Space Hotel: ಐದು ವರ್ಷದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊದಲ ಬಾಹ್ಯಾಕಾಶ ಹೋಟೆಲ್!

World's first space hotel: ಐಷಾರಾಮಿ ಕ್ರೂಸ್ ಶಿಪ್ ಶೈಲಿಯಲ್ಲಿ ತಯಾರಿಸುವ ಯೋಜನೆ ಇದಾಗಿದೆ. ಇದು ಬಾಹ್ಯಾಕಾಶದಲ್ಲಿ ಚಲಿಸುತ್ತಲೇ ಇರುತ್ತದೆ. ಇದು ಗುರುತ್ವಾಕರ್ಷಣೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿಯೊಬ್ಬರಿಗೂ ಪ್ರಯಾಣ (Travel) ಮಾಡುವ, ಹೊಸ ಸ್ಥಳವನ್ನು ವೀಕ್ಷಿಸುವ ಆಸೆ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ಹೊಸ ಸ್ಥಳಗಳಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಜನರು ಉತ್ತಮ ಮತ್ತು ಆರಾಮದಾಯಕವಾಗಿ ನಿದ್ರಿಸಲು ಹೋಟೆಲ್ (Hotel) ಹುಡುಕುತ್ತಾರೆ. ಆದರೀಗ ಹೋಟೆಲ್‌ನಲ್ಲಿ ಉಳಿಯುವ ಆಸೆ ಅಂತರಿಕ್ಷದಲ್ಲೂ (Space) ಈಡೇರಲಿದೆ. ಇದು ಶೀಘ್ರದಲ್ಲೇ ಬರಲಿದೆಯಂತೆ. ಮುಂಬರುವ 5 ವರ್ಷಗಳಲ್ಲಿ, ಮೊದಲ ಸ್ಪೇಸ್ ಹೋಟೆಲ್ (Space Hotel) ಪ್ರಾರಂಭವಾಗಲಿದ್ದು, ಅತಿಥಿಗಳನ್ನು ಸ್ವಾಗತಿಸಲು ಸಿದ್ಧತೆ ಮಾಡಲಾಗುತ್ತಿದೆ.

  ಐಷಾರಾಮಿ ಕ್ರೂಸ್ ಶಿಪ್ ಶೈಲಿಯಲ್ಲಿ ತಯಾರಿಸುವ ಯೋಜನೆ ಇದಾಗಿದೆ. ಇದು ಬಾಹ್ಯಾಕಾಶದಲ್ಲಿ ಚಲಿಸುತ್ತಲೇ ಇರುತ್ತದೆ. ಇದು ಗುರುತ್ವಾಕರ್ಷಣೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಹೋಟೆಲ್ ಅನ್ನು ಭೂಮಿಯ ವಾತಾವರಣದಂತೆಯೇ ನಿರ್ಮಿಸಲಾಗುವುದು. ಅಲ್ಲಿ ಅತಿಥಿಗಳು ಕಡಿಮೆ ಗುರುತ್ವಾಕರ್ಷಣೆಯಲ್ಲಿ ಅನೇಕ ಚಟುವಟಿಕೆಗಳನ್ನು ಮಾಡುತ್ತಾರೆ.

  ಗುರುತ್ವಾಕರ್ಷಣೆಯನ್ನು ನಿಯಂತ್ರಿಸಲಾಗುವುದು

  ಇದರ ರಚನೆಯು 24 ಮಾಡ್ಯೂಲ್‌ಗಳಿಂದ ಮಾಡಲ್ಪಟ್ಟಿದೆ. ಇದನ್ನು ಲಿಫ್ಟ್ ಶಾಫ್ಟ್‌ಗಳ ಮೂಲಕ ಒಟ್ಟಿಗೆ ಜೋಡಿಸಲಾಗುತ್ತದೆ. ಇಡೀ ನಿಲ್ದಾಣವು ಚಕ್ರದಂತೆ ಇರುತ್ತದೆ. ಇದು ಗುರುತ್ವಾಕರ್ಷಣೆಯನ್ನು ನಿಯಂತ್ರಣದೊಂದಿಗೆ ತಿರುಗುತ್ತದೆ. ಇದನ್ನು ಆರ್ಬಿಟಲ್ ಅಸೆಂಬ್ಲಿ ಕಾರ್ಪೊರೇಷನ್ ನಿರ್ಮಿಸುತ್ತಿದೆ. ಇದು ಗೇಟ್‌ವೇ ಫೌಂಡೇಶನ್‌ನ ಯೋಜನೆಯ ಭಾಗವಾಗಿದೆ.

  ಅಂದಹಾಘೆಯೇ ಈ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ನಂತರ ಅದನ್ನು 'ವಾನ್ ಬ್ರೌನ್ ಸ್ಟೇಷನ್' ಎಂದು ಹೆಸರಿಸಲಾಯಿತು. ಆದಾಗ್ಯೂ, ಈ ಫ್ಯೂಚರಿಸ್ಟಿಕ್ ಹೋಟೆಲ್‌ಗೆ 'ವಾಯೇಜರ್ ಸ್ಟೇಷನ್' ಎಂದು ಹೆಸರಿಸಲಾಗಿದೆ.

  ನೀವು ಭೂಮಿಯ ಅನುಭವವನ್ನು ಸಹ ಪಡೆಯುತ್ತೀರಿ

  ಗೇಟ್‌ವೇ ಫೌಂಡೇಶನ್‌ನ ಹಿರಿಯ ವಿನ್ಯಾಸ ವಾಸ್ತುಶಿಲ್ಪಿ ಟಿಮ್ ಅಲಟೋರ್  ಅವರು  ಈ ನಿಲ್ದಾಣವು ತಿರುಗಲಿದೆ ಎಂದು ಹೇಳಿದ್ದಾರೆ. ಕಂಪನಿಯು ಭೂಮಿಯ ಅನುಭವವನ್ನು ಬಾಹ್ಯಾಕಾಶಕ್ಕೆ ತರಲು ಆಶಿಸುತ್ತಿದೆ. ಇಲ್ಲಿ ಅತಿಥಿಗಳಿಗಾಗಿ ವಿವಿಧ ಮನರಂಜನಾ ಚಟುವಟಿಕೆಗಳು ಮತ್ತು ಆಟಗಳನ್ನು ಆಯೋಜಿಸಲಾಗುತ್ತದೆ. ಇದು ಅವರಿಗೆ ವಿಶಿಷ್ಟವಾದ ಭಾವನೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: Mobile Phone: ಈ ಭಯಾನಕ ಕಾಯಿಲೆ ಮೊಬೈಲ್​ ಬಳಕೆಯಿಂದ ಬರೋದಿಲ್ಲವಂತೆ! ಸಂಶೋಧಕರೇ ಹೇಳಿದ್ದಾರೆ ಕೇಳಿ  ಹಲವು ರೀತಿಯ ಚಟುವಟಿಕೆಗಳು ಇರುತ್ತವೆ

  ಕಡಿಮೆ ಗುರುತ್ವಾಕರ್ಷಣೆಯಲ್ಲಿ ಹಗುರವಾಗಿರುವ ಕಾರಣ, ಅತಿಥಿಗಳು ಹೋಟೆಲ್‌ನಲ್ಲಿ ಎತ್ತರಕ್ಕೆ ಜಿಗಿಯಲು ಸಾಧ್ಯವಾಗುತ್ತದೆ. ಭಾರವಾದ ವಸ್ತುಗಳನ್ನು ಸುಲಭವಾಗಿ ಎತ್ತಬಹುದಾಗಿದೆ.

  ಕಂಪನಿಯ ಮಾಜಿ ಪೈಲಟ್ ಜಾನ್ ಬ್ಲಿಂಕೊ, ಬಾಹ್ಯಾಕಾಶ ಪ್ರಯಾಣಕ್ಕೆ ಇದು ಪ್ರಮುಖ ಸಮಯ ಎಂದು ಹೇಳುತ್ತಾರೆ. ಬಾಹ್ಯಾಕಾಶ ಯಾನದ ಸುವರ್ಣ ಅವಧಿ ಹತ್ತಿರದಲ್ಲಿದೆ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

  ಇದನ್ನೂ ಓದಿ: IPL 2022: ಭಾರತೀಯರಿಗಾಗಿ Twitter ಪರಿಚಯಿಸುತ್ತಿದೆ ಐಪಿಎಲ್​​​ ಕುರಿತು ಮಾಹಿತಿ ಒದಗಿಸುವ ವೈಶಿಷ್ಟ್ಯ!

  ಎಷ್ಟು ವೆಚ್ಚವಾಗಬಹುದು?

  ಆದಾಗ್ಯೂ, ಈ ಹೋಟೆಲ್‌ನಲ್ಲಿ ಉಳಿಯಲು ಜನರಿಗೆ ಎಷ್ಟು ವೆಚ್ಚವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಅದು ಖಂಡಿತವಾಗಿಯೂ ಅಗ್ಗವಾಗಿರುವುದಿಲ್ಲ. ಗೇಟ್‌ವೇ ಫೌಂಡೇಶನ್ ಈ ಹೋಟೆಲ್ ಅನ್ನು 'ಜರ್ನಿ ಟು ಡಿಸ್ನಿಲ್ಯಾಂಡ್' ರೀತಿಯಲ್ಲಿ ಮಾಡಲು ಬಯಸಿದೆ ಎಂದು ಹೇಳಿದೆ.

  ಪ್ರಪಂಚ ವೇಗವಾಗಿ ಸಾಗುತ್ತಿದೆ. ಹೊಸ ಹೊಸ ತಂತ್ರಜ್ನಾನಗಳು ಬರುತ್ತಿವೆ. ಅದರಲ್ಲೂ ಹೊಸ ಪೀಳಿಗೆಗೆ ಇವೆಲ್ಲವೂ ಹೊಸ ಉಡುಗೊರೆಯಂತಿದೆ. ವಿಜ್ನಾನಿಗಳು ಎಲ್ಲಾ ವಿಚಾರದಲ್ಲೂ ಸಂಶೋಧನೆ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಗೆ ಉಪಯೋಗಕ್ಕೆ ಬರುವಂತಹ ಮತ್ತು ಜೀವನವನ್ನು ಇನ್ನಷ್ಟು ಸುಲಭ ರೂಪದಲ್ಲಿ ಕೊಂಡೊಯ್ಯಬಲ್ಲ ತಂತ್ರಗಳನ್ನು ಆವಿಷ್ಕರಿಸಿ ಸಿದ್ಧಪಡಿಸುತ್ತಿದ್ದಾರೆ. ಇದೀಗ ಬಾಹ್ಯಾಕಾಶದಲ್ಲಿ ಹೋಟೆಲ್​ವೊಂದರ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. 5 ವರ್ಷದಲ್ಲಿ ಇದು ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತದೆ.
  Published by:Harshith AS
  First published: