• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Xiaomi Devices: ಸ್ಮಾರ್ಟ್​​ವಾಚ್​, ಇಯರ್​ಬಡ್ಸ್​ಗಳನ್ನು ಏಕಕಾಲದಲ್ಲಿ ಲಾಂಚ್​ ಮಾಡಲು ರೆಡಿಯಾಗಿದೆ ಶಿಯೋಮಿ ಕಂಪೆನಿ!

Xiaomi Devices: ಸ್ಮಾರ್ಟ್​​ವಾಚ್​, ಇಯರ್​ಬಡ್ಸ್​ಗಳನ್ನು ಏಕಕಾಲದಲ್ಲಿ ಲಾಂಚ್​ ಮಾಡಲು ರೆಡಿಯಾಗಿದೆ ಶಿಯೋಮಿ ಕಂಪೆನಿ!

ಶಿಯೋಮಿ ವಾಚ್​ ಎಸ್​​1 ಪ್ರೋ ಮತ್ತು ಶಿಯೋಮಿ ಇಯರ್​ಬಡ್ಸ್​ 4

ಶಿಯೋಮಿ ವಾಚ್​ ಎಸ್​​1 ಪ್ರೋ ಮತ್ತು ಶಿಯೋಮಿ ಇಯರ್​ಬಡ್ಸ್​ 4

ಶಿಯೋಮಿ ಕಂಪೆನಿ ತನ್ನ ಬ್ರಾಂಡ್​​ನ ಅಡಿಯಲ್ಲಿ ಸ್ಮಾರ್ಟ್​ವಾಚ್​ ಮತ್ತು ಇಯರ್​ಬಡ್ಸ್​ ಅನ್ನು ಪರಿಚಯಿಸುತ್ತಿದ್ದು, ಬಿಡುಗಡೆಗೆ ಮೊದಲೇ ಈ ಗ್ಯಾಜೆಟ್​ಗಳ ಫೀಚರ್ಸ್​ ಸೋಶಿಯಲ್ ಮೀಡಿಯಾದಲ್ಲಿ ಲೀಕ್​ ಆಗಿದೆ. ಹಾಗಿದ್ರೆ ಈ ಗ್ಯಾಜೆಟ್​ಗಳ ಫೀಚರ್ಸ್​ ಬಗ್ಗೆ ಕಂಪ್ಲೀಟ್​ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ.

ಮುಂದೆ ಓದಿ ...
 • Share this:

  ಟೆಕ್‌ ಮಾರುಕಟ್ಟೆಯಲ್ಲಿ (Tech Market) ಶಿಯೋಮಿ ಕಂಪೆನಿ (Xiaomi Company) ಟೆಕ್​ ಡಿವೈಸ್​ಗಳನ್ನು ಬಿಡುಗಡೆ ಮಾಡುವಲ್ಲಿ ಭಾರೀ ಮುಂಚೂಣಿಯಲ್ಲಿದೆ. ಶಿಯೋಮಿ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸುವ ಮೂಲಕ ಬಹಳಷ್ಟು ಬೇಡಿಕೆಯ ಕಂಪೆನಿಯೆಂದು ಗುರುತಿಸಿಕೊಂಡಿದೆ. ಇದೀಗ ಸ್ಮಾರ್ಟ್​ ಡಿವೈಸ್​ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಶಿಯೋಮಿ ಹೊಸದಾಗಿ ಸ್ಮಾರ್ಟ್‌ವಾಚ್‌ (Smartwatch) ಹಾಗೂ ಇಯರ್‌ಬಡ್ಸ್‌ (Earbuds) ಅನಾವರಣ ಮಾಡಲು ಮುಂದಾಗಿದ್ದು, ಈಗಾಗಲೇ ಟೆಕ್‌ ವಲಯದಲ್ಲಿ ಈ ಗ್ಯಾಜೆಟ್‌ಗಳ ಕೆಲವು ಮಾಹಿತಿಗಳು ಲೀಕ್‌ ಆಗಿವೆ. ಈ ಸ್ಮಾರ್ಟ್​​ ಡಿವೈಸ್​ಗಳು ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು ಹೊಸ ಸಂಚಲನ ಸೃಷ್ಟಿಸೋದಂತೂ ಗ್ಯಾರಂಟಿ.


  ಶಿಯೋಮಿ ಕಂಪೆನಿ ತನ್ನ ಬ್ರಾಂಡ್​​ನ ಅಡಿಯಲ್ಲಿ ಸ್ಮಾರ್ಟ್​ವಾಚ್​ ಮತ್ತು ಇಯರ್​ಬಡ್ಸ್​ ಅನ್ನು ಪರಿಚಯಿಸುತ್ತಿದ್ದು, ಬಿಡುಗಡೆಗೆ ಮೊದಲೇ ಈ ಗ್ಯಾಜೆಟ್​ಗಳ ಫೀಚರ್ಸ್​ ಸೋಶಿಯಲ್ ಮೀಡಿಯಾದಲ್ಲಿ ಲೀಕ್​ ಆಗಿದೆ. ಹಾಗಿದ್ರೆ ಈ ಗ್ಯಾಜೆಟ್​ಗಳ ಫೀಚರ್ಸ್​ ಬಗ್ಗೆ ಕಂಪ್ಲೀಟ್​ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ.


  ಯಾವೆಲ್ಲಾ ಗ್ಯಾಜೆಟ್​ಗಳು?


  ಸ್ಮಾರ್ಟ್​ವಾಚ್​- ಶಿಯೋಮಿ ವಾಚ್​ ಎಸ್​​1 ಪ್ರೋ


  ಇಯರ್​ಬಡ್ಸ್​- ಶಿಯೋಮಿ ಇಯರ್​ಬಡ್ಸ್​ 4


  ಶಿಯೋಮಿ ವಾಚ್​ ಎಸ್​​1 ಪ್ರೋ ಫೀಚರ್ಸ್​


  ಶಿಯೋಮಿ ವಾಚ್ S1 ಪ್ರೊ ಸ್ಮಾರ್ಟ್‌ವಾಚ್‌ 1.47 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದ್ದು, ಇದರ ಸುತ್ತಲಿನ ಬೆಜೆಲ್‌ಗಳು ತೆಳುವಾಗಿ ಆಕರ್ಷಕ ನೋಟ ನೀಡಲಿವೆ ಹಾಗೆಯೇ ವೃತ್ತಾಕಾರದ ಬಟನ್‌ನೊಂದಿಗೆ ವೃತ್ತಾಕಾರದ ಡಯಲ್ ಅನ್ನು ಹೊಂದಿರುವುದು ಇನ್ನಷ್ಟು ವಿಶೇಷ. ಈ ಮೂಲಕ ಈ ವಾಚ್‌ 480 x 480 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರಲಿದ್ದು, ಬಳಕೆದಾರರಿಗೆ ವಿಭಿನ್ನ ಅನುಭವ ನೀಡುವುದಂತೂ ಪಕ್ಕಾ.


  ಇದನ್ನೂ ಓದಿ:  ಸ್ಮಾರ್ಟ್‌ಫೋನ್‌ನಿಂದ ದೃಷ್ಟಿ ಕಳೆದುಕೊಂಡ ಮಹಿಳೆ! ಕಣ್ಣುಗಳನ್ನು ರಕ್ಷಿಸಲು ವೈದ್ಯರಿಂದ ಸಲಹೆ


  ಹಾಗೆಯೇ ಈ ವಾಚ್ ಹಲವಾರು ಆರೋಗ್ಯ ಮತ್ತು ಫಿಟ್‌ನೆಸ್ ಸಂಬಂಧಿತ ಫೀಚರ್ಸ್‌ಗಳನ್ನು ಹೊಂದಿರಲಿದ್ದು, ಪ್ರಮುಖವಾಗಿ ಹೃದಯ ಬಡಿತ ಮಾನಿಟರಿಂಗ್, SPO2 ಮಾನಿಟರಿಂಗ್ ಇತ್ಯಾದಿಗಳಿಗೆ ಬೆಂಬಲ ನೀಡಲಿದೆ ಎನ್ನಲಾಗಿದೆ. ಜೊತೆಗೆ 100 ಫಿಟ್‌ನೆಸ್ ಮೋಡ್‌ಗಳ ಆಯ್ಕೆ ಸಹ ಇದರಲ್ಲಿದ್ದು, ಐಓಎಸ್‌ ಹಾಗೂ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಸುಲಭವಾಗಿ ಬೆಂಬಲ ನೀಡುತ್ತದಂತೆ. ಶಿಯೋಮಿ ವಾಚ್ S1 ಪ್ರೊ ಸ್ಮಾರ್ಟ್‌ವಾಚ್‌ ನೀರಿನ ಪ್ರತಿರೋಧಕ್ಕಾಗಿ 5ATM ರೇಟಿಂಗ್ ಹೊಂದಿರಲಿದ್ದು, ಯವುದೇ ಆತಂಕ ಇಲ್ಲದೆ ಎಲ್ಲಾ ಖುತುವಿನಲ್ಲೂ ಬಳಕೆ ಮಾಡಬಹುದಾದ ಸೌಲಭ್ಯ ಕಲ್ಪಿಸಿಕೊಡಲಿದೆ ಎಂದು ತಿಳಿದುಬಂದಿದೆ.


  ಶಿಯೋಮಿ ವಾಚ್​ ಎಸ್​​1 ಪ್ರೋ ಮತ್ತು ಶಿಯೋಮಿ ಇಯರ್​ಬಡ್ಸ್​ 4


  ಬ್ಯಾಟರಿ ಫೀಚರ್ಸ್


  ಇನ್ನು ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 500mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರಲಿದ್ದು, ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಕಪ್‌ ನೀಡಲಿದೆ ಎನ್ನಲಾಗಿದೆ. ಇದಿಷ್ಟೇ ಅಲ್ಲದೆ, ಈ ವಾಚ್‌ ವಾಯರ್‌ಲೆಸ್‌ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತಿರುವುದು ಮತ್ತೊಂದು ವಿಶೇಷ ಎನ್ನಬಹುದು. ಈ ಬಗ್ಗೆ ಶಿಯೋಮಿ ಮಾಹಿತಿ ದೃಢಪಡಿಸಿದೆ.


  ಬೆಲೆ ಮತ್ತು ಲಭ್ಯತೆ


  ಈ ಶಿಯೋಮಿ ಕಂಪೆನಿಯ ಹೊಸ ಸ್ಮಾರ್ಟ್‌ವಾಚ್‌ ಬೆಳ್ಳಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, EUR 299 ಅಂದರೆ ಭಾರತದಲ್ಲಿ ಸುಮಾರು 26,600 ರೂಪಾಯಿ ಬೆಲೆ ಹೊಂದಿರಲಿದೆ ಎನ್ನಲಾಗಿದೆ.


  ಶಿಯೋಮಿ ಇಯರ್​ಬಡ್ಸ್​ 4 ಫೀಚರ್ಸ್​ 


  ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಲಗ್ಗೆಯಿಡಲಿರುವ ಶಿಯೋಮಿ ಇಯರ್‌ಬಡ್ಸ್‌4 ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದ್ದು, ಪ್ರಮುಖವಾಗಿ ಓಪನ್ ಇಯರ್‌ ವಿನ್ಯಾಸ ಹೊಂದಿರುವುದರಿಂದ ಕಿವಿಗೆ ಆರಾಮದಾಯಕ ಅನುಭವ ನೀಡುತ್ತವೆ. ಇದರೊಂದಿಗೆ ಸಕ್ರಿಯ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಹೊಂದಿದ್ದುಸ, ಯಾವುದೇ ಅಡೆತಡೆಯ ಶಬ್ಧದ ಅಡಚಣೆ ಇಲ್ಲದೆ ಕರೆ ಹಾಗೂ ಇನ್ನಿತರೆ ಸಮಯದಲ್ಲಿ ಉತ್ತಮ ಅನುಭವ ಪಡೆಯಬಹುದು.


  ಬ್ಯಾಟರಿ ಫೀಚರ್ಸ್​


  ಈ ಇಯರ್‌ಬಡ್ಸ್‌ 35mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಪ್ರತಿ ಇಯರ್‌ಬಡ್ ಆರು ಗಂಟೆಗಳವರೆಗೆ ಬ್ಯಾಕಪ್‌ ನೀಡಲಿವೆ ಎಂದು ಹೇಳಲಾತ್ತಿದೆ. ಹಾಗೆಯೇ ಚಾರ್ಜಿಂಗ್ ಕೇಸ್‌ 480mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 30 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ವಿಶೇಷ ಬಡ್ಸ್‌ ಫಾಸ್ಟ್‌ ಚಾರ್ಜಿಂಗ್‌ ಬೆಂಬಲಿಸಲಿದೆ ಎನ್ನಲಾಗಿದ್ದು, ಈ ಮೂಲಕ 10 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 2.5 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.
  ಇಯರ್​​ಬಡ್ಸ್​ ಬೆಲೆ ಮತ್ತು ಲಭ್ಯತೆ


  ಶಿಯೋಮಿ ಇಯರ್‌ಬಡ್ಸ್‌ 4 EUR 59 ಅಂದರೆ ಭಾರತದಲ್ಲಿ ಸುಮಾರು 5,200 ರೂಪಾಯಿಗಳು ಬೆಲೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದ್ದು, ಇದು ಹಸಿರು, ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಕಂಡುಬರಲಿದೆ.

  Published by:Prajwal B
  First published: