ನೋಕಿಯಾ 9 ಪ್ಯೂರ್​ವೀವ್​: ವಿಶ್ವದ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್​ಫೋನಿನ ವಿಶೇಷತೆಗಳೇನು ಗೊತ್ತೆ?

ನೋಕಿಯಾ ಲೀಕ್ಸ್​ ಎಂಬ ಸಾಮಾಜಿಕ ಖಾತೆಯಲ್ಲಿ ನೋಕಿಯಾ 9 ಪ್ಯೂರ್​ವೀವ್ ಬೆಲೆಯನ್ನು ಬಹಿರಂಗಪಡಿಸಲಾಗಿದೆ.

zahir | news18
Updated:January 5, 2019, 5:15 PM IST
ನೋಕಿಯಾ 9 ಪ್ಯೂರ್​ವೀವ್​: ವಿಶ್ವದ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್​ಫೋನಿನ ವಿಶೇಷತೆಗಳೇನು ಗೊತ್ತೆ?
@Youtube
zahir | news18
Updated: January 5, 2019, 5:15 PM IST
ಹೆಚ್​ಎಂಡಿ ಗ್ಲೋಬಲ್​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ ನೋಕಿಯಾ 9 ಪ್ಯೂರ್​ವೀವ್ ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಈ ನೂತನ ಸ್ಮಾರ್ಟ್​ಫೋನ್​ನಲ್ಲಿ ಬರೋಬ್ಬರಿ 7 ಕ್ಯಾಮೆರಾಗಳಿದ್ದು, ಇಷ್ಟೊಂದು ಕ್ಯಾಮೆರಾ ಹೊಂದಿರುವ ವಿಶ್ವದ ಮೊದಲ ಮೊಬೈಲ್​ ಎಂಬ ಖ್ಯಾತಿ ನೋಕಿಯಾ 9 ಪಾಲಾಗಲಿದೆ.

ಒಟ್ಟು 7 ಕ್ಯಾಮೆರಾ
ನೋಕಿಯಾ 9 ಪ್ಯೂರ್​ ವೀವ್​ನಲ್ಲಿ ಒಟ್ಟು 7 ಕ್ಯಾಮೆರಾಗಳಿವೆ. ಹಿಂಬದಿಯಲ್ಲಿ 5 ಕ್ಯಾಮೆರಾಗಳಿದ್ದರೆ ಮುಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದೆ. ಈ ಮೊಬೈಲ್​ನ​ ಹಿಂಬದಿಯಲ್ಲಿ ಐದು ಕ್ಯಾಮೆರಾ ಲೆನ್ಸ್ ಜೊತೆಗೆ ದೊಡ್ಡದಾದ ಎಲ್‌ಇಡಿ ಫ್ಲ್ಯಾಶ್ ಕೂಡ ನೀಡಲಾಗಿದೆ. ಇದರಲ್ಲಿ ಆಟೋಫೋಕಸ್ ಸೇರಿದಂತೆ ಹಲವು ವೈಶಿಷ್ಠ್ಯಗಳು ಇರಲಿದೆ.

ನೋಕಿಯಾ 9 ಪ್ಯೂರ್​ವೀವ್ ಬೆಲೆ

ನೋಕಿಯಾ ಲೀಕ್ಸ್​ ಎಂಬ ಸಾಮಾಜಿಕ ಖಾತೆಯಲ್ಲಿ ನೋಕಿಯಾ 9 ಪ್ಯೂರ್​ವೀವ್ ಬೆಲೆಯನ್ನು ಬಹಿರಂಗಪಡಿಸಲಾಗಿದೆ. ಯುರೋಪ್​ನಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್​ಫೋನ್​ಗೆ 749 ರಿಂದ 799 ಯುರೋ ನಿಗದಿಪಡಿಸಲಾಗಿದೆ. ಇದರ ಬೆಲೆಯು ಭಾರತದಲ್ಲಿ 59 ಸಾವಿರದಿಂದ 65 ಸಾವಿರದವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಕನ್ನಡಿಗರಿಗೆ ಆದ್ಯತೆ

ಬಿಡುಗಡೆ ಯಾವಾಗ?
Loading...

ಮೊಬೈಲ್​ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ ಎಂದು ಹೇಳಲಾಗಿರುವ ನೋಕಿಯಾ 9 ಪ್ಯೂರ್​ವೀವ್​  ಜನವರಿ ತಿಂಗಳಲ್ಲೇ ಬಿಡುಗಡೆ ಮಾಡುವುದಾಗಿ ಹೆಚ್​ಎಂಡಿ ಗ್ಲೋಬಲ್​ ಕಂಪೆನಿ ಹೇಳಿಕೊಂಡಿದೆ. ಕೆಲ ಮೂಲಗಳ ಪ್ರಕಾರ ಜನವರಿ 3ನೇ ವಾರ ಅಥವಾ 4ನೇ ವಾರ ವಿಶ್ವ ಮಾರುಕಟ್ಟೆಗೆ ವಿಶ್ವದ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್​ಫೋನ್​ ಪರಿಚಯವಾಗಲಿದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಈ ಫೀಚರ್​ ಬಂದರೆ ತೊಂದರೆ ಗ್ಯಾರೆಂಟಿ..!

ನೋಕಿಯಾ-9 ಪ್ಯೂರ್​ವೀವ್ ಫೀಚರ್ಸ್​
ಒಎಸ್​- ಅಂಡ್ರಾಯ್ಡ್​ 9 ಅಪರೇಟಿಂಗ್​ ಸಿಸ್ಟಂ
ಡಿಸ್​ಪ್ಲೇ- 5.9 ಇಂಚಿನ ಕ್ಯೂಹೆಚ್​ಡಿ ಡಿಸ್​ಪ್ಲೇ( ಗೊರಿಲ್ಲಾ ಗ್ಲಾಸ್- 5)
ಪ್ರೊಸೆಸರ್- ಕ್ವಾಲ್​ಕಾಮ್ ಸ್ನಾಪ್​ಡ್ರಾಗನ್ 845 ಪ್ರೊಸೆಸರ್
RAM- 8 ಜಿಬಿ RAM, 256 ಜಿಬಿ ಸ್ಟೋರೇಜ್
ಬ್ಯಾಟರಿ ಸಾಮರ್ಥ್ಯ- 4,150 mAh
ಬೆಲೆ- 59000 ದಿಂದ 65000 ರೂ. ಒಳಗೆ
(ನೋಕಿಯಾ 9 ಬಗ್ಗೆ ಸೋರಿಕೆಯಾದ ಮಾಹಿತಿಯ ಪ್ರಕಾರ)

First published:January 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ