Xiaomi 11i ಹೈಪರ್‌ಚಾರ್ಜರ್ ಸ್ಮಾರ್ಟ್‌ಫೋನ್‌ ಎಂಟ್ರಿ, ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್ ಆಗುತ್ತೆ ಈ ಫೋನ್!

ಬಹುನಿರೀಕ್ಷಿತ ಶಿಯೋಮಿ ಸರಣಿಯಲ್ಲಿ Xiaomi 11i ಹೈಪರ್‌ಚಾರ್ಜ್ ಮತ್ತು Xiaomi 11i 5G ಎಂಬ ಎರಡು ನೂತನ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ ಬಿಡುಗಡೆಯಾಗಿದೆ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಭಾರತದ (India's) ನಂ. 1 ಮೊಬೈಲ್ ಬ್ರ್ಯಾಂಡ್ ಶಿಯೋಮಿ (Xiaomi ) ಇಂದು ಡ್ಯುಯಲ್-5G ಸಿಮ್ (Dual-5G SIM) ಸ್ಲಾಟ್‌ ಮತ್ತು ವೇಗವಾಗಿ ಚಾರ್ಜ್(Faster charging) ಆಗುವ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ (Introduced)ಪರಿಚಯಿಸಿದೆ. ಭಾರತದಲ್ಲಿ ಶಿಯೋಮಿ ಮೊಬೈಲ್ ಬಳಕೆದಾರರ ಸಂಖ್ಯೆ ಗಣನೀಯವಾಗಿದೆ. ಹಾಗಾಗಿ ಶಿಯೋಮಿ ಮೊಬೈಲ್ ಬ್ರ್ಯಾಂಡ್ ಹೊಸ ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹಾಗೆಯೇ ಜನವರಿ 6 ರಂದು 2 ವಿಶೇಷ ನೂತನ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ.

ಬಹುನಿರೀಕ್ಷಿತ ಶಿಯೋಮಿ ಸರಣಿಯಲ್ಲಿ 'Xiaomi 11i' ಹೈಪರ್‌ಚಾರ್ಜ್ ಮತ್ತು 'Xiaomi 11i' 5G ಎಂಬ ಎರಡು ನೂತನ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ ಬಿಡುಗಡೆಯಾಗಿದೆ. ಚಾರ್ಜಿಂಗ್ ತಂತ್ರಜ್ಞಾನ ಹೊರತುಪಡಿಸಿ ಎರಡೂ ಫೋನ್‌ಗಳು 108-ಮೆಗಾಪಿಕ್ಸೆಲ್, ಮೀಡಿಯಾ ಟೆಕ್, ಚಿಪ್‌ಸೆಟ್‌ ಸೇರಿ ಬಹುತೇಕ ಒಂದೇ ರೀತಿಯ ವಿಶೇಷತೆಗಳೊಂದಿಗೆ ಬಂದಿವೆ. ಹೊಸ Xiaomi 11i ಹೈಪರ್‌ಚಾರ್ಜ್ 5G 120W ಪಡೆದು ಕೇವಲ 15 ನಿಮಿಷಗಳಲ್ಲಿ ಫೋನ್ ಚಾರ್ಜ್ ಆಗುವಂತೆ ಮಾಡುತ್ತದೆ. Xiaomi ಹೊಸ ಸರಣಿಯಲ್ಲಿ ನಾಲ್ಕು ಕಲರ್ ಲಭ್ಯವಿದ್ದು ಫ್ಲಿಪ್‌ಕಾರ್ಟ್, Mi ಸ್ಟೋರ್ ಮತ್ತು ವೆಬ್‌ಸೈಟ್ ಮೂಲಕ ಭಾರತದಲ್ಲಿ ಮಾರಾಟವಾಗಲಿದೆ.

ಇದನ್ನೂ ಓದಿ: Xiaomi: ಕೇಂದ್ರ ಸರ್ಕಾರಕ್ಕೆ ಕಸ್ಟಮ್ಸ್‌ ಸುಂಕ ವಂಚಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಶಿಯೋಮಿ..!

XIAOMI 11I ಹೈಪರ್‌ಚಾರ್ಜ್ 5G ವಿಶೇಷತೆಗಳು
Xiaomi 11i ಹೈಪರ್‌ಚಾರ್ಜ್ ಮತ್ತು Xiaomi 11i ಎರಡೂ ಸ್ಮಾರ್ಟ್‌ಫೋನ್‌ಗಳು ಫುಲ್ HD+ AMOLED ಡಿಸ್ಪ್ಲೇ ಹೊಂದಿವೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 360Hz ಟಚ್-ಸ್ಯಾಂಪ್ಲಿಂಗ್ ಆಗಿದೆ. ಸೂರ್ಯನ ಬೆಳಕಿನಲ್ಲಿ ಸ್ಕ್ರೀನ್ ನೋಡಲು 1200nits ವರೆಗೆ ಬ್ರಯ್ಟ್ನೆಸ್ ಮತ್ತು ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5, 3.5mm ಹೆಡ್‌ಫೋನ್ ಜ್ಯಾಕ್ ಮತ್ತು IP53 ರೇಟಿಂಗ್‌ ಹೊಂದಿದೆ. Xiaomi 11i ಹೈಪರ್‌ಚಾರ್ಜ್ ಮತ್ತು Xiaomi 11i ಎರಡೂ ಸ್ಮಾರ್ಟ್‌ಫೋನ್‌ಗಳು ಒಂದೇ ಮೀಡಿಯಾಟೆಕ್ ಡೈಮೆನ್ಸಿಟಿ ಹೊಂದಿದ್ದು 256GB ಇಂಟರ್ನಲ್ ಸ್ಟೋರೇಜ್ ಮತ್ತು 8GB RAM ಹೊಂದಿದೆ.

Xiaomi 11i ಹೈಪರ್ಚಾರ್ಜ್ ಮೂರು ಕ್ಯಾಮೆರಾಗಳು ಮತ್ತು LED ಫ್ಲ್ಯಾಷ್ ಇದೆ. ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು 108-ಮೆಗಾಪಿಕ್ಸೆಲ್, ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು ಸೆಲ್ಫಿಗಳು ಹಾಗೂ ವಿಡಿಯೋ ಕರೆಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

XIAOMI 11I 5G ವಿಶೇಷತೆಗಳು
Xiaomi 11i 5G ನೋಡುವುದಾದರೆ , Xiaomi 11i 67W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 5160mAh ಬ್ಯಾಟರಿಯನ್ನು ಹೊಂದಿದೆ. Xiaomi 11i ಹೈಪರ್‌ಚಾರ್ಜ್ 120W ವೇಗದ ಚಾರ್ಜಿಂಗ್‌ ಸಪೋರ್ಟ್ ಮಾಡಿದರೆ Xiaomi 11i 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.120Hz ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 5G, ಡಾಲ್ಬಿ ಅಟ್ಮಾಸ್ ಸ್ಪೀಕರ್‌ಗಳು, 108-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾಗಳು ಮತ್ತು ವರ್ಚುವಲ್ RAM ಹೊಂದಿದೆ.

ಇದನ್ನೂ ಓದಿ: Xiaomi ಪರಿಚಯಸಿದೆ ಹೊಸ ವಾಟರ್ ಹೀಟರ್! ಚಿಟಿಕೆ ಹೊಡೆಯುವಷ್ಟರಲ್ಲಿ ನೀರು ಬಿಸಿಯಾಗುತ್ತೆ

'Xiaomi 11i' 5G ಮತ್ತು 'Xiaomi 11i' ಹೈಪರ್‌ಚಾರ್ಜ್ ಬೆಲೆ
ಎರಡು ಸ್ಮಾರ್ಟ್ ಫೋನ್‌ಗಳ ಬೆಲೆ ನೋಡೋದಾದ್ರೆ Mi ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಂಗಡಿಗಳಲ್ಲಿ 24999
ಆರಂಭವಾಗಲಿದೆ, 6GB+128GB ಬೆಲೆ 26,999 ರೂ. ಆಗಲಿದ್ದು, XIAOMI 11I 5G 8GB+128GB = 28,999 ಬೆಲೆ
ನಿಗಧಿಯಾಗಿದೆ. ಭಾರತದಲ್ಲಿ 'Xiaomi 11i' ಹೈಪರ್‌ಚಾರ್ಜ್ ಮತ್ತು 'Xiaomi 11i' ಎರಡೂ ಸ್ಮಾರ್ಟ್‌ಫೋನ್‌ಗಳು ಬ್ಲ್ಯಾಕ್, ಪೆಸಿಫಿಕ್ ಪರ್ಲ್, ಪರ್ಪಲ್ ಮಿಸ್ಟ್ ಮತ್ತು ಕ್ಯಾಮೊ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದ್ದು, ಈ ಎರಡೂ ಸಾಧನಗಳು ಜನವರಿ 12, 2022 ರಿಂದ ಮಾರಾಟಕ್ಕೆ ಬರುತ್ತಿವೆ.
Published by:vanithasanjevani vanithasanjevani
First published: