ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ Xiaomi 11 Lite NE 5G ಸ್ಮಾರ್ಟ್​ಫೋನ್​; ಇದರ ವಿಶೇಷತೆ ಗೊತ್ತಿದ್ಯಾ?

Xiaomi 11 Lite NE 5G: Xiaomi 11 Lite NE 5G ಲಾಂಚ್ ಈವೆಂಟ್ ಸೆಪ್ಟೆಂಬರ್ 29 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಮೊದಲೇ ಹೇಳಿದಂತೆ, ಇದು ಆನ್‌ಲೈನ್ ಈವೆಂಟ್ ಆಗಿದ್ದು. Xiaomi 11 Lite NE 5G ಯ ​​ಲೈವ್‌ಸ್ಟ್ರೀಮ್ ಕಂಪನಿಯ ಅಧಿಕೃತ YouTube ಚಾನೆಲ್, ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿದೆ.

Xiaomi 11 Lite NE 5G

Xiaomi 11 Lite NE 5G

 • Share this:
  ಚೀನಾದ ಶಿಯೋಮಿ ತನ್ನ ಹೊಸ ಮದ್ಯಮ- ಪ್ರೀಮಿಯಂ Xiaomi 11 Lite NE 5G  ಸ್ಮಾರ್ಟ್ ಫೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. Xiaomi 11 Lite NE 5G ಈ ತಿಂಗಳ ಆರಂಭದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು ಮತ್ತು ಆನ್‌ಲೈನ್ ಈವೆಂಟ್‌ನಲ್ಲಿ ದೇಶದಲ್ಲಿ ಪರಿಚಯಿಸಲಾಯಿತು. ಹೆಸರೇ ಸೂಚಿಸುವಂತೆ ನೂತನ ಫೋನ್​ 5ಜಿ ಸಂಪರ್ಕ ಹೊಂದಿದೆ. Xiaomi ಮಾರ್ಚ್‌ನಲ್ಲಿ Mi 11 Lite ಅನ್ನು 4G ಮತ್ತು 5G ಮಾದರಿಗಳಲ್ಲಿ ಪರಿಚಯಿಸಿತ್ತು ಆದರೆ ಭಾರತದಲ್ಲಿ 4G ರೂಪಾಂತರವನ್ನು ಮಾತ್ರ ಪರಿಚಯಿಸಿದೆ.

  Mi ಬ್ರ್ಯಾಂಡಿಂಗ್ ಅನ್ನು ತೊರೆದ ನಂತರ ಇದು Xiaomi ಯ ಮೊದಲ ಸ್ಮಾರ್ಟ್​​ಫೋನಾಗಿ ಗುರುತಿಸಿಕೊಂಡಿದೆ. ಹೊಸ ಸ್ಮಾಟ್​ಫೋನ್​ Mi 11 ಲೈಟ್ ನಂತೆಯೇ ವಿಶೇಷತೆಗಳನ್ನು ಹೊಂದಿದೆ ಆದರೆ ವಿಭಿನ್ನ ಕ್ವಾಲ್​ಕ್ಯಾಮ್ ಸ್ನಾಪ್ ಡ್ರಾಗನ್ 778G SoC ಯೊಂದಿಗೆ ಬರುತ್ತದೆ. ಬಿಡುಗಡೆಗೆ ಮುಂಚಿತವಾಗಿ, Xiaomi 11 Lite NE 5G ಬೆಲೆ, ವೈಶಿಷ್ಟ್ಯಗಳು, ವಿಶೇಷಣಗಳ ಬಗ್ಗೆ ಇಲ್ಲಿದೆ ಮಾಹಿತಿ

  Xiaomi 11 Lite NE 5G ಲಾಂಚ್ ಲೈವ್‌ಸ್ಟ್ರೀಮ್

  Xiaomi 11 Lite NE 5G ಲಾಂಚ್ ಈವೆಂಟ್ ಸೆಪ್ಟೆಂಬರ್ 29 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಮೊದಲೇ ಹೇಳಿದಂತೆ, ಇದು ಆನ್‌ಲೈನ್ ಈವೆಂಟ್ ಆಗಿದ್ದು. Xiaomi 11 Lite NE 5G ಯ ​​ಲೈವ್‌ಸ್ಟ್ರೀಮ್ ಕಂಪನಿಯ ಅಧಿಕೃತ YouTube ಚಾನೆಲ್, ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿದೆ. ಬಿಡುಗಡೆ ಸಮಾರಂಭದ ನಂತರ Xiaomi 11 Lite NE 5G ಸ್ಮಾರ್ಟ್​ಫೋನಿನ ಸರಿಯಾದ ಬೆಲೆ, ವೈಶಿಷ್ಟ್ಯಗಳು ಮತ್ತು ಇತರ ವಿವರಗಳನ್ನು ಸಹ ಪರಿಶೀಲಿಸಬಹುದು.

  ಭಾರತದಲ್ಲಿ Xiaomi 11 Lite NE 5G  ಬೆಲೆ

  Xiaomi 11 Lite NE 5G ಸ್ಮಾರ್ಟ್​ಫೋನ್​ Mi 11 Lite 4G ರೂಪಾಂತರವಾಗಿದೆ. ಇದರ ಆರಂಭಿಕ 21,999 ರೂ.ಗೆ ಪರಿಚಯಿಸಲಾಯಿತು. Xiaomi ಈಗಾಗಲೇ Mi 11X ಅನ್ನು 29,999 ರೂಗಲಿಗೆ ಮಾರಾಟ ಮಾಡುತ್ತಿದೆ. ಆದ್ದರಿಂದ, Xiaomi 11 Lite NE 5G ಅನ್ನು ಈ ಎರಡು ಸಾಧನಗಳ ನಡುವೆ ಇರಿಸುವ ಸಾಧ್ಯತೆ ಇದೆ. ಬೇಸ್ ವೇರಿಯಂಟ್ ಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ ಇದರ ಬೆಲೆ 25,000 ರೂ.ಇರಲಿದೆ.

  Xiaomi 11 Lite NE 5G: ವೈಶಿಷ್ಟ್ಯಗಳು ಮತ್ತು ವಿಶೇಷಣಗಳು

  ಸ್ಮಾರ್ಟ್​​ಫೋನ್​ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವುದರಿಂದ, ಅದರ ಹೆಚ್ಚಿನ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ನಮಗೆ ತಿಳಿದಿದೆ. ಶಿಯೋಮಿ 11 ಲೈಟ್ NE 5G 6.55-ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇಯನ್ನು 90Hz ರಿಫ್ರೆಶ್ ದರದೊಂದಿಗೆ ಬೆಂಬಲಿಸುತ್ತದೆ.  ಡಾಲ್ಬಿ ವಿಷನ್ ಮತ್ತು HDR10+ ಪ್ರಮಾಣೀಕರಣದೊಂದಿಗೆ ಸಿದ್ಧಪಡಿಸಲಾಗಿದೆ. ಈ ಸ್ಮಾರ್ಟ್​ಫೋನ್​ ಕೇವಲ 158 ಗ್ರಾಂ.ನಷ್ಟಿದೆ.

  ಹೊಸ Xiaomi ಸ್ಮಾರ್ಟ್ ಫೋನ್ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 778G ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಗ್ರಾಹಕರಿಗಾಗಿ 8GB RAM ಮತ್ತು 256GB ವರೆಗೆ ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತಿದೆ.

  ಇದನ್ನು ಓದಿ: Redmi Note 7 Pro: ಬಿಡುಗಡೆಯಾಗಿ 2 ವರ್ಷ ಕಳೆದರು ಬೇಡಿಕೆ ಮೂಲಕ ಗಮನ ಸೆಳೆಯುತ್ತಿರುವ ರೆಡ್​ಮಿ ನೋಟ್​ 7 ಪ್ರೊ

  ಕ್ಯಾಮೆರಾ ವಿಶೇಷತೆ:

  Xiaomi 11 Lite NE 5G ತ್ರಿವಳಿ ಕ್ಯಾಮೆರಾ ಸೆಟಪ್ ಹೊಂದಿದ್ದು 64 ಮೆಗಾಪಿಕ್ಸೆಲ್ ಸೆನ್ಸರ್ ಜೊತೆಗೆ f/1.79 ಅಪರ್ಚರ್, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ 119 ಡಿಗ್ರಿ FoV ಮತ್ತು f/2.2 ಅಪರ್ಚರ್ ಮತ್ತು 5 ಮೆಗಾಪಿಕ್ಸೆಲ್ ಟೆಲಿಮಾಕ್ರೋ ಲೆನ್ಸ್ f/2.4 ಅಪರ್ಚರ್​ನೊಂದಿಗೆ ಪರಿಚಯಿಸಲಾಗಿದೆ. ಸೆಲ್ಫಿಗಾಗಿ 20 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಆಂಡ್ರಾಯ್ಡ್ 11 ಆಧಾರಿತ ಫೋನ್ MIUI 12.5 ಕಾರ್ಯನಿರ್ವಹಿಸುತ್ತದೆ

  ಇನ್ನು  Xiaomi 11 Lite NE 5G ಸ್ಮಾರ್ಟ್​ಫೋನ್​ 5,000mAh ಬ್ಯಾಟರಿಯನ್ನು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
  Published by:Harshith AS
  First published: