ಶಿಯೋಮಿ ಶೂ: ಪಾದರಕ್ಷೆ ಮಾರುಕಟ್ಟೆಗೆ ಕಾಲಿಟ್ಟ ಸ್ಮಾರ್ಟ್​ಫೋನ್ ಕಂಪೆನಿ; ಬೆಲೆಯೆಷ್ಟು ಗೊತ್ತೆ?

ಮಿ.ಕಾಮ್​ ಸೇರಿದಂತೆ ಆನ್​ಲೈನ್​ನಲ್ಲೂ ಈ ಶೂಗಳು ಲಭ್ಯವಿರಲಿದ್ದು, ಅತ್ಯಂತ ಕಡಿಮೆ ಬೆಲೆಗೆ ಒಳ್ಳೆಯ ಗುಣಮಟ್ಟದ ಪಾದರಕ್ಷೆಯ ಆಯ್ಕೆಗೆ ಮಿ ಶೂಸ್ ಉತ್ತಮ ಎಂದು ಶಿಯೋಮಿ ತಿಳಿಸಿದೆ.​

zahir | news18
Updated:February 10, 2019, 3:08 PM IST
ಶಿಯೋಮಿ ಶೂ: ಪಾದರಕ್ಷೆ ಮಾರುಕಟ್ಟೆಗೆ ಕಾಲಿಟ್ಟ ಸ್ಮಾರ್ಟ್​ಫೋನ್ ಕಂಪೆನಿ; ಬೆಲೆಯೆಷ್ಟು ಗೊತ್ತೆ?
ಶಿಯೋಮಿ ಶೂ
zahir | news18
Updated: February 10, 2019, 3:08 PM IST
ಚೀನಾ ಮೂಲದ ಎಲೆಕ್ಟ್ರಾನಿಕ್ ಕಂಪೆನಿ ಶಿಯೋಮಿ ಸ್ಪೋರ್ಟ್ಸ್ ಪ್ರಿಯರಿಗಾಗಿ ಶೂವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹಿಂದೆಯೇ ಸ್ಮಾರ್ಟ್​ ಶೂವನ್ನು ಪರಿಚಯಿಸುವುದಾಗಿ ಶಿಯೋಮಿ ತಿಳಿಸಿತ್ತು. ಇದೀಗ ಮಿ ಸ್ಪೋರ್ಟ್ಸ್​ ಶೂ2 ಎಂಬ ಹೆಸರಿನಲ್ಲಿ ಹೊಸ ಪಾದರಕ್ಷೆಯನ್ನು ಹೊರತಂದಿದೆ. ಆದರೆ ಇದು ಸ್ಮಾರ್ಟ್​​ ಶೂ ಅಲ್ಲ ಎಂದಿರುವ ಕಂಪೆನಿಯು, ಇತರೆ ಕಂಪೆನಿಗಳ ಶೂನಂತೆ ಅತ್ಯುತ್ತಮ ಕ್ರೀಡಾ ಪಾದರಕ್ಷೆ ಎಂದು ಹೇಳಿದೆ. ಭಾರತದ ಮಾರುಕಟ್ಟೆಯಲ್ಲೂ ಶಿಯೋಮಿ ಶೂಗಳು ಲಭ್ಯವಾಗಲಿದ್ದು, ಇದನ್ನು ಆಧುನಿಕ ತಂತ್ರಜ್ಞಾನವಾದ 5 ಇನ್ 1 ಮೋಲ್ಡಿಂಗ್ ವಿನ್ಯಾಸದಲ್ಲಿ ರೂಪಿಸಲಾಗಿದೆ.

ಮಿ ಸ್ಪೋರ್ಟ್ಸ್ ಶೂ 2 ಅತ್ಯುತ್ತಮ ಗ್ರಿಪ್​ ಹೊಂದಿರಲಿದ್ದು, ಇದು ಕಾಲುಗಳಿಗೆ ಉತ್ತಮ ಹಿಡಿತ ಒದಗಿಸಲಿದೆ. ಹಾಗೆಯೇ 5 ವಿವಿಧ ಫ್ಯಾಬ್ರಿಕ್ ಮೆಟಿರಿಯಲ್​ಗಳನ್ನು ಬಳಿಸಿ ಇದರ ಸೋಲ್​ಗಳನ್ನು ರಚಿಸಿರುವುದರಿಂದ ಬೇಗನೆ ಸವೆದು ಹೋಗುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

ಮಿ.ಕಾಮ್​ ಸೇರಿದಂತೆ ಆನ್​ಲೈನ್​ನಲ್ಲೂ ಈ ಶೂಗಳು ಲಭ್ಯವಿರಲಿದ್ದು, ಅತ್ಯಂತ ಕಡಿಮೆ ಬೆಲೆಗೆ ಒಳ್ಳೆಯ ಗುಣಮಟ್ಟದ ಪಾದರಕ್ಷೆಯ ಆಯ್ಕೆಗೆ ಮಿ ಶೂಸ್ ಉತ್ತಮ ಎಂದು ಶಿಯೋಮಿ ತಿಳಿಸಿದೆ.​ ಇದರ ಬೆಲೆ 2999 ರೂ. ನಿಗದಿ ಮಾಡಲಾಗಿದ್ದು, ಕೆಲವು ದಿನಗಳವರೆಗೆ 500 ರೂ.ಗಳ ಡಿಸ್ಕೌಂಟ್ ಕೂಡ ಸಿಗಲಿದೆ.

ಇದನ್ನೂ ಓದಿ:ಯಜಮಾನ vs ಮಿಠಾಯಿ ಸೂರಿ: ಖತರ್ನಾಕ್ ಖಳನಾಗಿ ಡಾಲಿ ಧನಂಜಯ್!

ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಮೂಲಕ  ಹಿಡಿತ ಸಾಧಿಸಿರುವ ಶಿಯೋಮಿ ಕಂಪನಿಯು ಇದೀಗ ಲೈಫ್‌ಸ್ಟೈಲ್ ವಿಭಾಗದಲ್ಲಿ ತನ್ನ ವ್ಯಾಪಾರ ವಿಸ್ತರಿಸಲು ಮುಂದಾಗಿದೆ. ಇದಕ್ಕಾಗಿ ಮುಂಬರುವ ದಿನಗಳಲ್ಲಿ ಟೀ ಶರ್ಟ್​, ಜೀನ್ಸ್​ ಸೇರಿದಂತೆ ಹಲವು ಉತ್ಪನ್ನಗಳನ್ನು ಶಿಯೋಮಿ ದೇಶದಲ್ಲಿ ಬಿಡುಗಡೆ ಮಾಡಲಿದೆ. ಅದರ ಮೊದಲ ಹಂತ ಎಂಬಂತೆ  ಮಿ ಸ್ಪೋರ್ಟ್ಸ್​ ಶೂ2 ಅನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ.
First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...