Xiaomi: ಕೇಂದ್ರ ಸರ್ಕಾರಕ್ಕೆ ಕಸ್ಟಮ್ಸ್‌ ಸುಂಕ ವಂಚಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಶಿಯೋಮಿ..!

Xiaomi Smartphone: ಇದು ಕಸ್ಟಮ್ಸ್ ಆಕ್ಟ್, 1962ರ ಸೆಕ್ಷನ್‌ 14 ಮತ್ತು ಕಸ್ಟಮ್ಸ್ ಮೌಲ್ಯಮಾಪನ (ಆಮದು ಮಾಡಿಕೊಂಡ ಸರಕುಗಳ ಮೌಲ್ಯದ ನಿರ್ಣಯ) ನಿಯಮಗಳು 2007 ಅನ್ನು ಉಲ್ಲಂಘಿಸುತ್ತದೆ

ಶಿಯೋಮಿ

ಶಿಯೋಮಿ

  • Share this:
ಭಾರತದಲ್ಲಿ ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಗೆ ಕಳೆದ ಕೆಲ ವರ್ಷಗಳಿಮದ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದೆ. ಈ ಪೈಕಿ ಚೀನಾ (China-based) ಮೂಲದ ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗೂ ತಕ್ಕಮಟ್ಟಿಗೆ ಒಳ್ಳೆ ಬೇಡಿಕೆ ಇದೆ. ಇಂತಹ ಶಿಯೋಮಿ ಕಂಪನಿಗೆ ಈಗ ಭಾರತದಲ್ಲಿ ಸಂಕಷ್ಟ ಎದುರಾಗಿದೆಯಂತೆ. ಏಕೆಂದರೆ ಶಿಯೋಮಿ (Xiaomi ) ಕಂಪನಿ ಕಸ್ಟಮ್ಸ್‌ ಸುಂಕ (Defrauding Customs ) ವಿಚಾರದಲ್ಲಿ ವಂಚನೆ ಮಾಡಿರುವ ಆರೋಪ ಎದುರಾಗಿದೆ. ಈ ಹಿನ್ನೆಲೆ ಈ ಸಂಬಂಧ ತನಿಖೆ ( Investigation) ನಡೆಯುತ್ತಿದ್ದು, ಇದು ಸಾಬೀತಾದಲ್ಲಿ ಶಿಯೋಮಿ ಕಂಪನಿ ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇದೆ.

3 ಶೋಕಾಸ್ ನೋಟಿಸ್‌

2017 ಏಪ್ರಿಲ್ 1, ಮತ್ತು 2020ರ ಜೂನ್ 30, 2020ರ ನಡುವೆ 653 ಕೋಟಿ ರೂ. ಮೌಲ್ಯದ ಕಸ್ಟಮ್ಸ್‌ ಸುಂಕ ವಿಚಾರಕ್ಕಾಗಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಈವರೆಗೆ 3 ಶೋಕಾಸ್ ನೋಟಿಸ್‌ಗಳನ್ನು ನೀಡಿದೆಯಂತೆ. ಈ ಸಂಬಂಧ ವಿವರವಾದ ಪತ್ರಿಕಾ ಹೇಳಿಕೆ ಹೇಳಿದ ಹಣಕಾಸು ಸಚಿವಾಲಯವು Xiaomi ಇಂಡಿಯಾ ಮತ್ತು ಅದರ ಗುತ್ತಿಗೆ ತಯಾರಕರ ವಿರುದ್ಧ ಕಡಿಮೆ ಮೌಲ್ಯಮಾಪನದ ಮೂಲಕ ಕಸ್ಟಮ್ಸ್ ಸುಂಕವನ್ನು ತಪ್ಪಿಸುವುದಕ್ಕಾಗಿ DRI ನಿಂದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: Xiaomi ಪರಿಚಯಸಿದೆ ಹೊಸ ವಾಟರ್ ಹೀಟರ್! ಚಿಟಿಕೆ ಹೊಡೆಯುವಷ್ಟರಲ್ಲಿ ನೀರು ಬಿಸಿಯಾಗುತ್ತೆ

"ತನಿಖೆಯ ಸಮಯದಲ್ಲಿ, Xiaomi ಇಂಡಿಯಾದ ಆವರಣದಲ್ಲಿ DRI ಯಿಂದ ಹುಡುಕಾಟಗಳನ್ನು ನಡೆಸಲಾಯಿತು, ಇದು Xiaomi ಇಂಡಿಯಾ Qualcomm USA ಮತ್ತು ಬೀಜಿಂಗ್ Xiaomi ಮೊಬೈಲ್ ಸಾಫ್ಟ್‌ವೇರ್ ಕಂ. ಲಿಮಿಟೆಡ್‌ಗೆ ಒಪ್ಪಂದದ ಬಾಧ್ಯತೆಯ ಅಡಿಯಲ್ಲಿ, ರಾಯಧನ ಮತ್ತು ಪರವಾನಗಿ ಶುಲ್ಕವನ್ನು ರವಾನೆ ಮಾಡುತ್ತಿದೆ ಎಂದು ಸೂಚಿಸುವ ದೋಷಾರೋಪಣೆಯ ದಾಖಲೆಗಳನ್ನು ಮರುಪಡೆಯಲು ಕಾರಣವಾಯಿತು’’ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಧ್ಯಮಕ್ಕೆ ಹೇಳಿಕೆ ನೀಡಿದೆ.

ಸರಕುಗಳ ವಹಿವಾಟು ಮೌಲ್ಯ

ಶಿಯೋಮಿ ಇಂಡಿಯಾದ ನಿರ್ದೇಶಕರೊಬ್ಬರು ಈ ಪಾವತಿಗಳನ್ನು ದೃಢಪಡಿಸಿದ್ದಾರೆ ಎಂದೂ ಮೋದಿ ಸರ್ಕಾರ ಹೇಳಿದೆ. ತನಿಖೆಯ ಸಮಯದಲ್ಲಿ, Xiaomi ಇಂಡಿಯಾವು Qualcomm USA ಮತ್ತು ಬೀಜಿಂಗ್ Xiaomi ಮೊಬೈಲ್ ಸಾಫ್ಟ್‌ವೇರ್ ಕಂ. ಲಿಮಿಟೆಡ್ ಚೀನಾಕ್ಕೆ ಪಾವತಿಸಿದ "ರಾಯಧನ ಮತ್ತು ಪರವಾನಗಿ ಶುಲ್ಕವನ್ನು" Xiaomi ಇಂಡಿಯಾ ಮತ್ತು ಗುತ್ತಿಗೆ ತಯಾರಕರ ಮೂಲಕ ಆಮದು ಮಾಡಿಕೊಳ್ಳುವ ಸರಕುಗಳ ವಹಿವಾಟು ಮೌಲ್ಯದಲ್ಲಿ ಸೇರಿಸಲಾಗುತ್ತಿಲ್ಲ ಎಂದೂ ಕೇಂದ್ರ ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ಸೇರಿಸಲಾಗಿದೆ.

"ಡಿಆರ್‌ಐ ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪುರಾವೆಗಳು Xiaomi ಇಂಡಿಯಾ ಅಥವಾ ಅದರ ಗುತ್ತಿಗೆ ತಯಾರಕರು ಆಮದು ಮಾಡಿಕೊಂಡ ಸರಕುಗಳ ಮೌಲ್ಯಮಾಪನ ಮೌಲ್ಯದಲ್ಲಿ Xiaomi ಇಂಡಿಯಾ ಪಾವತಿಸಿದ ರಾಯಧನವನ್ನು ಒಳಗೊಂಡಿಲ್ಲ ಎಂದು ಸೂಚಿಸಿದೆ. ಇದು ಕಸ್ಟಮ್ಸ್ ಆಕ್ಟ್, 1962ರ ಸೆಕ್ಷನ್‌ 14 ಮತ್ತು ಕಸ್ಟಮ್ಸ್ ಮೌಲ್ಯಮಾಪನ (ಆಮದು ಮಾಡಿಕೊಂಡ ಸರಕುಗಳ ಮೌಲ್ಯದ ನಿರ್ಣಯ) ನಿಯಮಗಳು 2007 ಅನ್ನು ಉಲ್ಲಂಘಿಸುತ್ತದೆ.

ಕಸ್ಟಮ್ಸ್ ಸುಂಕ ತಪ್ಪಿಸಿದೆ

ವಹಿವಾಟಿನ ಮೌಲ್ಯಕ್ಕೆ "ರಾಯಧನ ಮತ್ತು ಪರವಾನಗಿ ಶುಲ್ಕ" ಸೇರಿಸದೆ, Xiaomi ಇಂಡಿಯಾ ಅಂತಹ ಆಮದು ಮಾಡಿದ ಮೊಬೈಲ್ ಫೋನ್‌ಗಳ, ಅದರ ಭಾಗಗಳು ಮತ್ತು ಘಟಕಗಳ ಲಾಭದಾಯಕ ಮಾಲೀಕರಾಗಿ ಕಸ್ಟಮ್ಸ್ ಸುಂಕವನ್ನು ತಪ್ಪಿಸುತ್ತಿದೆ’’ ಎಂದೂ ಕೇಂದ್ರ ಹಣಕಾಸು ಸಚಿವಾಲಯ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ವಿವರಿಸಿದೆ.

ಇದನ್ನೂ ಓದಿ: Xiaomi 12 series: 15 ನಿಮಿಷದಲ್ಲೇ ಫುಲ್ ಚಾರ್ಜ್! ಸಖತ್ತಾಗಿದೆ ಶಿಯೋಮಿ ಕಂಪನಿಯ ಈ ಹೊಸ ಸ್ಮಾರ್ಟ್​ಫೋನ್

ಒಟ್ಟಾರೆ, ಶಿಯೋಮಿ ಮೊಬೈಲ್‌ ಕಂಪನಿಯ ಮೇಲಿನ ಈ ಆರೋಪಗಳು ಸಾಬೀತಾದಲ್ಲಿ ಚೀನಾ ಮೂಲದ ಮೊಬೈಲ್‌ ಕಂಪನಿ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರಿಂದ ಭಾರತದಲ್ಲಿ ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮಾರಾಟದ ಮೇಲೂ ಹೊಡೆತ ಬೀಳಲಿದೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.
Published by:vanithasanjevani vanithasanjevani
First published: