Leica Camera: ಲೈಕಾ ಕ್ಯಾಮೆರಾದೊಂದಿಗೆ ಚೀನಾದ ಟೆಕ್ ದೈತ್ಯ ಶಿಯೋಮಿ ಪಾಲುದಾರಿಕೆ; ಜುಲೈಗೆ ಬರಲಿದೆ ಅಭಿವೃದ್ಧಿಪಡಿಸಿದ ಸ್ಮಾರ್ಟ್‌ಫೋನ್

ಚೀನಾದ ಟೆಕ್ ದೈತ್ಯ ಶಿಯೋಮಿ, ಪ್ರಸಿದ್ಧ ಜರ್ಮನ್ ಕ್ಯಾಮೆರಾ ಬ್ರ್ಯಾಂಡ್ ಲೈಕಾ ಕ್ಯಾಮೆರಾದೊಂದಿಗೆ ಹೊಸ ಪಾಲುದಾರಿಕೆಯನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಶಿಯೋಮಿ ತನ್ನ ಸ್ಮಾರ್ಟ್ ಫೋನ್ ಗಳ ಕ್ಯಾಮೆರಾ ಸೇರಿ ಎಲ್ಲಾ ರೀತಿಯ ಕಾರ್ಯಕ್ಷಮತೆ, ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ಚೀನಾದ ಟೆಕ್ ದೈತ್ಯ ಶಿಯೋಮಿ, ಪ್ರಸಿದ್ಧ ಜರ್ಮನ್ ಕ್ಯಾಮೆರಾ ಬ್ರ್ಯಾಂಡ್ ಲೈಕಾ ಕ್ಯಾಮೆರಾದೊಂದಿಗೆ ಹೊಸ ಪಾಲುದಾರಿಕೆಯನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಶಿಯೋಮಿ ತನ್ನ ಸ್ಮಾರ್ಟ್ ಫೋನ್ ಗಳ ಕ್ಯಾಮೆರಾ ಸೇರಿ ಎಲ್ಲಾ ರೀತಿಯ ಕಾರ್ಯಕ್ಷಮತೆ, ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ಚೀನಾದ ಟೆಕ್ ದೈತ್ಯ ಶಿಯೋಮಿ, ಪ್ರಸಿದ್ಧ ಜರ್ಮನ್ ಕ್ಯಾಮೆರಾ ಬ್ರ್ಯಾಂಡ್ ಲೈಕಾ ಕ್ಯಾಮೆರಾದೊಂದಿಗೆ ಹೊಸ ಪಾಲುದಾರಿಕೆಯನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಶಿಯೋಮಿ ತನ್ನ ಸ್ಮಾರ್ಟ್ ಫೋನ್ ಗಳ ಕ್ಯಾಮೆರಾ ಸೇರಿ ಎಲ್ಲಾ ರೀತಿಯ ಕಾರ್ಯಕ್ಷಮತೆ, ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

  • Share this:
ಚೀನಾದ (China) ಟೆಕ್ ದೈತ್ಯ ಶಿಯೋಮಿ (Xiaomi), ಪ್ರಸಿದ್ಧ ಜರ್ಮನ್ ಕ್ಯಾಮೆರಾ ಬ್ರ್ಯಾಂಡ್ ಲೈಕಾ ಕ್ಯಾಮೆರಾದೊಂದಿಗೆ (Leica camera) ಹೊಸ ಪಾಲುದಾರಿಕೆಯನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಶಿಯೋಮಿ ತನ್ನ ಸ್ಮಾರ್ಟ್ ಫೋನ್ ಗಳ ಕ್ಯಾಮೆರಾ ಸೇರಿ ಎಲ್ಲಾ ರೀತಿಯ ಕಾರ್ಯಕ್ಷಮತೆ, ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ. ಎರಡು ಪ್ರಸಿದ್ಧ ಕಂಪನಿಗಳು ಪಾಲುದಾರಿಕೆ ಹಂಚಿಕೊಳ್ಳುವುದರ ಜೊತೆಗೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಸ್ಮಾರ್ಟ್‌ಫೋನ್ (Smart Phone) ಕೂಡ ಈ ವರ್ಷ ಲಾಂಚ್ (Launch) ಆಗಲಿದೆ. ಪತ್ರಿಕಾ ಹೇಳಿಕೆಯಲ್ಲಿ, ಶಿಯೋಮಿ "ಎರಡು ಕಂಪನಿಗಳು (Company) ಜಂಟಿಯಾಗಿ ಅಭಿವೃದ್ಧಿಪಡಿಸಿದ ಮೊದಲ ಇಮೇಜಿಂಗ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಈ ವರ್ಷದ ಜುಲೈನಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗುವುದು ಮತ್ತು ಮೊಬೈಲ್ ಫೋಟೋಗ್ರಫಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಳ್ಳಲು ಕಂಪನಿಗಳು ಉತ್ಸುಕರಾಗಿವೆ” ಎಂದು ತಿಳಿಸಿದೆ.

ಶಿಯೋಮಿ 12 ಅಲ್ಟ್ರಾ
ಶಿಯೋಮಿ ಮತ್ತು ಲೈಕಾ ಜಂಟಿಯಾಗಿ ಬಿಡುಗಡೆ ಮಾಡುತ್ತಿರುವ ಫೋನ್ ಅನ್ನು ಶಿಯೋಮಿ 12 ಅಲ್ಟ್ರಾ ಆಗಿರಬಹುದು ಎಂದು ಊಹಿಸಲಾಗಿದೆ. ಇದು ಪ್ರಸ್ತುತ ಪ್ರಮುಖ ಶಿಯೋಮಿ 12 ಪ್ರೋಗೆ ಹೋಲಿಸಿದರೆ ಹೆಚ್ಚು ಸುಧಾರಿತ ಕ್ಯಾಮೆರಾ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ. ಆದಾಗ್ಯೂ ಜಂಟಿ ಕಂಪನಿಗಳು ಮುಂಬರುವ ಸಾಧನದ ಹೆಸರನ್ನು ದೃಢಪಡಿಸಿಲ್ಲ.

ಶಿಯೋಮಿ ಸಿಇಒ ಲೈ ಜುನ್ (Lei Jun) ಮಾತನಾಡಿ, "ಶಿಯೋಮಿ ಅಂತಿಮವಾಗಿ ಬಳಕೆದಾರರ ಅನುಭವವನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಯಾವಾಗಲೂ ಸ್ಮಾರ್ಟ್‌ಫೋನ್ ಛಾಯಾಗ್ರಹಣದ ಸಾಮರ್ಥ್ಯಗಳನ್ನು ತೀವ್ರವಾಗಿ ಅನ್ವೇಷಿಸಲು ಆಶಿಸುತ್ತದೆ” ಎಂದಿದ್ದಾರೆ.

ಶಿಯೋಮಿ ಜಾಗತಿಕ ಪ್ರೀಮಿಯಂ ಬ್ರ್ಯಾಂಡ್‌
ಲೈಕಾ ಕ್ಯಾಮೆರಾ ಎಜಿ ಸಿಇಒ ಮ್ಯಾಥಿಯಾಸ್ ಹಾರ್ಶ್ ಅವರು "ಶಿಯೋಮಿಯೊಂದಿಗೆ ದೀರ್ಘಾವಧಿಯ ಕಾರ್ಯತಂತ್ರದ ಸಹಕಾರವನ್ನು ಘೋಷಿಸಲು ಖುಷಿಯಾಗಿದೆ" ಎಂದು ಹೇಳಿದರು. ಸ್ಮಾರ್ಟ್‌ಫೋನ್, ಎರಡೂ ಕಂಪನಿಗಳ ಪ್ರವರ್ತಕ ಪ್ರಗತಿಯನ್ನು ಗೋಚರಿಸುವಂತೆ ಮಾಡುತ್ತದೆ ಎಂದು ಹೇಳಿದರು. ಶಿಯೋಮಿ ಜಾಗತಿಕ ಪ್ರೀಮಿಯಂ ಬ್ರ್ಯಾಂಡ್‌ ಆಗಿದೆ ಮತ್ತು ಈ ಅಭೂತಪೂರ್ವ ಆಳವಾದ ಸಹಕಾರ ಪ್ರಕ್ರಿಯೆಯಲ್ಲಿ, ಗ್ರಾಹಕರಿಗೆ ಮೊಬೈಲ್ ಫೋಟೋಗ್ರಫಿಯ ಹೊಸ ಯುಗವನ್ನು ಒದಗಿಸುವ ಗುರಿಯಲ್ಲಿ ಎರಡೂ ಕಂಪನಿಗಳು ಸತತವಾಗಿ ಕೆಲಸ ಮಾಡಿವೆ ಎಂದಿದ್ದಾರೆ.

ಇದನ್ನೂ ಓದಿ:  Iphone​ ಖರೀದಿಸುವ ಪ್ಲಾನ್​ ಹಾಕಿದ್ದೀರಾ? 4 ತಿಂಗಳು ಕಾಯಿರಿ Iphone​ 14 ಖರೀದಿಸಿ

ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಕ್ಯಾಮರಾ ಬ್ರ್ಯಾಂಡ್‌ಗಳೊಂದಿಗೆ ಕೈಜೋಡಿಸುವುದು ಅಸ್ತಿತ್ವದಲ್ಲಿರುವ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಮಾರ್ಗಗಳಲ್ಲಿ ಒಂದಾಗಿದೆ. ಲೈಕಾ ಬ್ರ್ಯಾಂಡಿಂಗ್‌ನೊಂದಿಗೆ ಇದೇ ಮಟ್ಟದ ಯಶಸ್ಸನ್ನು ಸಾಧಿಸಲು ಶಿಯೋಮಿ ಎದುರು ನೋಡುತ್ತಿದೆ. ಹಿಂದೆ, Huaweiನ ಪ್ರಮುಖ P ಸರಣಿ ಮತ್ತು ಮೇಟ್ ಸರಣಿಯಲ್ಲಿ ಲೈಕಾ ಬ್ರ್ಯಾಂಡಿಂಗ್ ಗುರುತಿಸಿಕೊಂಡಿತ್ತು.

ಲೈಕಾ
ಲೈಕಾ ಕ್ಯಾಮೆರಾ ಜರ್ಮನ್ ಮೂಲದ ಬ್ರ್ಯಾಂಡಿಂಗ್ ಆಗಿದೆ ಮತ್ತು ಅದರ ವಿಶ್ವ ದರ್ಜೆಯ ಲೆನ್ಸ್‌ಗಳು ಮತ್ತು ಕ್ಯಾಮೆರಾಗಳಿಗೆ ಹೆಸರುವಾಸಿಯಾಗಿದೆ. ಲೈಕಾದ ಕ್ಯಾಮೆರಾಗಳು ಸಾಮಾನ್ಯವಾಗಿ 'ರೆಡ್ ಡಾಟ್' ಬ್ರ್ಯಾಂಡಿಂಗ್‌ನೊಂದಿಗೆ ಬರುತ್ತವೆ, ಅದು ಅವುಗಳನ್ನು ಇತರ ಬ್ರ್ಯಾಂಡ್‌ಗಳಿಂದ ಪ್ರತ್ಯೇಕಿಸುತ್ತದೆ. ಶಿಯೋಮಿ ಪಾಲುದಾರಿಕೆಯೊಂದಿಗೆ, ಬ್ರ್ಯಾಂಡ್ ತನ್ನ ಪರಿಣತಿ ಮತ್ತು ಅನುಭವವನ್ನು ಮೊಬೈಲ್ ಇಮೇಜಿಂಗ್‌ಗೆ ವಿಸ್ತರಿಸುತ್ತದೆ. ಸ್ಮಾರ್ಟ್‌ಫೋನ್‌ಗಳಲ್ಲಿನ ಛಾಯಾಗ್ರಹಣವು ವರ್ಷಗಳಿಂದ ಸುಧಾರಿಸಿದೆ.

ಶಿಯೋಮಿನ ಮುಂಬರುವ ಲೈಕಾ ಕ್ಯಾಮೆರಾ ಫೋನ್: ಏನನ್ನು ನಿರೀಕ್ಷಿಸಬಹುದು?
ಕಂಪನಿಯೇ ತಿಳಿಸಿರುವಂತೆ ಹೊಸ ಫೋನ್ ಜುಲೈನಲ್ಲಿ ಲಭ್ಯವಾಗಲಿದ್ದು, Xiaomi 12 Ultra ಎಂದು ಊಹಿಸಲಾಗಿದೆ. ಕ್ವಾಲ್ಕಾಮ್ ಇದೀಗ ಘೋಷಿಸಿದ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಿಂದ ಫೋನ್ ಚಾಲಿತವಾಗುತ್ತದೆ. ಕ್ವಾಲ್ಕಾಮ್‌ನ ಪತ್ರಿಕಾ ಹೇಳಿಕೆಯು ಹೊಸ ಪ್ರೊಸೆಸರ್‌ನೊಂದಿಗೆ ಸಾಧನವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿರುವ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಶಿಯೋಮಿಯನ್ನು ಉಲ್ಲೇಖಿಸಿದೆ.

ಇದನ್ನೂ ಓದಿ:Smart phone: ಸ್ಮಾರ್ಟ್​ ಫೋನ್​ ಬಳಕೆದಾರರೇ ಎಚ್ಚರ! ನಿಮ್ಮ ಹಣ ಕದಿಯುತ್ತವೆ ಈ 7 ಆ್ಯಪ್​ಗಳು! 

ಈ ಎರಡೂ ಕಂಪನಿಗಳ ಸಹಭಾಗಿತ್ವದಿಂದಾಗಿ ಗ್ರಾಹಕರು ಹೆಚ್ಚು ಕ್ಯಾಮೆರಾದ ಮೇಲೆ ನೀರಿಕ್ಷೆ ಇಟ್ಟುಕೊಂಡಿರುತ್ತಾರೆ. ಹೀಗಾಗಿ ಯಾವ ರೀತಿ ಕ್ಯಾಮೆರಾ ದಕ್ಷತೆ ಬರುತ್ತದೆ ಎಂದು ಜುಲೈವರೆಗೂ ಕಾಯಲೇ ಬೇಕು.

ವಿವೋ, ಒಪ್ಪೋ ಪಾಲುದಾರಿಕೆ
ಇಂತಹ ಪಾಲುದಾರಿಕೆಯನ್ನು ಘೋಷಿಸಿದ ಮೊದಲ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಶಿಯೋಮಿ ಅಲ್ಲ. ಇದಕ್ಕೂ ಮುನ್ನ ವಿವೋ ಪ್ರಸಿದ್ಧ ಜರ್ಮನ್ ಲೆನ್ಸ್ ಮತ್ತು ಕ್ಯಾಮೆರಾ ಬ್ರ್ಯಾಂಡ್ Zeiss ಕಂಪನಿ ಜೊತೆಗೆ ಇದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿದೆ. ಜೊಎತೆಗ ಒಪ್ಪೋ ಮತ್ತು ಒನ್ ಪ್ಲಸ್ ಸ್ಮಾರ್ಟ್ ಫೋನ್ ಸಹ ಸ್ವೀಡಿಷ್ ಕ್ಯಾಮರಾ ತಯಾರಕ ಹ್ಯಾಸೆಲ್ಬ್ಲಾಡ್ ನೊಂದಿಗೆ ಒಪ್ಪಂದವನ್ನು ಹೊಂದಿವೆ.
Published by:Ashwini Prabhu
First published: