ಮೊಬೈಲ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಕಂಪೆನಿಯೆಂದು ಗುರುತಿಸಿಕೊಂಡಿರುವ ಶೀಯೋಮಿ ಕಂಪೆನಿ (Xiaomi Company). ಪ್ರತೀ ವರ್ಷ ಏನಾದರೊಂದು ವಿಶೇಷತೆಗಳೊಂದಿಗೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿರುತ್ತದೆ. ಅದರಲ್ಲೂ ಶಿಯೋಮಿ ಪರಿಚಯಿಸುವಂತಹ ಸ್ಮಾರ್ಟ್ಫೋನ್ಗಳೆಲ್ಲವೂ ಉತ್ತಮ ಗುಣಮಟ್ಟದ ಫೀಚರ್ಸ್ಗಳನ್ನು ಹೊಂದಿದ್ದು, ವಿನ್ಯಾಸದ ಮೂಲಕವೇ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಕಂಪೆನಿ ಕಳೆದ ಬಾರಿ ತನ್ನ ಬ್ರಾಂಡ್ನ ಅಡಿಯಲ್ಲಿ ಶಿಯೋಮಿ 12 ಸೀರಿಸ್ನ (Xiaomi 12 Series) ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿತ್ತು. ಈ ಬಾರಿ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದ್ದು, ಅದನ್ನು ಶಿಯೋಮಿ 13 ಪ್ರೋ (Xiaomi 13 Pro) ಎಂದು ಗುರುತಿಸಲಾಗಿದೆ. ಈ ಮೊಬೈಲ್ ಈ ಹಿಂದೆ ಬಿಡುಗಡೆಯಾಗಿರುವ ಶಿಯೋಮಿ 12 ಸೀರಿಸ್ ಸ್ಮಾರ್ಟ್ಫೋನ್ನ ಉತ್ತರಾಧಿಕಾರಿಯಾಗಿರಲಿದೆ ಎಂದು ಹೇಳಲಾಗಿದೆ.
ಶಿಯೋಮಿ ಕಂಪೆನಿಯಿಂದ ಬಿಡುಗಡೆಯಾಗುತ್ತಿರುವ ಶಿಯೋಮಿ 13 ಪ್ರೋ ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 26 ರಂದು ಮಾರುಕಟ್ಟೆ ಎಂಟ್ರಿ ನೀಡಲಿದೆ. ಇನ್ನು ಇದು 5ಜಿ ಸಪೋರ್ಟ್ ಅನ್ನು ಹೊಂದಿದ್ದು, ಹಲವಾರು ಫೀಚರ್ಸ್ಗಳನ್ನು ಒಳಗೊಂಡಿದೆ. ಇದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.
ಶಿಯೋಮಿ 13 ಪ್ರೋ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿನ್ಯಾಸ
ಶಿಯೋಮಿ 13 ಪ್ರೋ ಬಿಡುಗಡೆಯ ದಿನಾಂಕ ಸದ್ಯ ಖಚಿತವಾಗಿದೆ. ಶಿಯೋಮಿ 13 ಪ್ರೋ ಸ್ಮಾರ್ಟ್‌ಫೋನ್ 6.7 ಇಂಚಿನ OLED ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಸ್ಕ್ರೀನ್ 120Hz ರಿಫ್ರೆಶ್ ದರ ಪಡೆದಿರಲಿದೆ. ಜೊತೆಗೆ ಡಿಸ್‌ಪ್ಲೇಯು ಡಾಲ್ಬಿ ವಿಷನ್ ಮತ್ತು HDR10 ಗೆ ಬೆಂಬಲವನ್ನು ಸಹ ಒಳಗೊಂಡಿರಲಿದೆ. ಇದರೊಂದಿಗೆ ಇದರಲ್ಲಿ ಡಿಸ್ಪ್ಲೇನ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಅಳವಡಿಸಿದ್ದಾರೆ. ಈ ಡಿಸ್‌ಪ್ಲೇಯು ಕ್ಯೂ ಹೆಚ್ಡಿ ಪ್ಲಸ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ.
ಇದನ್ನೂ ಓದಿ: ಈ ರೂಲ್ಸ್ ಮೀರಿದ್ರೆ ಬ್ಲಾಸ್ಟ್ ಆಗುತ್ತೆ ನಿಮ್ಮ ಫೋನ್! ಇದ್ರಿಂದ ಹೀಗೆ ಬಚಾವಾಗಿ!
ಇನ್ನು ಈ ಡಿಸ್ಪ್ಲೇನಲ್ಲಿ LTPO ಟೆಕ್ನಾಲಜಿಯನ್ನು ಅಳವಡಿಸಲಾಗಿದ್ದು, ಈ ಮೂಲಕ ಬೆಳಕಿನ ಸ್ಥಿತಿಗೆ ಅನುಗುಣವಾಗಿ ಡಿಸ್‌ಪ್ಲೇಯು ಆಟೋಮ್ಯಾಟಿಕ್ ಆಗಿ ಕಲರ್ ಟೆಂಪರೇಚರ್ಗೆ ಬದಲಾಗುತ್ತಿರುತ್ತದೆ.
ಕ್ಯಾಮೆರಾ ಫೀಚರ್ಸ್
ಶಿಯೋಮಿ 13 ಪ್ರೋ ಹಿಂದಿನ ಸರಣಿಯ ಸ್ಮಾರ್ಟ್ಫೋನ್ನ ಕ್ಯಾಮೆರಾ ವ್ಯವಸ್ಥೆಗಿಂತ ಅಪ್‌ಗ್ರೇಡ್ ಆಗಿದ್ದು, ಇದು Leica ಕ್ಯಾಮೆರಾ ಸಿಸ್ಟಮ್ ಅನ್ನು ಒಳಗೊಂಡಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬಿಡುಗಡೆಯಾಗುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಇನ್ನೆರಡು ಕ್ಯಾಮೆರಾಗಳು ಅಲ್ಟ್ರಾ ವೈಡ್ ಹಾಗೂ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರಲಿವೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಶಿಯೋಮಿ 13 ಪ್ರೋ ಇತ್ತೀಚಿನ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಅನ್ನು ಸಹ ಪಡೆದಿದೆ. ಇನ್ನು ಈ ಸ್ಮಾರ್ಟ್ಫೋನ್ನ ಸ್ಟೋರೇಜ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು 8ಜಿಬಿ ರ್‍ಯಾಮ್ ಮತ್ತು 128ಜಿಬಿ, 8ಜಿಬಿ ರ್‍ಯಾಮ್ ಮತ್ತು 256ಜಿಬಿ, 12ಜಿಬಿ ರ್‍ಯಾಮ್ ಮತ್ತು 256ಜಿಬಿ ಮತ್ತು 12ಜಿಬಿ ರ್‍ಯಾಮ್ ಮತ್ತು 512ಜಿಬಿ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ.
ಬ್ಯಾಟರಿ ಫೀಚರ್ಸ್
ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ 4,820mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿರಲಿದೆ. ಇದಲ್ಲದೇ 50W ಸಾಮರ್ಥ್ಯದ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿರಲಿದ್ದು, ಅಂಡರ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯವನ್ನು ನೀಡಲಾಗಿದೆ.
ಶಿಯೋಮಿ 13 ಪ್ರೋ ಸ್ಮಾರ್ಟ್ಫೋನ್ನ ಬೆಲೆ ನಿರೀಕ್ಷೆ
ಶಿಯೋಮಿ 13 ಪ್ರೋ ಸ್ಮಾರ್ಟ್ಫೋನ್ನ ಆರಂಭಿಕ ವೇರಿಯಂಟ್ ಬೆಲೆ ಚೀನಾದಲ್ಲಿ CNY 4,999 ಆಗಿರಲಿದೆ. ಅಂದರೆ ಭಾರತದಲ್ಲಿ ಆರಂಭಿಕ ವೇರಿಯಂಟ್ ಬೆಲೆ ಸುಮಾರು 59,200 ರೂಪಾಯಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಈ ಫೋನ್ ಸೆರಾಮಿಕ್ ವೈಟ್, ಸೆರಾಮಿಕ್ ಬ್ಲ್ಯಾಕ್, ಫ್ಲೋರಾ ಗ್ರೀನ್ ಹಾಗೂ ಮೌಂಟೆನ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ