Xiaomi ಪ್ರಿಯರಿಗೆ ಶಾಕ್! ಕೆಲವು ಬಳಕೆದಾರರ ಸ್ಮಾರ್ಟ್​​ಫೋನ್​ಗಳಿಗೆ ನಿರ್ಬಂಧ!

Xiaomi ಕಳೆದ ವಾರ ಕ್ಯೂಬಾ, ಇರಾನ್​, ಸಿರಿಯಾ ಮತ್ತು ಸೂಡಾನ್​ ನಂತಹ ಆಯ್ದ ದೇಶಗಳಲ್ಲಿ ತಮ್ಮ ಸ್ಮಾರ್ಟ್​ಫೋನ್​​​ ಬಳಸುವುದನ್ನು ನಿರ್ಬಂಧಿಸಿದೆ. ಮರು ಮಾರಾಟಗಾರರ ಕಾನೂನು ಬಾಹಿರ ಚಟುಟಿಕೆಗಳನ್ನು ತಡೆಯುವ ಸಲುವಾಗಿ ಶಿಯೋಮಿ ಈ ಕ್ರಮವನ್ನು ಕೈಗೊಂಡಿದೆ.

Xiaomi

Xiaomi

  • Share this:
    ಶಿಯೋಮಿ ಸ್ಮಾಟ್​ಫೋನ್ ಮಾರುಕಟ್ಟೆಯಲ್ಲಿ ನಂಬರ್​ 1 ಸ್ಥಾನದಲ್ಲಿ ಗುರುತಿಕೊಂಡಿದೆ, ಅಷ್ಟರ ಮಟ್ಟಿಗೆ ತನ್ನ ಮಾರುಕಟ್ಟೆಯ ಜೊತೆಗೆ ಬಳಕೆದಾರರನ್ನು ಶಿಯೋಮಿ ಹೊಂದಿದೆ. ಚೀನಾ ಮೂಲದ ಕಂಪನಿ ವಿಶ್ವದಾದ್ಯಂತ ತನ್ನ ಜನಪ್ರಿಯತೆ ಪಡೆದಿದೆ. ಆದರೆ ಶಿಯೋಮಿ ಸ್ಮಾರ್ಟ್​ಫೋನ್​ಗಳು ಕಾನೂನು ಬಾಹಿರ ಚಟುವಟಿಕೆಗಳಿಗೂ ಬಳಕೆಯಾಗುತ್ತಿದ್ದು, ಇದನ್ನರಿತ ಕಂಪನಿ ಕೆಲವು ದೇಶಗಳಲ್ಲಿ ತಮ್ಮ ಸ್ಮಾರ್ಟ್​ಫೋನನ್ನು ನಿರ್ಬಂಧಿಸಿದೆ.

    ಶಿಯೋಮಿ ಕಳೆದ ವಾರ ಕ್ಯೂಬಾ, ಇರಾನ್​, ಸಿರಿಯಾ ಮತ್ತು ಸೂಡಾನ್​ ನಂತಹ ಆಯ್ದ ದೇಶಗಳಲ್ಲಿ ತಮ್ಮ ಸ್ಮಾರ್ಟ್​ಫೋನ್​​​ ಬಳಸುವುದನ್ನು ನಿರ್ಬಂಧಿಸಿದೆ. ಮರು ಮಾರಾಟಗಾರರ ಕಾನೂನು ಬಾಹಿರ ಚಟುಟಿಕೆಗಳನ್ನು ತಡೆಯುವ ಸಲುವಾಗಿ ಶಿಯೋಮಿ ಈ ಕ್ರಮವನ್ನು ಕೈಗೊಂಡಿದೆ.

    ಶಿಯೋಮಿ ಸ್ಮಾರ್ಟ್​ಫೋನ್​ಗಳ ಕಳ್ಳಸಾಗಾಣಿ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಕ್ಯೂಬಾ, ಸಿರಿಯಾ, ಸುಡಾನ್​ ಕೆಲವು ದೇಶಗಳಿಗೆ ಮತ್ತು ಅನಧಿಕೃತ ಪ್ರದೇಶಗಳಿಗೆ ಕಳ್ಳ ಸಾಗಣಿಕೆ ಮಾಡಲಾಗಿದೆಯೇ ಎಂಬುದನ್ನು ದೃಢವಾಗಿ ಪರೀಕ್ಷಿಸಲು ಮತ್ತು ತನಿಖೆಯ ಭಾಗವಾಗಿ ಈ ನಿರ್ಣಯವನ್ನು ಕೈಗೊಳ್ಳಬೇಕಾಗಿದೆ ಎಂದು ಶಿಯೋಮಿ ಹೇಳಿದೆ. ಒಟ್ಟಿನಲ್ಲಿ ಅನಧಿಕೃತ ಪ್ರದೇಶಗಳಲ್ಲಿ ಸ್ಮಾರ್ಟ್​ಫೋನನ್ನು ಮಾರಾಟ ಮಾಡುವವುದನ್ನು ತಡೆಯಲು ಈ ರೀತಿ ಕ್ರಮ ಅನುಸರಿಸಿದೆ.

    ಅಧಿಕೃತ ಮಾರುಕಟ್ಟೆಯಿಂದ ಖರೀದಿಸಿದ ಸ್ಮಾರ್ಟ್​ಫೋನ್ನು ಮತ್ತೆ ಮರುಮಾರಾಟ ಮಾಡುವ ಮತ್ತು ಬಳಸುವ ಅವಕಾಶವಿದೆ. ಆದರೆ ನಿಷೇಧಿತ ದೇಶಗಳ ಪಟ್ಟಿಯಲ್ಲಿರುವ ಕ್ಯೂಬಾ ಕಳ್ಳ ಸಾಗಾಣಿಕೆ ಮೂಲಕ ಶಿಯೋಮಿ ಸ್ಮಾರ್ಟ್​ಫೋನ್ ಬಳಸುತ್ತಿದೆ ಎಂದು ಕೇಳಿಬಂದಿದೆ. ಕ್ಯೂಬಾದಲ್ಲಿ ಶೇ.15ರಷ್ಟು ಸ್ಮಾರ್ಟ್​ಫೋನ್​ಗಳು ಸಕ್ರಿಯವಾಗಿದೆ.



    ಈಗಾಗಲೇ ಶಿಯೋಮಿ ಎದುರಿಸುತ್ತಿರುವ ತನಿಖೆಯ ಕುರಿತು ಮಾಹಿತಿ ನೀಡಿದೆ. ಅದರ ಜೊತೆಗೆ ಫಲಿತಾಂಶವನ್ನು ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ಅದರ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ.

    Read Also⇒ Elsa Hosk: ನನಗೆ ಬೆತ್ತಲಾಗಿ ಓಡಾಡುವ ಅಭ್ಯಾಸ! ಮಗಳ ಜೊತೆಗೆ ನ್ಯೂಡ್ ಫೋಟೋ ಹಂಚಿಕೊಂಡ ಮಾಡೆಲ್!

    ಇನ್ನು ಅಧಿಕೃತ ಮಾರುಕಟ್ಟೆಯಿಂದ ಖರೀದಿಸಿದವರಿಗೆ ಸ್ಮಾರ್ಟ್​ಫೋನ್​ ಬಳಸುವ ಆಯ್ಕೆ ನೀಡಿದೆ. ಆದರೆ ಧಿಕೃತ ಮಾರುಕಟ್ಟೆಯ ಹೊರತಾಗಿ ಸ್ಮಾರ್ಟ್​ಫೋನ್​ ಖರೀದಿಸಿದವರನ್ನು ನಿರ್ಬಂಧಿಸಲಾಗಿದೆ. ಒಟ್ಟಿನಲ್ಲಿ ಶಿಯೀಮಿ ತನಿಖೆಯ ಭಾಗವಾಗಿ. ಕ್ಯೂಬಾ, ಇರಾನ್​, ಸಿರಿಯಾ ಮತ್ತು ಸೂಡಾನ್​ ನಂತಹ ಆಯ್ದ ದೇಶಗಳಲ್ಲಿ ತಮ್ಮ ಸ್ಮಾರ್ಟ್​ಫೋನ್​​​ ಬಳಸುವುದನ್ನು ನಿರ್ಬಂಧಿಸಿದೆ.

    ಇತ್ತೀಚೆಗೆ ಶಿಯೋಮಿ ಕಂಪನಿ ಮೊದಲ ಸ್ಮಾರ್ಟ್​ಗ್ಲಾಸ್ ಅನ್ನು ಅನಾವರಣಗೊಳಿಸಿದೆ. ನೂತನ ಸ್ಮಾರ್ಟ್​ಗ್ಲಾಸ್ ಕರೆ ಸ್ವೀಕರಿಸಲು, ನೋಟಿಫಿಕೇಶನ್ ವೀಕ್ಷಿಸಲು, ನ್ಯಾವಿಗೇಟ್ ಮಾಡಲು, ಫೋಟೋ ಸೆರೆ ಹಿಡಿಯಲು ಮತ್ತು ಪಠ್ಯ ಭಾಷಾಂತರಿಸುವ ವಿಶೇಷತೆಯನ್ನು ಹೊಂದಿದೆ.

    Read Also⇒ ಫೋನ್ ಬ್ಯಾಟರಿ ಶೇ.33ರಷ್ಟು ಚಾರ್ಜ್ ಆಗಲು ಕೇವಲ 3 ನಿಮಿಷ ಸಾಕು! Realme ಅಲ್ಟ್ರಾಡಾರ್ಟ್ ಚಾರ್ಜಿಂಗ್​ ಬಗ್ಗೆ ನಿಮಗೆಷ್ಟು ಗೊತ್ತು?

    ಶಿಯೋಮಿ ಸ್ಮಾರ್ಟ್​​​ಗ್ಲಾಸ್​ ಸಾಮಾನ್ಯ ಕನ್ನಡದಂತೆ ಕಂಡರು ಇದರಲ್ಲಿ ಮೈಕ್ರೋ ಎಲ್ಇಡಿ ಇಮೇಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 513 ಗ್ರಾಂ ತೂಕದ ಸ್ಮಾರ್ಟ್​​​ಗ್ಲಾಸ್​ನಲ್ಲಿ ಶಿಯೋಮಿ 0.13 ಇಂಚಿನ ಮೈಕ್ರೋಲೆಡ್ ಡಿಸ್​ಪ್ಲೇಯನ್ನು ಬಳಸಿದೆ. ಮೈಕ್ರೊಲೆಡ್​ಗಳು ಹೆಚ್ಚಿನ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿವೆ ಮತ್ತು ಹೆಚ್ಚು ಕಾಂಪ್ಯಾಕ್ಟ್ ಡಿಸ್​ಪ್ಲೇ ಮತ್ತು ಸುಲಭ ಸ್ಕ್ರೀನ್ ಏಕೀಕರಣಕ್ಕೆ ಅವಕಾಶ ನೀಡುತ್ತವೆ.

    ಸಣ್ಣ ಗಾತ್ರದ ಚಿಪ್ ಅನ್ನು ಇದರಲ್ಲಿ ಬಳಸಲಾಗಿದೆ ಎಂದು Xiaomi ಹೇಳಿಕೊಂಡಿದೆ. ಆಕರ್ಷಕ ಲುಕ್ ಹಾಗೂ ಕಂಪನಿಯು ಆಪ್ಟಿಕಲ್ ವೇವ್​​ಗೈಡ್ ತಂತ್ರಜ್ಞಾನ ಹೊಂದಿದೆ. ಇನ್ನು ಆಪ್ಟಿಕಲ್ ವೇವ್​ಗೈಡ್ ಲೆನ್ಸ್ ಸೂಕ್ಷ್ಮ ದರ್ಜೆಯ ರಚನೆಯ ಜೊತೆಗೆ ಬಳಕೆದಾರರನ ಕಣ್ಣಿಗೆ ಬೆಳಕಿನ ಕಿರಣಗಳನ್ನು ರವಾನಿಸಲು ಸಹಾಯಕವಾಗಲಿದೆ. ಹಾಗಾಗಿ ಇದನ್ನು ಬಳಸಿದೆ ಎಂದು ಕಂಪನಿ ಹೇಳಿಕೊಂಡಿದೆ.
    Published by:Harshith AS
    First published: