ಭಾರತೀಯ ಮಾರುಕಟ್ಟೆಯಲ್ಲಿ ಹಿಡಿತ ಕಳೆದುಕೊಂಡಿತಾ ಸ್ಯಾಮ್ಸಂಗ್​?


Updated:July 20, 2018, 2:27 PM IST
ಭಾರತೀಯ ಮಾರುಕಟ್ಟೆಯಲ್ಲಿ ಹಿಡಿತ ಕಳೆದುಕೊಂಡಿತಾ ಸ್ಯಾಮ್ಸಂಗ್​?

Updated: July 20, 2018, 2:27 PM IST
ಭಾರತದಲ್ಲಿ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ದಿಗ್ಗಜ ಸ್ಯಾಮ್ಸಂಗ್​ ಸಂಸ್ಥೆ ಚೀನೀ ಸ್ಮಾರ್ಟ್​ಫೋನ್​ ಉತ್ಪನ್ನ ಸಂಸ್ಥೆ ಶಿಯೋಮಿ ಎದರು ತನ್ನ ಮೌಲ್ಯವನ್ನು ಕಳೆದುಕೊಂಡಿದೆಯೇ? ಹೀಗೊಂದು ಪ್ರಶ್ನೆ ಇತ್ತೀಚೆಗೆ ಕಾಡತೊಡಗಿದೆ.

ಹೌದು! ಕ್ಯಾನಲೀಸ್ ಎಂಬ ಸಂಸ್ಥೆಯ ವರದಿ ಪ್ರಕಾರ, ಎರಡನೇ ವಾರ್ಷಿಕ ತ್ರೈಮಾಸಿಕದ ಅವಧಿಯಲ್ಲಿ ಶಿಯೋಮಿ ಹಾಗೂ ಸ್ಯಾಮ್ಸಂಗ್​ ಎರಡೂ ಸಂಸ್ಥೆ ಭಾರತಕ್ಕೆ ಅತ್ಯಂತ ಹೆಚ್ಚು ಮೊಬೈಲ್​ಗಳನ್ನು ಆಮದು ಮಾಡಿಕೊಂಡಿದ್ದು, ಅಂಕಿ ಅಂಶಗಳ ಪ್ರಕಾರ ಈ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಈ ಎರಡು ಸಂಸ್ಥೆಗಳಲ್ಲಿ ಕನಿಷ್ 99 ಲಕ್ಷ ಫೋನ್​ಗಳನ್ನು ಭಾರತಕ್ಕೆ ಆಮದು ಮಾಡಿಕೊಂಡಿವೆಯಂತೆ.

2017ರ ಅಂಕಿ ಅಂಶಗಳನ್ನು ಗಮನಿಸಿದರೆ ಶೇ,22ರಷ್ಟು ಮೊಬೈಲ್​ಗಳ ಆಮದು ಸಂಖ್ಯೆ ಏರಿಕೆಯಾಗಿರುವುದನ್ನು ನಾವು ಗಮನಿಸಬಹುದು, ಕೇವಲ ಶಿಯೋಮಿ ಮತ್ತು ಸ್ಯಾಮ್ಸಂಗ್​ ಮೊಬೈಲ್​ 32.6 ಮಿಲಿಯನ್​ ಮೊಬೈಲ್​ಗಳನ್ನು ಭಾರತೀಯ ಮಾರುಕಟ್ಟಗೆ ಆಮದು ಮಾಡಿಕೊಂಡಿವೆ.

ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆ ಆಳುತ್ತಿರುವ 3 ಚೀನೀ ಸಂಸ್ಥೆಗಳು

ಇನ್ನು ಚೀನಾದ ಪ್ರಮುಖ ಮೂರು ಮೊಬೈಲ್​ ಸಂಸ್ಥೆಗಳಾದ ಶಿಯೋಮಿ, ಓಪ್ಪೋ, ಹಾಗೂ ವಿವೊ ಮೊಬೈಲ್​ಗಳು ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯನ್ನು ಆಳುತ್ತಿವೆ ಎನ್ನಲಾಗಿದೆ. ಸ್ಯಾಮ್ಸಂಗ್​ ಸಂಸ್ಥೆಗೆ ನೇರಾನೇರ ಸ್ಪರ್ಧೆಯನ್ನು ಕೊಡುತ್ತಿರುವ ಶಿಯೋಮಿಯೊಂದಿಗೆ ಒಪ್ಪೋ 3.6 ಮಿಲಿಯನ್​ ಮೊಬೈಲ್​ ಫೋನ್​ ಹಾಗು ವಿವೊ ಸಂಸ್ಥೆ 3.1 ಮಿಲಿಯನ್​ ಮೊಬೈಲ್​ನ್ನು ಭಾರಕ್ಕೆ ಆಮದು ಮಾಡಿಕೊಂಡು ತಲಾ ಮೂರು ಹಾಗೂ 4 ನೇ ಸ್ಥಾನ ಪಡೆದುಕೊಂಡಿದೆ.

ಹೆಚ್ಚು ಆಮದುಗೊಂಡ ಮೊಬೈಲ್​
ಶಿಯೋಮಿಯವರ Redmi 5A (5,999 ರೂ) ಮೊಬೈಲ್​ ಅತ್ಯಂತ ಹೆಚ್ಚು ಆಮದು ಮಾಡಲಾಗಿದೆ (3.3 ಮಿಲಿಯನ್​ ), ಇನ್ನು 2.3 ಮಿಲಿಯನ್​ ಆಮುದುಗೊಂಡ ಸ್ಯಾಮ್ಸಂಗ್​ನವರ J2 Pro ಮೊಬೈಲ್​ ( 7,500) ಎರಡನೇ ಸ್ಥಾನ ಪಡೆದಿದೆ.
Loading...

ಇನ್ನು ಆ್ಯಪಲ್​ ಬ್ರ್ಯಾಂಡ್​ ಏನಾಗಿದೆ ಎಂದು ಹೇಳುವ ಅಗತ್ಯವೇ ಇಲ್ಲ, ಏಕೆಂದರೆ ಸಂಸ್ಥೆಯ ಹೆಸರಿನಲ್ಲೇ ಅತ್ಯಂತ ಹೆಚ್ಚು ಮೊಬೈಲ್​ಗಳು ಮಾರಾಟವಾಗುತ್ತದೆ. ಅದರಲ್ಲೂ 6s ಮೊಬೈಲ್​ ನಿರ್ಮಾಣವನ್ನು ಬೆಂಗಳೂರಿನಲ್ಲೇ ಸಂಸ್ಥೆ ತೀರ್ಮಾನಿಸಿದೆ.
First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ