ಶಿಯೋಮಿಯವರ ಹೊಸ ಪೊಕೋ ಮೊಬೈಲ್​


Updated:August 11, 2018, 3:40 PM IST
ಶಿಯೋಮಿಯವರ ಹೊಸ ಪೊಕೋ ಮೊಬೈಲ್​

Updated: August 11, 2018, 3:40 PM IST
ಶಿಯೋಮಿಯವರ ಮತ್ತೊಂದು ಹೊಸ ಮೊಬೈಲ್​ ಬ್ರ್ಯಾಂಡ್​ ಬಿಡುಗಡೆ ಮಾಡುತ್ತಿದ್ದು, ಒಪ್ಪೋ ಸಂಸ್ಥೆ ರಿಯಲ್​ ಮಿ ಎಂಬ ಹೊಸ ಮೊಬೈಲ್​ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.

ತನ್ನ ಹೊಸ ಸಂಸ್ಥೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್​ ಮೂಲಕ ತಿಳಿಸಿರುವ ಶಿಯೋಮಿ, ರಿಯಲ್​ ಮಿ ಸಂಸ್ಥೆಗೆ ಎದುರಾಗಿ ಪೊಕೋ ಮೊಬೈಲ್​ ಎಂಬ ಸಂಸ್ಥೆಯನ್ನು ಪರಿಚಯಿಸಿದೆ. ಸದ್ಯ ಈ ಬ್ರ್ಯಾಂಡ್​ ಮೂಲಕ ಯಾವೆಲ್ಲಾ ಎಲೆಕ್ಟ್ರಾನಿಕ್​ ವಸ್ತುಗಳನ್ನು ಮಾರಾಟ ಮಾಡಲು ಸಂಸ್ಥೆ ಮುಂದಾಗಿದೆ ಎಂಬುದನ್ನು ಇನ್ನೂ ತಿಳಿಸಿಲ್ಲ.

ಪೊಕೊ ಕೇವಲ ಭಾರತಕ್ಕೆ ಸೀಮಿತಕ್ಕೊಳಪಡುವ ಬ್ರ್ಯಾಂಡ್​ ಅಲ್ಲದೇ ಇದ್ದರೂ ಈ ಶಾಖೆಯನ್ನು ಆರಂಭಿಸುವ ಮುನ್ನಾ ದಿನ ಶಿಯೋಮಿ ಮಿ ಎ2 ಎಂಬ ಮೊಬೈಲ್​ನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇನ್ನು ಟ್ವಿಟರ್​ನಲ್ಲಿ ಹೇಳಿಕೊಂಡಂತೆ ಈ ಬ್ರ್ಯಾಂಡ್​ ವಿಶ್ವಮಟ್ಟದಲ್ಲೇ ಮಾರಾಟ ಆಗುತ್ತದೆ ಎಂದು ಹೇಳಲಾಗುತ್ತಿದೆ.


Loading...

ಎನ್​ಡಿವಿ ಅಂತರ್ಜಾಲ ವರದಿ ಪ್ರಕಾರ ಪೊಕೋ ಫೋನ್​ ಎಫ್​ 1 ಎಂಬ ನೂತನ ಮೊಬೈಲ್​ನ್ನು ಬಿಡುಗಡೆ ಮಾಡಲು ಸಂಸ್ಥೆ ನಿರ್ಧರಿಸಿದೆ ಎನ್ನಲಾಗಿದೆ. ಪೊಕೋ ಫೋನ್​ ಕುರಿತು ಭಾರತದ ಶೀಯೋಮಿ ಉತ್ಪಾದಕ ಘಟಕದ ಮುಖ್ಯಸ್ಥ ಜೈ ಮಣಿ ಟ್ವೀಟ್​ ಮಾಡಿದ್ದು, ಆರಂಭಿಕ ಹಂತದಿಂದಲೇ ಪೊಕೋ ಫೋನ್​ ಘಟಕ ಕಾರ್ಯ ನಿರ್ವಹಿಸುತ್ತದೆ. ಅತ್ಯುತ್ತಮ ಗುಣಮಟ್ಟದ ಮೊಬೈಲ್​ಗಳನ್ನು ನೀಡುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

 
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...