ಸ್ಮಾರ್ಟ್ಫೋನ್ ಕಂಪೆನಿಗಳಲ್ಲಿ ಭಾರೀ ಮುಂಚೂಣಿಯಲ್ಲಿರುವ ಕಂಪೆನಿಯೆಂದರೆ ಅದು ಶಿಯೋಮಿ. ಶೀಯೋಮಿ ಕಂಪನಿ (Xiaomi Company) ಈವರೆಗೆ ಬಹಳಷ್ಟು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಅದೇ ರೀತಿ ಈ ಕಂಪೆನಿಯ ಸ್ಮಾರ್ಟ್ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೂ ಇದೆ. ಶಿಯೋಮಿ ಕೆಲವೇ ದಿನಗಳ ಹಿಂದೆ ತನ್ನ ಬ್ರಾಂಡ್ನ ಅಡಿಯಲ್ಲಿ ರೆಡ್ಮಿ ನೋಟ್ 12 ಸೀರಿಸ್ನ (Redmi Note 12 Series) ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದು ಬಹಳಷ್ಟು ನಿರೀಕ್ಷೆಯಲ್ಲಿದ್ದ ಸ್ಮಾರ್ಟ್ಫೋನ್ಗಳಲ್ಲಿ ಒಂದಾಗಿದೆ. ಇದೀಗ ಶಿಯೋಮಿ ಸ್ಮಾರ್ಟ್ಫೋನ್ ಪ್ರಿಯರಿಗೆ ಕಂಪನಿ ಗುಡ್ನ್ಯೂಸ್ ನೀಡಿದೆ. ಕಂಪೆನಿ ಕಳೆದ ಡಿಸೆಂಬರ್ 2022ರಲ್ಲಿ ಚೀನಾ ಮಾರುಕಟ್ಟೆಯಲ್ಲಿ ಹೊಸ ಶಿಯೋಮಿ 13 ಸೀರಿಸ್ನ (Xiaomi 13 Series) ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿತ್ತು. ಇದೀಗ ಈ ಸ್ಮಾರ್ಟ್ಫೋನ್ಗಳು ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಕಾಲಿಡುತ್ತದೆ ಎಂದು ಸೂಚನೆ ನೀಡಿದೆ. ಇನ್ನು ಈ ಸೀರಿಸ್ನ ಸ್ಮಾರ್ಟ್ಫೋನ್ಗಳು ಮುಂದಿನ ಜೂನ್ ತಿಂಗಳಲ್ಲಿ ಮಾರಕಟ್ಟೆಯಲ್ಲಿ ಲಾಂಚ್ ಆಗಬಹುದೆಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.
ಶಿಯೋಮಿ ಕಂಪೆನಿಯ ಶಿಯೋಮಿ 13 ಸೀರಿಸ್ನ ಸ್ಮಾರ್ಟ್ಫೋನ್ಗಳು ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದು ಈ ಹಿಂದೆ ಬಿಡುಗಡೆಯಾದ ಶಿಯೋಮಿ 12 ಪ್ರೋ ಸ್ಮಾರ್ಟ್ಫೋನ್ನ ಅಪ್ಡೇಟ್ ವರ್ಷನ್ ಆಗಿ ಬರಲಿದೆ ಎಂದು ಕಂಪೆನಿ ಹೇಳಿದೆ. ಹಾಗಿದ್ರೆ ಭಾರತದಲ್ಲಿ ಮುಂಬರುವ ಶಿಯೋಮಿ 13 ಸೀರಿಸ್ ಸ್ಮಾರ್ಟ್ಫೋನ್ನ ಫೀಚರ್ಸ್, ಬೆಲೆ ಹೇಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಯಾವೆಲ್ಲಾ ಸ್ಮಾರ್ಟ್ಫೋನ್ಗಳು?
ಶಿಯೋಮಿ ಕಂಪನಿಯಿಂದ ತನ್ನ 13 ಸೀರಿಸ್ನಲ್ಲಿ 2022ರಲ್ಲಿ ಎರಡು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿತ್ತು. ಅವುಗಳೆಂದರೆ ಶಿಯೋಮಿ 13 ಮತ್ತು ಶಿಯೋಮಿ 13 ಪ್ರೋ ಸ್ಮಾರ್ಟ್ಫೋನ್ಗಳು. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನ್ಗಳಿಗೆ ಭಾರೀ ಬೇಡಿಕೆಯಿದೆ. ಅಷ್ಟೇ ವಿಶೇಷವಾದ ಫೀಚರ್ಸ್ಗಳನ್ನೂ ಈ ಸ್ಮಾರ್ಟ್ಫೋನ್ಗಳು ಹೊಂದಿದೆ.
ಇದನ್ನೂ ಓದಿ: ಬಜೆಟ್ ಬೆಲೆಯ ಅಸುಸ್ ಕಂಪನಿಯಿಂದ ಹೊಸ ಲ್ಯಾಪ್ಟಾಪ್ ಬಿಡುಗಡೆ, ಫೀಚರ್ಸ್ ಹೇಗಿದೆ?
ಶಿಯೋಮಿ 13 ಸ್ಮಾರ್ಟ್ಫೋನ್ ಫೀಚರ್ಸ್
ಶಿಯೋಮಿ 13 ಸೀರಿಸ್ನ ಮೂಲ ಮಾದರಿಯಾಗಿ ಬಿಡುಗಡೆಯಾಗಿರುವ ಶಿಯೋಮಿ 13 ಸ್ಮಾರ್ಟ್ಫೋನ್ ಮುಖ್ಯವಾಗಿ 6.36-ಇಂಚಿನ ಓಎಲ್ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಆದರೆ, ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 1900 ನಿಟ್ಸ್ ಪೀಕ್ ಬ್ರೈಟ್ನೆಸ್, HDR10+ ಮತ್ತು ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ನಂತಹ ಪ್ರೀಮಿಯಂ ಫೀಚರ್ಸ್ಗಳನ್ನು ಇದು ಹೊಂದಿದೆ. ಇನ್ನು ಇದರ ಸ್ಟೋರೇಜ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು 12ಜಿಬಿ ರ್ಯಾಮ್ ಮತ್ತು 512ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದು ಇತ್ತೀಚಿನ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 8 ಜನ್ 2 ಪ್ರೊಸೆಸರ್ ಹೊಂದಿರುವ ಶಿಯೋಮಿ 13 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಫೀಚರ್ಸ್
ಶಿಯೋಮಿ 13 ಸ್ಮಾರ್ಟ್ಫೊನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಆದರೆ, ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್, 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 12ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ಗಳನ್ನು ಅಳವಡಿಸಲಾಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಿದ್ದಾರೆ.
ಬ್ಯಾಟರಿ ಫೀಚರ್ಸ್
ಈ ಸ್ಮಾರ್ಟ್ಫೋನ್ನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಇದು 67W ವೇಗದ ವೈರ್ಡ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ ಬೆಂಬದ 4500mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 5ಜಿ ನೆಟ್ವರ್ಕ್ ಅನ್ನು ಬೆಂಬಲಿಸುತ್ತದೆ.
ಶಿಯೋಮಿ 13 ಪ್ರೋ ಸ್ಮಾರ್ಟ್ಫೋನ್ ಫೀಚರ್ಸ್
ಶಿಯೋಮಿ 13 ಸೀರಿಸ್ನಲ್ಲಿ ಬಿಡುಗಡೆಯಾಗಿರುವ ಹೊಸ ಸ್ಮಾರ್ಟ್ಫೋನ್ ಎಂದರೆ ಅದು ಶಿಯೋಮಿ 13 Pro ಸ್ಮಾರ್ಟ್ಫೋನ್. ಇದು ವಿಶೇಷವಾಗಿ 6.73 ಇಂಚಿನ 2ಕೆ ಓಎಲ್ಇಡಿ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಸಾಮರ್ಥ್ಯದ ಜೊತೆಗೆ 1900 ನಿಟ್ಸ್ ಪೀಕ್ ಬ್ರೈಟ್ನೆಸ್, HDR10+ ಮತ್ತು ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ನಂತಹ ಫೀಚರ್ಸ್ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್12ಜಿಬಿ ರ್ಯಾಮ್ ಮತ್ತು 512ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 8 ಜೆನ್ 2 ಪ್ರೊಸೆಸರ್ ಹೊಂದಿದ್ದು, ಈ ಶಿಯೋಮಿ 13 ಪ್ರೋ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬೆಲೆ ಮತ್ತು ಲಭ್ಯತೆ
ಶಿಯೋಮಿ 13 ಸ್ಮಾರ್ಟ್ಫೋನ್ 4 ವೇರಿಯಂಟ್ಗಳ:ಲ್ಲಿ ಲಭ್ಯವಿರುತ್ತದೆ. ಅದರಲ್ಲಿ 8GB+128GB ರೂಪಾಂತರಕ್ಕೆ ಸಿಎನ್ವೈ 3999 ಅಂದರೆ ಭಾರತದಲ್ಲಿ 47,300 ಎಂದು ಅಂದಾಜಿಸಲಾಗಿದೆ. 8GB+256GB ರೂಪಾಂತರಕ್ಕೆ CNY 4299 ಅಂದರೆ ಭಾರತದಲ್ಲಿ ಅಂದಾಜು ರೂ. 51,000 ಆಗಿರುತ್ತದೆ. 12GB+256GB ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್ಫೋನ್ CNY 4599 ಅಂದರೆ ಭಾರತದಲ್ಲಿ ಅಂದಾಜು ರೂ. 55,000 ಗೆ ಖರೀದಿಸಬಹುದು. ಇನ್ನು 12GB+512GB ಸ್ಟೋರೇಜ್ ಸಾಮರ್ಥ್ಯ ಹೊಂದಿದ ಸ್ಮಾರ್ಟ್ಫೋನ್ CNY 4999 ಅಂದರೆ ಭಾರತದಲ್ಲಿ ಅಂದಾಜು ರೂ. 59,200 ಎಂದು ನಿರೀಕ್ಷಿಸಲಾಗಿದೆ.
ಅದೇ ರೀತಿ ಶಿಯೋಮಿ 13 ಪ್ರೋ ಸ್ಮಾರ್ಟ್ಫೋನ್ ಕೂಡ ಇದೇ ರೀತಿ ವೇರಿಯಂಟ್ಗಳನ್ನು ಹೊಂದಿದ್ದು. ಈ ಸ್ಮಾರ್ಟ್ಫೋನ್ನ ಆರಂಭಿಕ ಬೆಲೆಯೇ 59, 200 ರೂಪಾಯಿಯಿಂದ ಪ್ರಾರಂಭವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ