ಮಾರುಕಟ್ಟೆ ಪ್ರವೇಶಿಸಲಿರುವ ಆ್ಪಪಲ್​ ಐಒಎಸ್ 12


Updated:June 6, 2018, 12:21 AM IST
ಮಾರುಕಟ್ಟೆ ಪ್ರವೇಶಿಸಲಿರುವ ಆ್ಪಪಲ್​ ಐಒಎಸ್ 12

Updated: June 6, 2018, 12:21 AM IST
ನ್ಯೂಯಾರ್ಕ್​: ಆ್ಯಪಲ್ ಸಂಸ್ಥೆ ತನ್ನ ವಾರ್ಷಿಕ ವಿಶ್ವದಾದ್ಯಂತ ಡೆವಲಪರ್ಸ್ ಸಮ್ಮೇಳನ(WWDC) 2018ಕ್ಕೆ ಸೋಮವಾರದಂದು ಚಾಲನೆ ನೀಡಿದೆ. ಈ ಸಂದರ್ಭದಲ್ಲಿ ಐಒಎಸ್ 12 ಬಿಡುಗಡೆ ಘೋಷಿಸಲಾಗಿದೆ.

ಸದ್ಯ ಇರುವ ಆಪರೇಟಿಂಗ್​ ಸಿಸ್ಟಂಗಳಲ್ಲೇ ಅತ್ಯಂತ ವಿಭಿನ್ನ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡ ಒಎಸ್​ ಆಗಿದೆ ಎಂದು ಆಪಲ್​ ಹೇಳಿಕೊಂಡಿದೆ. ಆಗ್ಮೆಂಟೆಡ್ ರಿಯಾಲಿಟಿ ಮತ್ತು ಯುಎಸ್​ಡಿಜೆಡ್ ಟ್ರಾನ್ಸ್ ಫಾರ್ಮೆಷನಲ್ ತಂತ್ರಜ್ಞಾನ ಪರಿಚಯಿಸಿದ್ದು, ಈ ಮೂಲಕ ಹೊಸ ವಿಧಾನದ ಬಳಕೆದಾರರು ಏನನ್ನು ನೋಡುತ್ತಾರೋ ಅದನ್ನು ಅನುಭವಿಸ ಬಹುದು.

ಇನ್ನು ಇದರ ಜತ ಮತ್ತೊಂದು ಮಹತ್ತರ ಬದಲಾವಣೆಯೆಂದರೆ ಸಿರಿ ಶಾರ್ಟ್​ಕಟ್ಸ್​ನ್ನು ನೀಡಿದ್ದು, ಇದು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ದೈನಂದಿನ ಚಟುವಟಿಕೆಗಳು ಮತ್ತು ಕ್ಯಾಲೆಂಡರ್ ವಿಶೇಷಗಳ ಕುರಿತು ತನ್ನ ಬಳಕೇದಾರರಿಗೆ ಸಲಹೆ ನೀಡುತ್ತದೆ. ಇನ್ನು ಮೆಮೊಜಿ , ಅನಿಮೋಜಿ, ಫನ್​ ಕ್ಯಾಮೆರಾ, ಗ್ರೂಪ್​ ಫೇಸ್​ಟೈಮ್​ನಂತಹ ನೂತನ ಆವಿಷ್ಕಾರಕ್ಕೆ ಆ್ಯಪಲ್​ ಮುಂದಾಗಿದೆ ಎಂದು ಸಾಫ್ಟ್​ವೇರ್​ ಎಂಜಿನಿಯರಿಂಗ್​ ವಿಭಾಗದ ಕ್ರೈಗ್ ಫೆಡೆರ್ಗಿ ಹೇಳಿದ್ದಾರೆ.

ಅಲ್ಲದೇ ಆರ್ಕಿಟ್​ 2 ಎಂಬ ಡೆವಲಪಿಂಗ್​ ಸೆಂಟರ್​ನ ಮೂಲಕ ಡೆವಲಪರ್​ಗಳು ಆಗ್ಮೆಂಟೆಡ್ ರಿಯಾಲಿಟಿ ಅಪ್ಲಿಕೇಶನ್​​ಗಳನ್ನು ನಿರ್ಮಿಸಬಹುದು, ಪೋಷಕರು ತಮ್ಮ ಮಕ್ಕಳು ಐಫೋನ್‌ಅನ್ನು ಹೇಗೆ ಬಳುಸುತ್ತಾರೆ ಎಂಬ ಬಗ್ಗೆ ಮಿತಿಗಳನ್ನು ಹೇರಲು ಸ್ಕ್ರೀನ್‌ ಟೈಮ್‌ ಬಳಸಬಹುದಾಗಿದೆ.

ಆ್ಪಪಲ್​ನ ಮೋಜೇವ್ ಮ್ಯಾಕ್ಒಎಸ್‌(MacOS Mojave) ಆಪರೇಟಿಂಗ್​ ಮ್ಯಾಕ್‌ ಕಂಪ್ಯೂಟರ್‌ಗಳ ಮುಂದಿನ ಪೀಳಿಗೆಯ ಸಾಫ್ಟ್ವೇರ್ ಆಗಿದ್ದು, ಮ್ಯಾಕ್​ನಲ್ಲಿರುವ ಅಪ್ಲಿಕೇಶನ್​ಗಳಲ್ಲಿ ಹೆಚ್ಚಿನ ಅವಶ್ಯ ಅಪ್ಲಿಕೇಶನನ್ನು ರಿಅರೇಂಜ್​ ಮಾಡುತ್ತದೆ, ಬಳಿಕ ಇದು ಡೆಸ್ಕ್​ಟಾಪ್​ಗೆ ಹೊಸ ಶೇಪ್​ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆ್ಯಪಲ್​ ಹೇಳಿಕೊಂಡಿದೆ.
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ