VIDEO: ಶಿಯೋಮಿ ಸೂಪರ್ ಚಾರ್ಜರ್: ​ಕೇವಲ 17 ನಿಮಿಷದಲ್ಲಿ ಫುಲ್ ಚಾರ್ಜ್..!

ಶಿಯೋಮಿಯ ನೂತನ 100W ಸೂಪರ್​ ಚಾರ್ಜರ್​ನ್ನು ಬಳಸಿ ಕೇವಲ 7 ನಿಮಿಷದಲ್ಲಿ ಶೇ.50 ರಷ್ಟು ಚಾರ್ಜ್ ಮಾಡಿಕೊಳ್ಳಬಹುದು.

zahir | news18
Updated:March 27, 2019, 3:09 PM IST
VIDEO: ಶಿಯೋಮಿ ಸೂಪರ್ ಚಾರ್ಜರ್: ​ಕೇವಲ 17 ನಿಮಿಷದಲ್ಲಿ ಫುಲ್ ಚಾರ್ಜ್..!
@Android Central
  • News18
  • Last Updated: March 27, 2019, 3:09 PM IST
  • Share this:
ಮೊಬೈಲ್​ ಫೋನ್​ ಬಳಸಲು ಬ್ಯಾಟರಿ ಅತ್ಯವಶ್ಯಕ. ಒಂದು ವೇಳೆ ಫೋನ್‌ ಬ್ಯಾಟರಿ ಲೋ ಆದರೆ ಅಥವಾ ಬ್ಯಾಟರಿ ಕಡಿಮೆಯಾದರೆ ಫೋನ್‌ ಬಂದ್‌ ಆಗುವುದು ಸಾಮಾನ್ಯ. ಅದರಲ್ಲೂ ಸ್ಮಾರ್ಟ್​ಫೋನ್​ಗಳಲ್ಲಿ ಚಾರ್ಜ್​ ಉಳಿಸುವುದು ಪ್ರಯಾಸದ ಕೆಲಸ ಎನ್ನಬಹುದು. ಹೀಗಾಗಿಯೇ ಹೆಚ್ಚಿನವರು ಪವರ್​ ಬ್ಯಾಂಕ್​ ಅನ್ನು ಜೊತೆಯಲ್ಲಿರಿಸಿಕೊಳ್ಳುತ್ತಾರೆ. ಆದರೆ ಇದಕ್ಕೆಲ್ಲಾ ಪರಿಹಾರವಾಗಿ ಶಿಯೋಮಿ ಕಂಪೆನಿ ನವೀನ ತಂತ್ರಜ್ಞಾನ ಒಳಗೊಂಡ ಚಾರ್ಜರ್​ವೊಂದನ್ನು ಪರಿಚಯಸಿದೆ. ಈ ಸೂಪರ್​ ಚಾರ್ಜ್​ನಲ್ಲಿ ಕೇವಲ 17 ನಿಮಿಷದಲ್ಲಿ ನಿಮ್ಮ ಬ್ಯಾಟರಿಯನ್ನು ಫುಲ್ ಮಾಡಿಕೊಳ್ಳಬಹುದು. ಅದು ಕೂಡ 4000mAh ಬ್ಯಾಟರಿಯನ್ನು ಎಂಬುದು ವಿಶೇಷ. ಇದಕ್ಕಿಂತ ಕಡಿಮೆ ಸಾಮರ್ಥ್ಯದ ಬ್ಯಾಟರಿ ಇನ್ನೂ ಬೇಗನೆ ಚಾರ್ಜ್​ ಆಗಲಿದೆ ಎಂದು ತಿಳಿಸಲಾಗಿದೆ.

ಶಿಯೋಮಿ ಕಂಪೆನಿಯು ತನ್ನ Weibo ಸೈಟ್​ನಲ್ಲಿ ಈ ಸೂಪರ್​ ಚಾರ್ಜರ್​​ನ ವಿಡಿಯೋವನ್ನು ಅಪ್​ಲೋಡ್ ಮಾಡಿದೆ. ಇಲ್ಲಿ ಒಪ್ಪೊ ಕಂಪೆನಿಯ 50W SuperVOOC ಫಾಸ್ಟ್​ ಚಾರ್ಜರ್​ ಹಾಗೂ ನೂತನ ಸೂಪರ್​ ಚಾರ್ಜರ್​ನ್ನು ಬಳಸಿ ಮೊಬೈಲ್ ಚಾರ್ಜಿಂಗ್ ಮಾಡಿರುವುದನ್ನು ತೋರಿಸಲಾಗಿದೆ. ಈ ವೇಳೆ ಶಿಯೋಮಿ ಚಾರ್ಜರ್​ ಕೇವಲ 17 ನಿಮಿಷಗಳಲ್ಲಿ 4000mAh ಬ್ಯಾಟರಿಯನ್ನು ಫುಲ್ ಚಾರ್ಜ್​ ಮಾಡಿದರೆ, ಇದೇ ಅವಧಿಗೆ ಒಪ್ಪೊ ಚಾರ್ಜರ್​ ಬಳಸಿ ಮಾಡಿದ 3700mAhಬ್ಯಾಟರಿಯ ಚಾರ್ಜ್ ಕೇವಲ ಶೇ.65 ರಷ್ಟು ಮಾತ್ರ ಆಗಿತ್ತು. ಈ ಮೂಲಕ ಶಿಯೋಮಿ ತನ್ನ ನೂತನ ಸೂಪರ್​ ಚಾರ್ಜರ್​ ವೇಗದ ಡೆಮೊವನ್ನು ತೋರಿಸಿದೆ.

7 ನಿಮಿಷದಲ್ಲಿ 50% ಚಾರ್ಜ್!
ಶಿಯೋಮಿಯ ನೂತನ 100W ಸೂಪರ್​ ಚಾರ್ಜರ್​ನ್ನು ಬಳಸಿ ಕೇವಲ 7 ನಿಮಿಷದಲ್ಲಿ ಶೇ.50 ರಷ್ಟು ಚಾರ್ಜ್ ಮಾಡಿಕೊಳ್ಳಬಹುದು. 0 ರಿಂದ 50 ರವರೆಗೆ ಚಾರ್ಜ್​ ಆಗಲು 7 ನಿಮಿಷ ತೆಗೆದುಕೊಂಡರೆ ಉಳಿದ 50% ಚಾರ್ಜ್​ ಆಗಲು 10 ನಿಮಿಷವನ್ನು ತೆಗೆದುಕೊಳ್ಳುತ್ತದೆ. ಅಂದರೆ ಬ್ಯಾಟರಿ ಫುಲ್ ಆಗಲು ತೆಗೆದುಕೊಳ್ಳುವ ಒಟ್ಟು ಸಮಯ ಕೇವಲ 17 ನಿಮಿಷ ಮಾತ್ರ. ಈ ಲೆಕ್ಕಚಾರ 4,000mAh ಬ್ಯಾಟರಿಗೆ ಅನುಗುಣವಾಗಿದ್ದು, ಇದಕ್ಕಿಂತ ಕಡಿಮೆ ಸಾಮರ್ಥ್ಯದ ಬ್ಯಾಟರಿ ಇನ್ನು ಕಡಿಮೆ ಸಮಯದಲ್ಲಿ ಚಾರ್ಜ್​ ಮಾಡಿಕೊಳ್ಳಬಹುದಾಗಿದೆ.

ರೆಡ್​ ಮಿ ಸ್ಮಾರ್ಟ್​ಫೋನ್​ ಜತೆ ಬರಲಿದೆ ನೂತನ ಚಾರ್ಜರ್
ಶಿಯೋಮಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿರುವ ಸ್ಮಾರ್ಟ್​ಫೋನ್​ಗಳ ಜತೆ ನೂತನ ತಂತ್ರಜ್ಞಾನದ ಸೂಪರ್​ ಚಾರ್ಜರ್​ಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಹೊರತಾಗಿ ಚಾರ್ಜರ್ ಹೇಗೆ ಬಿಡುಗಡೆ ಹಾಗೂ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ.
First published: March 27, 2019, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading