID CAMERA LENS HG

ಕೇವಲ 37 ನಿಮಿಷದಲ್ಲಿ ಚಾರ್ಜ್​ ಆಗುತ್ತದೆ ಶಿಯೋಮಿ Mi Mix ​ಮಡಚುವ​ ಸ್ಮಾರ್ಟ್​ಫೋನ್​; ಬೆಲೆ?

Xiaomi Mi Mix Fold: ತ್ರಿವಳಿ ಕ್ಯಾಮೆರಾವನ್ನು ಈ ಸ್ಮಾರ್ಟ್​ಫೋನ್​ ಹೊಂದಿದೆ. 108 ಮೆಗಾಫಿಕ್ಸೆಲ್​ ಸ್ಯಾಮ್​ಸಂಗ್​ ಹೆಚ್​ಎಮ್​ಕೆ ಸೆನ್ಸಾರ್​ ಮತ್ತು 13 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​ ಆ್ಯಂಗಲ್​ ಲೆನ್ಸ್​ ನೀಡಲಾಗಿದೆ.

news18-kannada
Updated:March 31, 2021, 10:56 AM IST
ಕೇವಲ 37 ನಿಮಿಷದಲ್ಲಿ ಚಾರ್ಜ್​ ಆಗುತ್ತದೆ ಶಿಯೋಮಿ Mi Mix ​ಮಡಚುವ​ ಸ್ಮಾರ್ಟ್​ಫೋನ್​; ಬೆಲೆ?
Mi Mix Fold
  • Share this:
ಚೀನಾ ಮೂಲದ ಸ್ಮಾರ್ಟ್​ಫೋನ್​ ತಯಾರಿಕಾ ಕಂಪನಿಯಾದ ಶಿಯೋಮಿ ಇದೀಗ ಮಡಚುವ ಸ್ಮಾರ್ಟ್​ಫೋನ್​ ಅನ್ನು ಉತ್ಪಾದಿಸುತ್ತಿದೆ.  ಮಿ ಮಿಕ್ಸ್​ ಫೋಲ್ಡ್​ ಹೆಸರಿನ ಸ್ಮಾರ್ಟ್​ಫೋನನ್ನು ತಯಾರಿಸುತ್ತಿದ್ದು, ಸ್ಯಾಮ್​ಸಂಗ್​ ಗ್ಯಾಲಕ್ಸಿ ಫೋಲ್ಡ್​ ನಂತಹ ವಿನ್ಯಾಸವನ್ನು ಹೊಂದಿದೆ.

ಮಿ ಮಿಕ್ಸ್​ ಫೋಲ್ಡ್​ ಸ್ಮಾರ್ಟ್​ಫೋನ್​ 8.01 ಇಂಚಿನ 4:3 ಒಎಲ್​ಇಡಿ ಡಿಸ್​ಪ್ಲೇ  ಹೊಂದಿದ್ದು, ಡಾಲ್ಬಿ ವಿಷನ್​ ಹೆಚ್​ಡಿಆರ್​ ಸಪೋರ್ಟ್​​ ಹೊಂದಿದೆ. ಇದರಲ್ಲಿ ಹರ್ಮನ್​ ಕರ್ಡೊನ್​ ಟ್ಯೂನ್ಡ್​ ಸ್ಪೀಕರ್​ ಅಳವಡಿಸಲಾಗಿದೆ. ಜೊತೆಗೆ 3ಡಿ ಪ್ಯಾಂಡೆಮಿಕ್​ ಸೌಂಡ್​ ನೀಡಲಾಗಿದೆ.

ಅಂದಹಾಗೆಯೇ ಶಿಯೋಮಿ ಪರಿಚಯಿಸುತ್ತಿರುವ ಈ ಮಡಚುನ ಫೋನ್​ ಲಿಕ್ವಿಡ್​ ಲೆನ್ಸ್​ ಕ್ಯಾಮರಾ ಹೊಂದಿದೆ. 12GB RAM​ +256GB ಸ್ಟೊರೇಜ್​ ಆಯ್ಕೆಯ ಈ ಸ್ಮಾರ್ಟ್​ಫೋನ್​ ಬೆಲೆ 1,11,800 ರೂ ಎಂದು ಅಂದಾಜಿಸಲಾಗಿದೆ. ಅಂತೆಯೇ 16GB+ 512RAM ಸ್ಟೊರೇಜ್​ ಬೆಲೆ  1,45, 000 ರೂ ಎಂದು ಹೇಳಲಾಗುತ್ತಿದೆ.

ಮಿ ಮಿಕ್ಸ್​ ಫೋಲ್ಡ್ ಸ್ಮಾರ್ಟ್​ಫೋನ್​ ಕ್ವಾಲ್​ಕ್ಯಾಮ್​ ಸ್ನಾಪ್​ಡ್ರಾಗನ್​ 888 ಪ್ರೊಸೆಸರ್​ ಹೊಂದಿದೆ. 5,020 ಎಮ್​ಎಹೆಚ್​ ಬ್ಯಾಟರಿ ಅಳವಡಿಸಲಾಗಿದೆ. ವಿಶೇಷಚೆಂದರೆ 37 ನಿಮಿಷದಲ್ಲಿ ಈ ಸ್ಮಾರ್ಟ್​ಫೊನ್​ ಚಾರ್ಜ್​ ಆಗಲಿದೆ.

ತ್ರಿವಳಿ ಕ್ಯಾಮೆರಾವನ್ನು ಈ ಸ್ಮಾರ್ಟ್​ಫೋನ್​ ಹೊಂದಿದೆ. 108 ಮೆಗಾಫಿಕ್ಸೆಲ್​ ಸ್ಯಾಮ್​ಸಂಗ್​ ಹೆಚ್​ಎಮ್​ಕೆ ಸೆನ್ಸಾರ್​ ಮತ್ತು 13 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​ ಆ್ಯಂಗಲ್​ ಲೆನ್ಸ್​ ನೀಡಲಾಗಿದೆ.

ಶಿಯೋಮಿ ಕಂಪೆನಿಯ ಮಿ ಮಿಕ್ಸ್​ ಫೋಲ್ಡ್ ಮೊದಲ ಮಡಚುವ ಸ್ಮಾರ್ಟ್​ಫೋನ್ ಆಗಿದೆ. ಆ ಮೂಲಕ ಪೋಲ್ಡೆಡ್​ ಸ್ಮಾರ್ಟ್​ಫೋನ್​ ವಿಧದಲ್ಲೂ ತನ್ನನ್ನು ತಾನು ಗುರುತಿಸಿಕೊಳ್ಳಲು ಮುಂದಾಗಿದೆ. ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​ ಈಗಾಗಲೇ ಮಡಚುವ ಫೋನನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಆ ಸಾಲಿಗೆ ಇದೀಗ ಮಿ ಮಿಕ್ಸ್​ ಫೋಲ್ಡ್ ಫೋನ್​ ಸೇರಲಿದೆ.
Published by: Harshith AS
First published: March 31, 2021, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories