Xiaomi 12 Pro: ಇದೇ ತಿಂಗಳು ಭಾರತೀಯ ಮಾರುಕಟ್ಟೆಗೆ ಬರಲಿದೆ ಶಿಯೋಮಿ 12 ಪ್ರೊ ಸ್ಮಾರ್ಟ್​ಫೋನ್​!

ಶಿಯೋಮಿ 12 ಪ್ರೊ

ಶಿಯೋಮಿ 12 ಪ್ರೊ

Xiaomi: ಶಿಯೋಮಿ 12 ಪ್ರೊ ಬಗ್ಗೆ ನಮಗೆ ಸಾಕಷ್ಟು ತಿಳಿದಿಲ್ಲವಾದರೂ, ಕಂಪನಿಯು ತನ್ನ ವೈಶಿಷ್ಟ್ಯಗಳು ಮತ್ತು ಕ್ಯಾಮೆರಾ ಸಾಮರ್ಥ್ಯವನ್ನು ಕೀಟಲೆ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ.

  • Share this:

    ಈ ವರ್ಷದ ಮಾರ್ಚ್ (March) ಮತ್ತು ಏಪ್ರಿಲ್ (April) ತಿಂಗಳಲ್ಲಿ ಅನೇಕ ಸ್ಮಾರ್ಟ್‌ಫೋನ್ ಗಳನ್ನು (Smartphone) ಭಾರತದಲ್ಲಿ ಬಿಡುಗಡೆ ಮಾಡಿದ್ದು ನಮಗೆಲ್ಲರಿಗೂ ಗೊತ್ತಿರುವಂತಹ ವಿಚಾರವೇ ಆಗಿದೆ. ಈಗ ಶಿಯೋಮಿ (Xiaomi) ತನ್ನ ಹೊಸ ಫ್ಲ್ಯಾಗ್ ಶಿಪ್ ಅನ್ನು ಏಪ್ರಿಲ್ 27 ರಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. "ಶೋಸ್ಟಾಪರ್" ಶಿಯೋಮಿ 12 ಪ್ರೊ (Xiaomi 12 Pro) ಸ್ಮಾರ್ಟ್‌ಫೋನ್ ಚೀನಾದಲ್ಲಿ (China) ಅನಾವರಣಗೊಂಡ ಕೆಲವೇ ವಾರಗಳ ನಂತರ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.


    ಶಿಯೋಮಿ 12 ಪ್ರೊ ಬಗ್ಗೆ ನಮಗೆ ಸಾಕಷ್ಟು ತಿಳಿದಿಲ್ಲವಾದರೂ, ಕಂಪನಿಯು ತನ್ನ ವೈಶಿಷ್ಟ್ಯಗಳು ಮತ್ತು ಕ್ಯಾಮೆರಾ ಸಾಮರ್ಥ್ಯವನ್ನು ಕೀಟಲೆ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಶಿಯೋಮಿ 12 ಪ್ರೊ ಕ್ಯಾಮೆರಾ ಸಾಮರ್ಥ್ಯಗಳ ಬಗ್ಗೆ ಶಿಯೋಮಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದೆ, ಇದು ಜನರನ್ನು ತುಂಬಾನೇ ಉತ್ಸುಕಗೊಳಿಸಿದೆ ಎಂದು ಹೇಳಬಹುದು. ಅಲ್ಲದೆ, ಶಿಯೋಮಿ 12 ಪ್ರೊ ಎಂಐ ಬ್ರ್ಯಾಂಡಿಂಗ್ ಅನ್ನು ಕೈ ಬಿಟ್ಟ ಭಾರತದ ಕಂಪನಿಯಿಂದ ಮೊದಲ ಸ್ಮಾರ್ಟ್‌ಫೋನ್ ಇದಾಗಲಿದೆ.


    ಶಿಯೋಮಿ 12 ಪ್ರೊ ಶಿಯೋಮಿ 11ಐ ಹೈಪರ್ ಚಾರ್ಜ್ ಮತ್ತು ಶಿಯೋಮಿ 11ಟಿ ನಂತರ 'ಎಂಐ' ಮೋನಿಕರ್ ಅನ್ನು ಸಹ ಕೈ ಬಿಟ್ಟಿದೆ, ಆದರೆ ಅವು ಮಧ್ಯಮ ರೇಂಜರ್ ಗಳಾಗಿದ್ದರೆ ಇದು ಫ್ಲ್ಯಾಗ್‌ಶಿಪ್ ಆಗಿದೆ.


    ಶಿಯೋಮಿ, 12 ಪ್ರೊ ಸ್ಮಾರ್ಟ್‌ಫೋನ್ ಅನ್ನು 'ಶೋಸ್ಟಾಪರ್' ಎಂದು ಕರೆಯುತ್ತದೆ ಮತ್ತು ಏಪ್ರಿಲ್ 27 ರ ಈವೆಂಟ್ ನಲ್ಲಿ ಕಂಪನಿಯು ಅನೇಕ ಸಾಧನಗಳನ್ನು ಬಿಡುಗಡೆ ಮಾಡಬಹುದು ಎಂದು ಊಹಾಪೋಹಗಳು ಹರಡಿವೆ. ಒನ್‌ಪ್ಲಸ್ ನಾರ್ಡ್ ಇಯರ್ ಬಡ್ಸ್ ಜೊತೆಗೆ ಒನ್‌ಪ್ಲಸ್ 10ಆರ್ ಮತ್ತು ಒನ್‌ಪ್ಲಸ್ ನಾರ್ಡ್ ಸಿಇ 2 ಲೈಟ್ ಅನ್ನು ಬಿಡುಗಡೆ ಮಾಡಲು ಶಿಯೋಮಿ ಒನ್‌ಪ್ಲಸ್ ಗೆ ಒಂದು ದಿನ ಮುಂಚಿತವಾಗಿ ತನ್ನ ಬಿಡುಗಡೆಯನ್ನು ನಿಗದಿಪಡಿಸಿದೆ.


    ಶಿಯೋಮಿ 12 ಪ್ರೋ ಜಾಗತಿಕವಾಗಿ 999 ಡಾಲರ್ (ಭಾರತೀಯ ಮೌಲ್ಯದಲ್ಲಿ ಅಂದಾಜು 76,300 ರೂಪಾಯಿ) ಗೆ ಲಭ್ಯವಿದೆ ಮತ್ತು ಶಿಯೋಮಿ ಎಂಐ 11 ಅಲ್ಟ್ರಾವನ್ನು ಸರಿ ಸುಮಾರು ಅದೇ ಬೆಲೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ, ಆದ್ದರಿಂದ ಶಿಯೋಮಿ 12 ಪ್ರೋ ಇದೇ ರೀತಿಯ 70,000 ರೂಪಾಯಿಗಳಿಂದ 75,000 ರೂಪಾಯಿಗಳ ನಡುವಿನ ಬೆಲೆಯ ಟ್ಯಾಗ್ ಅನ್ನು ಹೊಂದಿರುವ ಸಾಧ್ಯತೆಯಿದೆ.


    ಇದನ್ನೂ ಓದಿ: Meesho: 150 ಭಾರತೀಯ ಉದ್ಯೋಗಿಗಳನ್ನು ವಜಾ ಮಾಡಿದ ಫೇಸ್‌ಬುಕ್ ಬೆಂಬಲಿತ ಪ್ಲಾಟ್​ಫಾರ್ಮ್ ಮೀಶೋ


    ಶಿಯೋಮಿ 12 ಲೈಟ್ ನ ಬಿಡುಗಡೆ ವದಂತಿಗಳು ಸಹ ಹರಿದಾಡುತ್ತಿವೆ


    ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದರೆ, ಶಿಯೋಮಿ 12 ಲೈಟ್ ನ ಬಿಡುಗಡೆಯ ವದಂತಿಗಳು ಸಹ ಆನ್‌ಲೈನ್ ನಲ್ಲಿ ಹೊರ ಹೊಮ್ಮಲು ಪ್ರಾರಂಭಿಸಿವೆ. ಲೈಟ್ ರೂಪಾಂತರದ ಕೆಲವು ಪ್ರಮುಖ ವಿಶೇಷತೆಗಳು ಸೋರಿಕೆ ಆಗಿರುವ ಸುದ್ದಿಯ ಪ್ರಕಾರ ಸ್ನ್ಯಾಪ್ ಡ್ರ್ಯಾಗನ್ ಚಿಪ್, ಕರ್ವ್ಡ್ ಡಿಸ್ ಪ್ಲೇ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 67 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಮತ್ತು ಹೆಚ್ಚಿನವುಗಳೊಂದಿಗೆ ಹ್ಯಾಂಡ್ಸೆಟ್ ಬರಲಿದೆ ಎಂದು ಹೇಳಲಾಗುತ್ತಿದೆ.


    ಇದನ್ನೂ ಓದಿ: Piaggio: ಇದು ಜಸ್ಟಿನ್ ಬೀಬರ್​ ವಿನ್ಯಾಸಗೊಳಿಸಿದ ಸ್ಕೂಟರ್​.. ಸಖತ್ತಾಗಿದೆ ಫೀಚರ್​!


    ಶಿಯೋಮಿ 12 ಲೈಟ್ ಕಳೆದ ವರ್ಷ ನಡೆದ ಘಟನೆಯನ್ನು ಗಮನಿಸಿದರೆ ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿಲ್ಲ. ಏಕೆಂದರೆ 2021 ರಲ್ಲಿ, ಕಂಪನಿಯು ಏಪ್ರಿಲ್ ತಿಂಗಳಿನಲ್ಲಿ ಮೊದಲ ಬಾರಿಗೆ ಮೂರು ಎಂಐ 11 ಸಿರೀಸ್ ಫೋನ್ ಗಳನ್ನು ಅನಾವರಣಗೊಳಿಸಿತ್ತು. ಅವುಗಳೆಂದರೆ ಶಿಯೋಮಿ ಎಂಐ 11 ಅಲ್ಟ್ರಾ, ಎಂಐ 11ಎಕ್ಸ್ ಮತ್ತು ಎಂಐ 11ಎಕ್ಸ್ ಪ್ರೊ ಆಗಿದ್ದವು ಎಂದು ಹೇಳಬಹುದು. ನಂತರ ಜೂನ್ ತಿಂಗಳಿನಲ್ಲಿ ಎಂಐ 11 ಲೈಟ್ ಅನ್ನು ಸಹ ಘೋಷಿಸಲಾಗಿತ್ತು, ಇದು ಆ ಸಾಲಿನಲ್ಲಿ ನಾಲ್ಕನೇ ಸಾಧನವಾಗಿತ್ತು. ಈ ವರ್ಷವೂ ಅದೇ ಆಗಬಹುದು. ಶಿಯೋಮಿ 12 ಪ್ರೊ ಅನ್ನು ಬಿಡುಗಡೆ ಮಾಡುವ ಬಗ್ಗೆ ಕಂಪನಿಯು ಒಪ್ಪಿಕೊಳ್ಳುತಲೂ ಇಲ್ಲ ತಳ್ಳಿ ಹಾಕುತ್ತಲೂ ಇಲ್ಲ, ಇದು ಮುಂಬರುವ ವಾರಗಳಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆಯಿರಬಹುದು ಎಂದು ಹೇಳಲಾಗುತ್ತಿದೆ.

    Published by:Harshith AS
    First published: