ಭಾರತಕ್ಕೆ ಬರುತ್ತಿದೆ ಶಿಯೋಮಿ ಸ್ಮಾರ್ಟ್​ ವಾಚ್​


Updated:July 18, 2018, 1:21 PM IST
ಭಾರತಕ್ಕೆ ಬರುತ್ತಿದೆ ಶಿಯೋಮಿ ಸ್ಮಾರ್ಟ್​ ವಾಚ್​
AmazfitIndia Twitter

Updated: July 18, 2018, 1:21 PM IST
ನವದೆಹಲಿ: ಸ್ಮಾರ್ಟ್​ ಫೋನ್​ ಜಗತ್ತಿನಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಫೇಮಸ್​ ಆಗಿರುವ ಶಿಯೋಮಿ ಇದೀಗ ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್​ ವಾಚ್​ ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಅಮೇಜ್​ಫಿಟ್​ ಹೆಂಬ ಹೆಸರಿನ ಸ್ಮಾರ್ಟ್​ ಕೈ ಗಡಿಯಾರವನ್ನು ಬಿಡುಗಡೆ ಮಾಡಲು ತೀರ್ಮಾನಿಸಿರುವ ಶಿಯೋಮಿ ತನ್ನ ಟ್ವಿಟರ್​ ಖಾತೆಯಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಇದೇ ಜುಲೈ 24ರಂದು ಸ್ಮಾರ್ಟ್​ ಕೈಗಡಿಯಾರ Amazfit Bip ಮತ್ತು Stratosನ್ನು ಭಾರತದಲ್ಲಿ ಬಿಡುಗಡೆ ಮಾಲಾಗುತ್ತಿದೆ ಎನ್ನಲಾಗಿದೆ.

ಆ್ಯಪಲ್​ನವರ ಐಒಎಸ್​ ಹಾಗು ಆ್ಯಂಡ್ರಾಯ್ಡ್​ ಸ್ಮಾರ್ಟ್​ ವಾಚ್​ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ಶಿಯೋಮಿಯವರ ಈ ಕೈಗಡಿಯಾರ ಕಳೆದ ಫೆಬ್ರವರಿಯಂದು $99 (6,800 ರೂ.) ಹಾಗೂ $199.99 ( 13,600 ರೂ)ಗೆ ಕೆಲ ದೇಶಗಳಲ್ಲಿ ಬಿಡುಗಡೆ ಮಾಡಿತ್ತು. ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಕೈಗಡಿಯಾರಗಳು ಲಭ್ಯವಾಗಲಿದೆ.

ಕೈಗಡಿಯಾರದ ವಿಶೇಷತೆಗಳು

176x176 ಪಿಕ್ಸೆಲ್​ ಹೊಂದಿರು ಅಮೇಜ್​ಫಿಟ್​ ಬಿಪ್​ 1.28 ಇಂಚುಗಳ ಡಿಸ್​ಪ್ಲೇ ಹೊಂದಿದೆ. ನೀರು, ದೂಳು ಸೇರಿಂದೆ ಇದರ ರಕ್ಷಣೆಗೆಂದು ಕಾರ್ನಿಂಗ್​ ಗೋರಿಲ್ಲ 3 ಗ್ಲಾಸ್​ನ್ನು ಅಳವಡಿಸಲಾಗಿದೆ. ಹೃದಯ ಬಡಿತ ಸೆನ್ಸಾರ್​ ಇರುವ ಈ ಮೊಬೈಲ್​ಗೆ 190mAh ಬ್ಯಾಟರಿ ಅಳವಡಿಲಾಗಿದೆ. ಕಂಪನಿ ಹೇಳಿಕೊಂಡಂತೆ ಒಂದು ಬಾರಿ ಚಾರ್ಜ್​ ಮಾಡಿದರೆ ನಾಲ್ಕು ತಿಂಗಳ ಕಾಲ ಯಾವುದೇ ತೊಂದರೆಯಿಲ್ಲದೇ ಈ ಕೈಗಡಿಯಾರ ಬಳಸಬಹುದು.

Amazfit Stratos ವಾಚ್​ 1.34 ಇಂಚುಗಳ ಡಿಸ್​ಪ್ಲೇ ಹೊಂದಿದೆ, 300x320 ಪಿಕ್ಸೆಲ್​ ವ್ಯವಸ್ಥೆ ಇದರಲ್ಲಿದೆ. ಡ್ಯುಯಲ್​ ಕೋರ್ ಪ್ರೊಸೆಸರ್​, 512MB RAM, ಗೈರೊಸ್ಕೋಪ್, ವಾಯು ಒತ್ತಡ ಸಂವೇದಕ, 290mAh ಬ್ಯಾಟೆರಿ, ಬ್ಲೂಟೂತ್​, ಎಲ್​ಟಿಇ ಸಪೋರ್ಟ್​ ಮಾಡುತ್ತದೆ.
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...