ಬಿಡುಗಡೆಗೆ ಸಿದ್ಧವಾದ ಶಿಯೋಮಿ ಗೇಮಿಂಗ್​ ಸ್ಮಾರ್ಟ್​ಫೋನ್​:  ಇದರ ಬೆಲೆಯೆಷ್ಟು ಗೊತ್ತಾ?

ಬ್ಲಾಕ್​ ಶಾರ್ಕ್​ 2 ಸ್ಮಾರ್ಟ್​ಫೋನ್​​ನಲ್ಲಿ ಪ್ರೈಮರಿ 48 ಮೆಗಾಫಿಕ್ಸೆಲ್​​ ಕ್ಯಾಮೆರಾ ಮತ್ತು ಸೆಕೆಂಡರಿ 12 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ನೀಡಿದ್ದಾರೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​​​​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

news18
Updated:May 25, 2019, 2:25 PM IST
ಬಿಡುಗಡೆಗೆ ಸಿದ್ಧವಾದ ಶಿಯೋಮಿ ಗೇಮಿಂಗ್​ ಸ್ಮಾರ್ಟ್​ಫೋನ್​:  ಇದರ ಬೆಲೆಯೆಷ್ಟು ಗೊತ್ತಾ?
ಶಿಯೋಮಿ ಬ್ಲಾಕ್​ ಶಾರ್ಕ್​ 2
  • News18
  • Last Updated: May 25, 2019, 2:25 PM IST
  • Share this:
ಚೀನಾದ ಶಿಯೋಮಿ ಸ್ಮಾರ್ಟ್​ಫೋನ್​ ಸಂಸ್ಥೆ ಗ್ರಾಹಕರಿಗಾಗಿ ಗೇಮಿಂಗ್​​ ಸ್ಮಾರ್ಟ್​ಫೋನ್​​ವೊಂದನ್ನು  ಪರಿಚಯಿಸಲು ಮುಂದಾಗಿದೆ. ಈ ಬಾರಿ ಶಿಯೋಮಿ ಬ್ಲಾಕ್​ ಶಾರ್ಕ್​ 2 ಹೆಸರಿನ ಸ್ಮಾರ್ಟ್​ಫೋನ್​ ಅನ್ನು ಗ್ರಾಹಕರ ಮುಂದಿರಿಸಲಿದೆ. ಹೊಸ ವೈಶಿಷ್ಯವನ್ನು ಅಳವಡಿಸಿಕೊಂಡು ತಯಾರಿಸಲಾದ ಶಾರ್ಕ್​2 ಸ್ಮಾರ್ಟ್​ಫೋನ್​ ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಮೇ. 27 ರಿಂದ ಆನ್​ಲೈನ್​ ಇ- ಕಾಮರ್ಸ್​ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ದೊರೆಯಲಿದೆ ಎಂದು ಕಂಪೆನಿ ತಿಳಿಸಿದೆ.

ಬ್ಲಾಕ್​ ಶಾರ್ಕ್​ 2 ಸ್ಮಾರ್ಟ್​ಫೋನ್​ ವೈಶಿಷ್ಟ್ಯಗಳು:

ನೂತನ ಬ್ಲಾಕ್​ ಶಾರ್ಕ್​ 2 ಸ್ಮಾರ್ಟ್​ಫೋನ್​ 6.39 ಇಂಚಿನ OLED ಡಿಸ್​ಪ್ಲೇ ಹೊಂದಿದ್ದು, ಕ್ವಾಲ್​ಕಾಮ್​ ಸ್ನಾಪ್​ಡ್ರಾಗನ್​​ 855 ನಿಂದ ಕಾರ್ಯನಿರ್ವಹಿಸುತ್ತಿದೆ. 12 GB RAM​​ ಮತ್ತು 256 GB ಇಂಟರ್​ನಲ್​ ಸ್ಟೊರೇಜ್​​ ಇದರಲ್ಲಿದೆ. ಅಂತೆಯೇ, ಫಿಂಗರ್​​ಪ್ರಿಂಟ್​​ ಸೆನ್ಸಾರ್​ ಜೊತೆಗೆ ಧೀರ್ಘಕಾಲದ ಬಳಕೆಗಾಗಿ 4,000mAh​​ ಬ್ಯಾಟರಿ ಅಳವಡಿಸಲಾಗಿದೆ. ಇನ್ನು ವೇಗವಾಗಿ ಚಾರ್ಜ್​ ಮಾಡಲು 27w ಫಾಸ್ಟ್​ ಚಾಜಿಂಗ್​​ ನೀಡಲಾಗಿದೆ.

ಬ್ಲಾಕ್​ ಶಾರ್ಕ್​ 2 ಸ್ಮಾರ್ಟ್​ಫೋನ್​​ನಲ್ಲಿ ಪ್ರೈಮರಿ 48 ಮೆಗಾಫಿಕ್ಸೆಲ್​​ ಕ್ಯಾಮೆರಾ ಮತ್ತು ಸೆಕೆಂಡರಿ 12 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ನೀಡಿದ್ದಾರೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​​​​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಈ ಸ್ಮಾರ್ಟ್​ಫೋನ್​ ಪ್ರೊಝೆನ್​ ಸಿಲ್​ವರ್​​ ಮತ್ತು ಶಾಡೋ ಬ್ಲಾಕ್​  ಬಣ್ಣಗಳಲ್ಲಿ ದೊರೆಯುತ್ತಿದೆ.

ಡಿಸ್​​ಪ್ಲೇ: 6.39 ಇಂಚಿನ OLED ಡಿಸ್​ಪ್ಲೇ

ಪ್ರೊಸೆಸರ್​​: ಕ್ವಾಲ್​ಕಾಮ್​ ಸ್ನಾಪ್​ಡ್ರಾಗನ್​​ 855

ಸ್ಟೊರೇಜ್​: 12 GB RAM​​ ಮತ್ತು 256 RAM ಇಂಟರ್​ನಲ್​ ಸ್ಟೊರೇಜ್​​ಕ್ಯಾಮೆರಾ: ಪ್ರೈಮರಿ 48 ಮೆಗಾಫಿಕ್ಸೆಲ್​​ ಕ್ಯಾಮೆರಾ + ಸೆಕೆಂಡರಿ 12 ಮೆಗಾಫಿಕ್ಸೆಲ್​​ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ: 20 ಮೆಗಾಫಿಕ್ಸೆಲ್

ಬ್ಯಾಟರಿ: 4,000ಎmAh​​ ಬ್ಯಾಟರಿ

ಇದನ್ನೂ ಓದಿ: ಕುಮಾರಸ್ವಾಮಿಗೆ ಕಿಂಚಿತ್ತಾದ್ರು ಮಾನ ಮರ್ಯಾದೆ ಇದ್ರೆ ರಾಜೀನಾಮೆ ನೀಡಲಿ; ಆಕ್ರೋಶ ವ್ಯಕ್ತಪಡಿಸಿದ ಆರ್​.ಆಶೋಕ್

ಬ್ಲಾಕ್​ ಶಾರ್ಕ್​ 2 ಸ್ಮಾರ್ಟ್​ಫೋನ್ ಬೆಲೆ:

-6 GB RAM​/128 GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ ರೂ. 33,000 ಅಂದಾಜಿಸಲಾಗಿದೆ.

-12 GB RAM​/ 256 GB ಸ್ಟೊರೇಜ್​​ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ 43,000 ಅಂದಾಜಿಸಲಾಗಿದೆ.First published:May 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading