ಕಲುಷಿತ ಹವಾ ಸೇವನೆಯಿಂದ ನಿಮ್ಮನ್ನು ರಕ್ಷಿಸಲು ಮಾರುಕಟ್ಟೆಗೆ ಬಂದಿದೆ “ಸ್ಮಾರ್ಟ್ ಮಾಸ್ಕ್”

ಜನರ ಆರೋಗ್ಯ ಕಾಳಜಿಗಾಗಿ ಈ ಕಲುಷಿತ ಹವಾ ಸೇವನೆಯಿಂದ ಮುಕ್ತರನ್ನಾಗಿಸುವ ನಿಟ್ಟಿನಲ್ಲಿ 'ಕ್ಸಿಯಾಮಿ' ಕಂಪೆನಿ ಹೊಸತಾದ ಮಾಸ್ಕ್​ ಅವಿಷ್ಕಾರಿಸಿ ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

Seema.R | news18
Updated:January 3, 2019, 12:32 PM IST
ಕಲುಷಿತ ಹವಾ ಸೇವನೆಯಿಂದ ನಿಮ್ಮನ್ನು ರಕ್ಷಿಸಲು ಮಾರುಕಟ್ಟೆಗೆ ಬಂದಿದೆ “ಸ್ಮಾರ್ಟ್ ಮಾಸ್ಕ್”
ಕ್ಸಿಯೋಮಿಯ ಮಾರುಕಟ್ಟೆಗೆ ತಂದಿರುವ ಮಾಸ್ಕ್​ ಚಿತ್ರ
Seema.R | news18
Updated: January 3, 2019, 12:32 PM IST
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ದಿನೇ ದಿನೇ ವಾಯುಮಾಲಿನ್ಯದಿಂದ ಜನರು ಪರಿತಪಿಸುತ್ತಿದೆ. ಧೂಳು ಮಿಶ್ರಿತ ವಾತಾವರಣ, ವಿಷ ಅನಿಲಗಳುಗಳು ಉಸಿರಾಡುವ ಗಾಳಿಯಲ್ಲಿ ಬೆರೆತು ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಜನರ ಆರೋಗ್ಯ ಕಾಳಜಿಗಾಗಿ ಈ ಕಲುಷಿತ ಹವಾ ಸೇವನೆಯಿಂದ ಮುಕ್ತರನ್ನಾಗಿಸುವ ನಿಟ್ಟಿನಲ್ಲಿ 'ಕ್ಸಿಯಾಮಿ' ಕಂಪೆನಿ ಹೊಸತಾದ ಮಾಸ್ಕ್​ ಅವಿಷ್ಕಾರಿಸಿ ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಕ್ಸಿಯಾಮಿ ಕಂಪೆನಿಯ ಈ ಮಾಸ್ಕ್​ ನಿಮಗೆ ಮಾಲಿನ್ಯ ರಹಿತವಾದ ಗಾಳಿಯನ್ನು ಪಡೆಯಲು ಸಹಾಯಕವಾಗಿದೆ.  ಸ್ಮಾರ್ಟ್ ಪೊಲ್ಯೂಷನ್ ನ  ಮಾಸ್ಕ್ “ಮೀ ಏರ್ ಪೋಪ್ ಪಿಎಮ್ 2.5” ಕವಚವನ್ನು ಇಂದು ಮಾರುಕಟ್ಟೆಗೆ ಕಂಪನಿ ಪರಿಚಯಿಸುತ್ತಿದೆ.

“ಮೀ ಏರ್ ಪೋಪ್ ಪಿಎಮ್ 2.5” ಕವಚವು ಕಲುಷಿತ ಗಾಳಿಯನ್ನು ಶೋಧಿಸಿ ಉತ್ತಮ ಗಾಳಿಯನ್ನು ನೀಡಲು ಸಹಾಯಕವಾಗಿದೆ. ಇದರಲ್ಲಿ ಗಾಳಿಯನ್ನು ಶುದ್ಧೀಕರಿಸುವ ಫಿಲ್ಟರ್ ಅಳವಡಿಸಲಾಗಿದೆ.

ಇದರಲ್ಲೇನಿದೆ ವಿಶೇಷ..?

ಕ್ಸಿಯಾಮೀ ಕಂಪೆನಿಯ ‘’ಮೀ ಎರ್ ಪೋಪ್ ಪಿಎಮ್ 2.5’’ ಮಾಸ್ಕ್​ನಲ್ಲಿ ಶೇ. 99% ರಷ್ಟು ಗಾಳಿ ಶುದ್ಧೀಕರಣಗೊಳ್ಳುತ್ತದೆ.  ಅಲ್ಲದೆ, ಮಾಸ್ಕ್​ನಲ್ಲಿ N95 ಏರ್ ಫಿಲ್ಟರ್ ಮತ್ತು ಫ್ಯಾನ್ ಜೋಡಿಸಲಾಗಿದ್ದು, ಬ್ಯುಲ್ಟ್-ಇನ್-ಲೀ-ಇಯಾನ್ (550) ಬ್ಯಾಟರಿಯನ್ನು ಒಳಗೊಂಡಿದೆ.  ನಾಲ್ಕು ಗಂಟೆಗಳ ಕಾಲ ಚಾರ್ಜ್ ಮಾಡುವುದರ ಮೂಲಕ ಇದನ್ನು ಧರಿಸಬಹುದಾಗಿದೆ. ಇದರಿಂದ ಯಾವುದೇ ಹಾನಿಯಿಲ್ಲ ಎಂದು ಕಂಪನಿ ಕೂಡ ತಿಳಿಸಿದೆ.

ಇದನ್ನು ಓದಿ: ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಫೀಚರ್​ ಹೊಂದಿರುವ ಮೊಬೈಲ್​ ಕೊಳ್ಳಲು ಇಲ್ಲಿದೆ, ಹಲವು ಆಯ್ಕೆ
Loading...

N95 ಏರ್ ಫಿಲ್ಟರ್ ಚಿಕ್ಕದಾದ ನಾಲ್ಕು ಪದರಗಳನ್ನು ಹೊಂದಿದ್ದು, ಗಾಳಿಯಲ್ಲಿ ಮಿಶ್ರಿತಗೊಂಡ ಕಲುಷಿತವನ್ನು ಬೇರ್ಪಡಿಸಿ ಶುದ್ಧಗಾಳಿ ನೀಡುವಲ್ಲಿ ಸಹಾಯಕವಾಗುತ್ತದೆ.

ಭಾರತದ ಮಾರುಕಟ್ಟೆಗೆ ಹೇಳಿ ಮಾಡಿಸಿದಂತಹ ಮುಖಕ್ಕೆ ಅಳವಡಿಸುವ ಈ ಕವಚವು Mi.com ಮತ್ತು Mi Home ನಲ್ಲಿ ಲಭ್ಯವಿದೆ. ಭಾರತದಲ್ಲಿ 1,000 ಅಥವಾ 1,099 ಬೆಲೆಗೆ ದೊರಕುತ್ತದೆ ಎಂದು ಅಂದಾಜಿಸಲಾಗಿದೆ.

First published:January 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ