ಶಿಯೋಮಿ ಕಂಪೆನಿ (Xiaomi Company) ಅಂದಾಗ ಮೊದಲು ಈ ಕಂಪೆನಿಯ ಸ್ಮಾರ್ಟ್ಫೋನ್ಗಳೂ. ಈ ಕಂಪೆನಿ ಕೆಲವೇ ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆದರೆ ಇದು ತನ್ನ ಬ್ರಾಂಡ್ನ ಅಡಿಯಲ್ಲಿ ಗುಣಮಟ್ಟದ ಸ್ಮಾರ್ಟ್ಫೋನ್ (Smartphones) ಅನ್ನು ಬಿಡುಗಡೆ ಮಾಡುವ ಮೂಲಕ ನಂಬರ್ ಒನ್ ಮೊಬೈಲ್ ಕಂಪೆನಿಯೆಂದು ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ಇದರ ಸ್ಮಾರ್ಟ್ಫೋನ್ಗಳ ಫೀಚರ್ಸ್ ಅಂತಾನೇ ಹೇಳ್ಬಹುದು. ಯಾರೇ ಆಗಲಿ ಸ್ಮಾರ್ಟ್ಫೋನ್ಗಳನ್ನು ಖರೀದಿ ಮಾಡಬೇಕಾದರೆ ಅದರ ಫೀಚರ್ಸ್ (Features) ನೋಡಿ ನಂತರ ಬೆಲೆಯನ್ನು ಅಂದಾಜು ಮಾಡುತ್ತಾರೆ. ಆದ್ದರಿಂದ ಈ ಎರಡಕ್ಕೂ ಶಿಯೋಮಿ ಕಂಪೆನಿ ಸೂಕ್ತವಾಗಿದೆ ಎಂದರೆ ತಪ್ಪಾಗದು. ಏಕೆಂದರೆ ಇದು ಉತ್ತಮ ಗುಣಮಟ್ಟದ ಫೀಚರ್ಸ್ ಜೊತೆಗೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುವಂತೆ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಶಿಯೋಮಿ ಕಂಪೆನಿ ಇದೀಗ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲು ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್ಫೋನ್ ಬಿಡುಗಡೆಗೆ ಮೊದಲೇ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಸದ್ದಿನಲ್ಲಿದೆ. ಇದರ ವಿನ್ಯಾಸದಿಂದ ಹಿಡಿದು ಫೀಚರ್ಸ್ಗಳವರೆಗೂ ಭಾರೀ ವಿಶೇಷತೆಯಿಂದ ಕೂಡಿದ್ದು, ಸದ್ಯ ಇದರ ಕೆಲವೊಂದು ಫೀಚರ್ಸ್ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ಯಾವುದು ಆ ಸ್ಮಾರ್ಟ್ಫೋನ್?
ಶಿಯೋಮಿ ಕಂಪೆನಿ ಶಿಯೋಮಿ ಸಿಐವಿಐ 3 ಎಂಬ ಹೊಸ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಇದರ ಫೀಚರ್ಸ್ ಬಗ್ಗೆ ಮಾಹಿತಿ ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.
ಶಿಯೋಮಿ ಸಿಐವಿಐ 3 ಸ್ಮಾರ್ಟ್ಫೋನ್ ವಿನ್ಯಾಸ
ಶಿಯೋಮಿ ಸಿಐವಿಐ 3 ಸ್ಮಾರ್ಟ್ಫೋನ್ ಮುಖ್ಯವಾಗಿ 6.7 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಬಹುದು ಎನ್ನಲಾಗಿದೆ. ಇದಲ್ಲದೆ ಈ ಸ್ಮಾರ್ಟ್ಫೋನ್ ವಿಶೇಷವಾಗಿ ಡೈಮೆನ್ಸಿಟಿ 8200 ಚಿಪ್ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಜೊತೆಗೆ 8ಜಿಬಿ ರ್ಯಾಮ್ ಮತ್ತು 256 ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಯೊಂದಿಗೆ ಬರಬಹುದು ಎಂದು ಅಂದಾಜಿಸಲಾಗಿದೆ.
ಕ್ಯಾಮೆರಾ ಫೀಚರ್ಸ್
ವರದಿಗಳ ಪ್ರಕಾರ ಶಿಯೋಮಿ ಸಿಐವಿಐ 3 ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ವಿಶೇಷವಾಗಿ ಶಿಯೋಮಿಯ ಈ ಸ್ಮಾರ್ಟ್ಫೋನ್ನಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಹೇಳಲಾಗಿದೆ.
ಬ್ಯಾಟರಿ ಫೀಚರ್ಸ್ ಹೇಗಿರಬಹುದು?
ಶಿಯೋಮಿ ಸಿಐವಿಐ 3 ಸ್ಮಾರ್ಟ್ಫೋನ್ನ ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, ಇದು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, 80W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರಬಹುದು ಎನ್ನುವ ನಿರೀಕ್ಷೆಯಿದೆ.
ಶಿಯೋಮಿ ಸಿಐವಿಐ 3 ಸ್ಮಾರ್ಟ್ಫೋನ್ ಇನ್ನೂ ಹಲವಾರು ಫೀಚರ್ಸ್ಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಬಹಿರಂಗವಾಗಬಹುದು. ಹಾಗೇ ಇದರ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದರ ಜೊತೆಗೆ ಇದರ ಬೆಲೆ ಮತ್ತು ಲಭ್ಯತೆಯ ಮಾಹಿತಿ ಸಹ ಲಭ್ಯವಾಗಬಹುದು.
ಶಿಯೋಮಿ ಸಿಐವಿಐ 2 ಸ್ಮಾರ್ಟ್ಫೋನ್
ಶಿಯೋಮಿ ಕಂಪೆನಿ ಇದೇ ಸೀರಿಸ್ನಲ್ಲಿ ಕಳೆದ ಬಾರಿ ಶಿಯೋಮಿ ಸಿಐವಿಐ 2 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ಫೋನ್ 6.55 ಇಂಚಿನ ಓಎಲ್ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1000 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಸಾಮರ್ಥ್ಯವನ್ನು ನೀಡುತ್ತದೆ.
ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಭಾರೀ ಅಗ್ಗದ ಎರಡು ರೀಚಾರ್ಜ್ ಪ್ಲ್ಯಾನ್ಗಳ ಬಿಡುಗಡೆ
ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಇನ್ನು ಈ ಸ್ಮಾರ್ಟ್ಫೋನ್ ಕೂಡ ಡ್ಯುಯಲ್ ಸೆಲ್ಫಿ ಕ್ಯಾಮೆರಾಗಳನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ