• Home
  • »
  • News
  • »
  • tech
  • »
  • Xiaomi 13 Smartphone: ಐಫೋನ್‌ನಂತೆಯೇ ಫೀಚರ್ಸ್‌ ಹೊಂದಿದ ಶಿಯೋಮಿ 13 ಸ್ಮಾರ್ಟ್‌ಫೋನ್‌ ಬಿಡುಗಡೆ!

Xiaomi 13 Smartphone: ಐಫೋನ್‌ನಂತೆಯೇ ಫೀಚರ್ಸ್‌ ಹೊಂದಿದ ಶಿಯೋಮಿ 13 ಸ್ಮಾರ್ಟ್‌ಫೋನ್‌ ಬಿಡುಗಡೆ!

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌

Smartphone: ಶಿಯೋಮಿ 13 ಸ್ಮಾರ್ಟ್‌ಫೋನ್‌ ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಪ್ರಪಂಚದಾದ್ಯಂತ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಶಿಯೋಮಿ ಮಹತ್ವದ ಸ್ಥಾನವನ್ನು ಹೊಂದಿದೆ.

  • Share this:

    ಪ್ರಸ್ತುತ ಶಿಯೋಮಿ (Xiaomi) ತನ್ನ ಹೊಸ ಶಿಯೋಮಿi 13 (Xiaomi 13) ಮತ್ತು ಶಿಯೋಮಿ 13 ಪ್ರೊ (Xiaomi 13 Pro) ಸ್ಮಾರ್ಟ್‌ಫೋನ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಯೋಜಿಸುತ್ತಿದೆ. Xiaomi 13 ಮುಂಬರುವ ವಾರಗಳಲ್ಲಿ ಚೀನಾದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. Xiaomi 13 ಸಾಧನದ ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ, ಆದರೂ ಇದು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ, ಬಿಡುಗಡೆಗೆ ಮುಂಚಿತವಾಗಿ, Xiaomi 13 ಸಾಧನದ ಕೆಲವು ಫೀಚರ್ಸ್‌ (Features) ಮತ್ತು ರೆಂಡರ್‌ಗಳು ಆನ್‌ಲೈನ್‌ನಲ್ಲಿ (Online) ಸೋರಿಕೆಯಾಗುತ್ತಿವೆ. ಇದು ಇತ್ತೀಚಿನ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಬರುತ್ತಿರುವ ವಿಶೇಷ ಸ್ಮಾರ್ಟ್‌ಫೋನ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.


    ಶಿಯೋಮಿ 13 ಸ್ಮಾರ್ಟ್‌ಫೋನ್‌ ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಪ್ರಪಂಚದಾದ್ಯಂತ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಶಿಯೋಮಿ ಮಹತ್ವದ ಸ್ಥಾನವನ್ನು ಹೊಂದಿದೆ. ಇದೀಗ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಇನ್ನು ಮುಂದೆ Xiaomi 13 ಕೂಡ ಸೇರ್ಪಡೆಯಾಗುತ್ತದೆ.


    ಈ ಸ್ಮಾರ್ಟ್‌ಫೋನ್‌ನ ವಿನ್ಯಾಸ:


    ಪ್ರಸ್ತುತ ಕೆಲವು ಸೋರಿಕೆಗಳ ಮೂಲಕ ಮುಂಬರುವ Xiaomi 13 ಸಾಧನದ ವಿನ್ಯಾಸವು iPhone 14 Pro ಗೆ ಬಹುತೇಕ ಹೋಲುತ್ತದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಕೆಲವು ಫೋಟೋಗಳು Xiaomi 13 ಮತ್ತು Xiaomi 13 Pro ನ ಅಧಿಕೃತ ವಿನ್ಯಾಸವನ್ನು ಬಹಿರಂಗಪಡಿಸುತ್ತವೆ ಎಂದು ಹೇಳಲಾಗುತ್ತದೆ.


    ಇದನ್ನೂ ಓದಿ: ಬೆಸ್ಟ್​ ಕ್ಯಾಮೆರಾ ಫೋನ್​ ಹುಡುಕುತ್ತಿದ್ದೀರಾ? 15 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ


    ಸೋರಿಕೆಯಾದ ಫೋಟೋವು ಆಪಲ್‌ನ ಪ್ರಮುಖ ಮಾದರಿಗಳಿಗೆ ಹೋಲುವ ಫ್ಲಾಟ್ ಸ್ಕ್ರೀನ್‌ನೊಂದಿಗೆ Xiaomi 13 ಸ್ಮಾರ್ಟ್‌ಫೋನ್‌ನ ಫೀಚರ್‌ ಅನ್ನು ತೋರಿಸುತ್ತದೆ.


    Xiaomi 13 smartphone launch with features similar to iPhone
    ಶಿಯೋಮಿ 13 ಸ್ಮಾರ್ಟ್‌ಫೋನ್


    ಆನ್‌ಲೈನ್‌ನಲ್ಲಿ ಲೀಕ್‌ ಆಗಿರುವ ವಿವರಗಳು Xiaomi 13 ಬಾಕ್ಸಿ ವಿನ್ಯಾಸವನ್ನು ಹೊಂದಿದೆ ಎಂದು ತೋರಿಸುತ್ತದೆ. ಮತ್ತು ಇದು ಸಮತಟ್ಟಾದ ಬದಿಗಳು ಮತ್ತು ಶಾರ್ಪ್  ಅನ್ನು ಹೊಂದಿದೆ. ಸಾಧನವು ಕನಿಷ್ಟ ಸ್ಪೆಕ್ಸ್‌ಗಳನ್ನು ಹೊಂದಿರುವಂತೆ ತೋರುತ್ತಿದೆ ಮತ್ತು


    ಕ್ಯಾಮೆರಾ ವಿನ್ಯಾಸ


    ಮೇಲ್ಭಾಗದ ಮಧ್ಯದಲ್ಲಿ ಪಂಚ್-ಹೋಲ್ ಕ್ಯಾಮೆರಾವನ್ನು ಹೊಂದಿದೆ. ಇದರ ಹಿಂದಿನ ಕ್ಯಾಮೆರಾ ಸೆಟಪ್ ವಿನ್ಯಾಸವು ಉನ್ನತ ಮಟ್ಟದ ಐಫೋನ್ ಪ್ರೊ ಮಾದರಿಗಳನ್ನು ಹೋಲುತ್ತದೆ. ನಿರ್ದಿಷ್ಟವಾಗಿ, ಈ ಸಾಧನವು ಕ್ಯಾಮೆರಾ ಬಂಪ್ ಅನ್ನು ಹೊಂದಿದೆ. Xiaomi 13 ಸಾಧನವು ಹಿಂಭಾಗದಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ಲೀಕ್‌ ಆದ ವರದಿಗಳು ಸೂಚಿಸುತ್ತವೆ. ಈ ಸ್ಮಾರ್ಟ್‌ಫೋನ್‌ ಇನ್ನಷ್ಟು ಕ್ಯಾಮೆರಾ ಫೀಚರ್ಸ್‌ ಅನ್ನು ಹೊಂದಿರಲಿದೆ ಎಂದು ತಂತ್ರಜ್ಞರು ವರದಿಯಲ್ಲಿ ವರದಿಯಲ್ಲಿ ತಿಳಿಸಿದ್ದಾರೆ.


    ಇತರ ಫೀಚರ್ಸ್:


    ಮುಖ್ಯವಾಗಿ ಇದು ಯಾವುದೇ ಹೆಡ್‌ಫೋನ್ ಜ್ಯಾಕ್ ಹೊಂದಿಲ್ಲ ಎಂದು ತೋರುತ್ತದೆ. ಆದ್ದರಿಂದ, Xiaomi ಐಫೋನ್ 14 ಪ್ರೊ ಮಾದರಿಯಲ್ಲಿ ಪರಿಚಯಿಸಲಾದ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಪರಿಚಯಿಸುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ. ಏಕೆಂದರೆ Xiaomi ಈಗಾಗಲೇ ಇದೇ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೊಂಡಿದೆ. ಒಟ್ಟಾರೆಯಾಗಿ Xiaomi 13 ನ ಒಟ್ಟಾರೆ ವಿನ್ಯಾಸವು ಇತ್ತೀಚಿನ iPhone 14 Pro ಮಾದರಿಗಳನ್ನು ನೆನಪಿಸುತ್ತದೆ ಎಂದು ಹೇಳಲಾಗುತ್ತದೆ.


    ಇದಿಷ್ಟು ಮುಂಬರುವ Xiaomi 13 ಸ್ಮಾರ್ಟ್‌ಫೋನ್‌ನ ಸದ್ಯಕ್ಕೆ ಇದುವರೆಗೆ ಲೀಕ್‌ ಆದ ಫೀಚರ್ಸ್‌ಗಳಾಗಿವೆ. Xiaomi 13 ಸಾಧನವು ಮುಂದಿನ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಮೊದಲು ಚೀನಾದಲ್ಲಿ ಬಿಡುಗಡೆಯಾಗುತ್ತದೆ. ಇದರ ಜೊತೆಗೆ ಈ ಕೆಲವೇ ದಿನಗಳಲ್ಲಿ ಇದರ ಫೀಚರ್ಸ್‌, ಇನ್ನು ಒಳ್ಳೆಯ ಫೋಟೋಗಳನ್ನು ಬಿಡುಗಡೆಯಾಗುತ್ತದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.

    Published by:Prajwal B
    First published: