ಇತ್ತೀಚೆಗೆ ಟೆಲಿಕಾಂ ವಲಯದಲ್ಲಿ (Telecom Company) ಅತ್ಯಂತ ಜನಪ್ರಿಯತೆ ಪಡೆದ ಕಂಪನಿಯೆಂದರೆ ಅದು ಜಿಯೋ. ಇದೀಗ ರಿಲಯನ್ಸ್ ಜಿಯೋ (Reliance Jio) ದೇಶದ ಮೂಲೆ ಮೂಲೆಯಲ್ಲೂ 5ಜಿ ನೆಟ್ವರ್ಕ್ (5G Network) ಸೇವೆಯನ್ನು ಗುರಿಯನ್ನು ಹೊಂದಿದೆ. ಅದೇ ರೀತಿಯಲ್ಲಿ ಇದುವರೆಗೆ ಹಲವು ನಗರಗಳಲ್ಲೂ ತನ್ನ ನೆಟ್ವರ್ಕ್ ಅನ್ನು ವಿಸ್ತರಿಸಿದೆ. ಇದೀಗ ಜಿಯೋ ಟ್ರೂ 5ಜಿ ಯನ್ನು ರೆಡ್ಮಿ ಸ್ಮಾರ್ಟ್ಫೋನ್ಗಳಲ್ಲಿ (Redmi Smartphone) ಬಳಕೆ ಮಾಡುವ ಉದ್ದೇಶದಿಂದ ಶಿಯೋಮಿ ಕಂಪನಿ ಕೂಡ ಜಿಯೋ ಜೊತೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇದರಿಂದ ರೆಡ್ಮಿ ಸ್ಮಾರ್ಟ್ಫೋನ್ ಬಳಕೆದಾರರಿಗೆ ಇನ್ನಷ್ಟು ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದಾಗಿದೆ. ಇದಲ್ಲದೆ ಗುಣಮಟ್ಟದ ವಿಡಿಯೋಗಳನ್ನು ನೋಡಲು, ಉತ್ತಮ ಕ್ಲಾರಿಟಿಯಲ್ಲಿ ವಿಡಿಯೋ ಕಾಲ್ನಲ್ಲಿ ಮಾತಾಡಲು ಈ ಐಡಿಯಾ ಪಾಲುದಾರಿಕೆಯಿಂದ ಸಾಧ್ಯವಾಗುತ್ತದೆ.
ಇನ್ಮುಂದೆ ರೆಡ್ಮಿ ಸ್ಮಾರ್ಟ್ಫೋನ್ ಬಳಕೆದಾರರು ಕೂಡ 5ಜಿ ನೆಟ್ವರ್ಕ್ ಅನ್ನು ಪಡೆಯಬಹುದಾಗಿದೆ. ಇದಕ್ಕಾಗಿಯೆ ಶಿಯೋಮಿ ಕಂಪನಿ ಜಿಯೋ ಜೊತೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇನ್ಮುಂದೆ ಸ್ಮಾರ್ಟ್ಫೋನ್ ಬಳಕೆದಾರರು 5ಜಿ ಪಡೆಯಬೇಕಿದ್ದರೆ, ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ ನಿಮಗೆ ಬೇಕಾದ ನೆಟ್ವರ್ಕ್ ಅನ್ನು ಆಯ್ಕೆ ಮಾಡಬಹುದು.
ಯಾವೆಲ್ಲಾ ಸ್ಮಾರ್ಟ್ಫೋನ್ಗಳಲ್ಲಿ ಲಭ್ಯವಾಗಲಿದೆ?
ಸ್ಟ್ಯಾಂಡ್ ಅಲೋನ್ 5ಜಿ ನೆಟ್ವರ್ಕ್ ಅನ್ನು ಬೆಂಬಲಿಸುವ ಮಾಡೆಲ್ಗಳು ರಿಲಯನ್ಸ್ ಜಿಯೋದ ಟ್ರೂ 5G ನೆಟ್ವರ್ಕ್ನಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಸಾಫ್ಟ್ವೇರ್ ಅಪ್ಡೇಟ್ ಮಾಡುವುದು ಮುಖ್ಯವಾಗಿರುತ್ತದೆ. ಸಕ್ರಿಯಗೊಳಿಸಲಾದ ಫೋನ್ಗಳಲ್ಲಿ ರೆಡ್ಮಿ 11 ಅಲ್ಟ್ರಾ 5G, ಶಿಯೋಮಿ 12 ಪ್ರೊ 5G, ಶಿಯೋಮಿ 11T ಪ್ರೋ 5G, ರೆಡ್ಮಿ ನೋಟ್ 11 ಪ್ರೋ+ 5G, ಶಿಯೋಮಿ 11 ಲೈಟ್ NE 5G, ರೆಡ್ಮಿ ನೋಟ್ 11T 5G, ರೆಡ್ಮಿ 11 ಪ್ರೈಮ್ 5G, ರೆಡ್ಮಿ ನೋಟ್ 10T5, ರೆಡ್ಮಿ 11X 5G, ರೆಡ್ಮಿ 11X ಪ್ರೊ 5G, ರೆಡ್ಮಿ K50i 5G, ಶಿಯೋಮಿ 11i 5G ಮತ್ತು ಶಿಯೋಮಿ 11i ಹೈಪರ್ಚಾರ್ಜ್ 5G ಒಳಗೊಂಡಿದೆ.
ಇದನ್ನೂ ಓದಿ: ಲ್ಯಾಪ್ಟಾಪ್ ಖರೀದಿಸುವ ಪ್ಲಾನ್ನಲ್ಲಿದ್ದೀರಾ? ಅಮೆಜಾನ್ನಲ್ಲಿದೆ ಬಂಪರ್ ಆಫರ್!
ಎರಡು ಸ್ಮಾರ್ಟ್ಫೋನ್ಗಳ ಮೇಲೆ 5ಜಿ ನೆಟ್ವರ್ಕ್ ಪರೀಕ್ಷೆ
ಶಿಯೋಮಿಯ ಸ್ಮಾರ್ಟ್ಫೋನ್ಗಳಾದ ರೆಡ್ಮಿ ಕೆ50ಐ ಮತ್ತು ರೆಡ್ಮಿ ನೋಟ್ 11T 5ಜಿ ರಿಲಯನ್ಸ್ ಜಿಯೋದ ಟ್ರೂ 5ಜಿ ನೆಟ್ವರ್ಕ್ಅನ್ನು ಪರೀಕ್ಷಿಸಲಾಯಿತು. ಈ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಸಹಾಯ ಮಾಡಲು 5ಜಿ ನೆಟ್ವರ್ಕ್ನಿಂದ ಯಾವುದೆ ತೊಂದರೆಗಳು ಬರುವುದಿಲ್ಲವೆಂದು ಖಚಿತವಾಯಿತು. ಇಂದು ಶಿಯೋಮಿ ಮತ್ತು ರೆಡ್ಮಿಯಿಂದ ಹೆಚ್ಚಿನ 5ಜಿ ನೆಟ್ವರ್ಕ್ ಅನ್ನು ಸಕ್ರಿಯಗೊಳಿಸಲಾದ ಸ್ಮಾರ್ಟ್ಫೋನ್ಗಳು ಜಿಯೋ ಟ್ರೂ 5ಜಿಗೆ ಉತ್ತಮ ಬೆಂಬಲವನ್ನು ನೀಡುತ್ತಿದೆ.
ಈ ಬಗ್ಗೆ ಶಿಯೋಮಿ ಅಧ್ಯಕ್ಷರ ಮಾತು
ಈ ಪಾಲುದಾರಿಕೆ ಕುರಿತು ಪ್ರತಿಕ್ರಿಯಿಸಿದ ಶಿಯೋಮಿ ಇಂಡಿಯಾದ ಅಧ್ಯಕ್ಷ ಬಿ. ಮುರಳಿಕೃಷ್ಣನ್, 'ಕಳೆದ ಎರಡು ವರ್ಷಗಳಲ್ಲಿ ಶಿಯೋಮಿ ಇಂಡಿಯಾ 5ಜಿ ನೆಟ್ವರ್ಕ್ ಅನ್ನು ತಮ್ಮ ಸಾಧನಗಳಲ್ಲಿ ತರಲು ಪ್ರಯತ್ನಿಸುತ್ತಿತ್ತು. ಪ್ರಾಮಾಣಿಕ ಬೆಲೆಯಲ್ಲಿ ಟಾಪ್-ಆಫ್-ಲೈನ್ ವೈಶಿಷ್ಟ್ಯಗಳೊಂದಿಗೆ ಬಲವಾದ 5ಜಿ ಅನುಭವವನ್ನು ಒದಗಿಸುವ ಸ್ಮಾರ್ಟ್ಫೋನ್ಗಳೊಂದಿಗೆ ನಾವು 5ಜಿ ನೆಟ್ವರ್ಕ್ನ ಬೆಳವಣಿಗೆಗೆ ಸಾಕ್ಷಿಯಾಗುತ್ತೇವೆ.
ಗ್ರಾಹಕರ ಅನುಭವ ಮತ್ತು ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸಲು ರಿಲಯನ್ಸ್ ಜಿಯೋದ ಟ್ರೂ 5ಜಿ ನೆಟ್ವರ್ಕ್ನೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ಗ್ರಾಹಕರು ತಮ್ಮ ಶಿಯೋಮಿ ಮತ್ತು ರೆಡ್ಮಿ ಹ್ಯಾಂಡ್ಸೆಟ್ಗಳಲ್ಲಿ ರಿಲಯನ್ಸ್ ಜಿಯೋದ ನಿಜವಾದ 5ಜಿ ನೆಟ್ವರ್ಕ್ ಅನ್ನು ಪಡೆಯಬಹುದು. ಇದರಿಂದ ಬಳಕೆದಾರರಿಗೆ ಇನ್ನಷ್ಟು ಸಹಕಾರಿಯಾಗಲಿದೆ. ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.
ಇನ್ನು ಮುಂದಿನ ದಿನಗಳಲ್ಲಿ ಶಿಯೋಮಿ ಕಂಪನಿಯ ಎಲ್ಲಾ ಸ್ಮಾರ್ಟ್ಫೋನ್ಗಳಲ್ಲು 5ಜಿ ನೆಟ್ವರ್ಕ್ ಸಕ್ರಿಯವಾಗಲಿದ್ದು, ಗ್ರಾಹಕರಿಗೆ ಇದರಿಂದ ಇನ್ನಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಜಿಯೋ ಮತ್ತು, ಶಿಯೋಮಿ ಕಂಪನಿ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ