ಹಬ್ಬದ ಋತುವಿನಲ್ಲಿರುವ ಗ್ರಾಹಕರಿಗೆ ಶಿಯೋಮಿ ಕೂಡ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಅ.16 ರಿಂದ ‘ದಿವಾಳಿ ವಿತ್ ಎಮ್ಐ ’ ಸೇಲ್ ನಡೆಸಲು ಯೋಜನೆ ಹಾಕಿಕೊಂಡಿದೆ. ಈಗಾಗಲೇ ಫ್ಲಿಪ್ಕಾರ್ಟ್, ರಿಯಲ್ಮಿ, ಸ್ನಾಪ್ಡೀಲ್ ಕೂಡ ಅದೇ ದಿನದಂದು ಸೇಲ್ ಆಯೋಜನೆ ಮಾಡಿದೆ. ಅದರ ಜೊತೆಗೀಗ ಶಿಯೋಮಿ ಗ್ರಾಹಕರಿಗೆ ಆಫರ್ ಬೆಲೆಗೆ ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ‘ದಿವಾಳಿ ವಿತ್ ಎಮ್ಐ’ ಸೇಲ್ ಹಮ್ಮಿಕೊಂಡಿದೆ.
ಮಿ.ಕಾಮ್ ವೆಬ್ ಸೈಟ್ನಲ್ಲಿ ಈ ಸೇಲ್ ನಡೆಯಲಿದೆ. ಗೋಲ್ಡ್, ಪ್ಲಾಟಿನಂ, ಡೈಮಂಡ್ ವಿಐಪಿ ಮೆಂಬರ್ಶಿಪ್ ಗ್ರಾಹಕರಿಗೆ ಮುಂಚಿತವಾಗಿ ಆಫರ್ ಸಿಗಲಿದೆ. ಜೊತೆಗೆ ಕ್ಯಾಶ್ಬ್ಯಾಕ್ ಆಫರ್ ನೀಡುತ್ತಿದೆ.
ಶಿಯೋಮಿ ಗ್ರಾಹಕರಿಗೆ ಈ ಸೇಲ್ ಮೂಲಕ ನೆರವಾಗಲು ಆಕ್ಸಿಸ್ ಮತ್ತು ಬ್ಯಾಂಕ್ ಆಫ್ ಬರೋಡಾ ಮೂಲದ ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕ್ ನೀಡುತ್ತಿದೆ.
‘
ದಿವಾಳಿ ವಿತ್ ಎಮ್ಐ’ ಸೇಲ್ನಲ್ಲಿ ಸ್ಮಾರ್ಟ್ಫೋನ್ ಮತ್ತು ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಮಿ10ಟಿ ಮತ್ತು ಮಿ 10ಟಿ ಪ್ರೊ ಸ್ಮಾರ್ಟ್ಫೋನ್ಗಳನ್ನು ಅ.16ರಂದು ಪರಿಚಯಿಸುತ್ತಿದೆ.
ಗ್ರಾಹಕರು ಆ್ಯಕ್ಸಿಸ್ ಮತ್ತು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ವಸ್ತುಗಳನ್ನು ಕೊಂಡರೆ 1 ಸಾವಿರ ಡಿಸ್ಕೌಂಟ್ ನೀಡಲಿದೆ. ಆರು ದಿನಗಳ ಕಾಲ ಈ ಸೇಲ್ ನಡೆಯಲಿದ್ದು, ಅ.21ರಂದು ಕೊನೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ