10 ವರ್ಷದಲ್ಲೇ ಮಾರುಕಟ್ಟೆ ಕಳೆದುಕೊಂಡ ಟಾಟಾ ನ್ಯಾನೊ ಕಾರು, ಉತ್ಪಾದನೆ ಸ್ಥಗಿತ


Updated:July 12, 2018, 6:41 PM IST
10 ವರ್ಷದಲ್ಲೇ ಮಾರುಕಟ್ಟೆ ಕಳೆದುಕೊಂಡ ಟಾಟಾ ನ್ಯಾನೊ ಕಾರು, ಉತ್ಪಾದನೆ ಸ್ಥಗಿತ

Updated: July 12, 2018, 6:41 PM IST
ಮಧ್ಯಮ ವರ್ಗದ ಜನರಿಗೆ ಕಾರಿನಲ್ಲಿ ಕುಳಿತು ಪ್ರಯಾಣ ಮಾಡುವ ಕನಸನ್ನು ಹುಟ್ಟುಹಾಕಿದ್ದ ಟಾಟಾ ಮೊಟಾರ್​​ ಸಂಸ್ಥೆಯ ಟಾಟಾ ನ್ಯಾನೋ ಕಾರು ಇದೀಗ ಸಂಪೂರ್ಣವಾಗಿ ತನ್ನ ಉತ್ಪಾದನೆಯಲ್ಲಿ ಸ್ಥಗಿತಗೊಳಿಸಿದೆ.

ಭಾರತದ ಅತ್ಯಂತ ಕಡಿಮೆ ಬೆಲೆಯ ಕಾರು ಎಂದೇ ಖ್ಯಾತಿ ಗಳಿಸಿದ್ದ ಟಾಟಾ ನ್ಯಾನೋ 10 ವರ್ಷದ ಹಿಂದೆ ಅಂದರೆ ಜನವರಿ 10 2008ರಂದು ದೆಹಲಿಯ 'ಅಂತರಾಷ್ಟ್ರೀಯ ವಾಹನ ಮೇಳ' ಎಕ್ಸ್‌‍‍ಪೋದಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ಆದರೆ ಇದೀಗ ಕಾರಣಾಂತರದಿಂದ ಈ ಕಾರಿನ ಉತ್ಪಾದನೆಯಲ್ಲಿ ಸಂಪೂರ್ಣವಾಗಿ ಕೆಳಮುಖ ಕಂಡಿದೆ.

ಬಿಡುಗಡೆ ಸಂದರ್ಭದಲ್ಲಿ ಸಾಮಾನ್ಯ ಜನರ ಕಾರು ಎಂದೇ ಗುರುತಿಸಿದ್ದ ಈ ಕಾರು ಕಳೆದ ಜೂನ್​ನಲ್ಲಿ ಕೇವಲ ಒಂದು ಕಾರನ್ನಷ್ಟೇ ನಿರ್ಮಾಣ ಮಾಡಲಾಗಿತ್ತು. 2016ರ ಜೂನ್​ನಲ್ಲಿ ಇದರ ನಿರ್ಮಾಣದ ಸಂಖ್ಯೆ 275ಕ್ಕೆ  ಇಳಿ ಮುಖ ಕಂಡಿತ್ತು. ಮುಂದಿನ ವರ್ಷದಿಂದ ಇದರ ನಿರ್ಮಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಎಂದು ಕಂಪನಿಯೇ ಒಪ್ಪಿರುವುದಾಗಿ ದಿ ಎಕನಾಮಿಕ್ಸ್​ ಟೈಮ್ಸ್ ವರದಿ ಮಾಡಿದೆ.

ನ್ಯಾನೊ ಕಾರ್​ ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆಯಾದ ಕನಿಷ್ಟ 5 ವರ್ಷದವರೆಗೂ ಭಾರೀ ಫೇಮಸ್​ ಆಗಿತ್ತು. ಆದರೆ ನಿಗದಿ ಪಡಿಸಿದ ಬೆಲೆಗೆ ಸೂಕ್ತ ಗುಣಮಟ್ಟದ ಕಾರನ್ನು ಉತ್ಪಾಧಿಸುವಲ್ಲಿ ಟಾಟಾ ಸಂಸ್ಥೆ ವಿಫಲವಾಗಿತ್ತು.

ಇನ್ನು ಕಾರಿನಲ್ಲಿನ ಕಾಣಿಸಿಕೊಳ್ಳುತ್ತಿದ್ದ ಎಂಜಿನ್​ ದೋಷವೂ ಕೂಡಾ ಮಾರಾಟದ ಮೇಲೆ ಪ್ರಭಾವ ಭೀರಿತ್ತು. ಹಲವಾರು ಪ್ರಕರಣದಲ್ಲಿ ಕಾರಿನಿ ಎಂಜಿನ್​ ದೋಷದಿಂದಾಗಿ ಬಹಳಷ್ಟು ಮಂದಿ ಮೃತಪಟ್ಟಿದ್ದರು, ಕೆಲವರು ಪ್ರಣಾಪಾಯದಿಂದ ಪಾರಾಗಿದ್ದರು. ಬಳಕೆಯಾಗಿರುವ ಕಳಪೆ ಗುಣಮಟ್ಟದ ತಂತ್ರಜ್ಞಾನವೂ ಕೂಡಾ ಇದಕ್ಕೆ ಒಂದು ಕಾರಣದ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅದೇನೆ ಇರಲಿ ನ್ಯಾನೊದಂತಹ ಕಾರುಗಳು ಭಾರತೀಯ ಆಟೋಮೊಬೈಲ್​ ಮಾರುಕಟ್ಟೆಯಲ್ಲಿ ಹೊಸ ಭರವಸೆ ಮೂಡಿಸಿದ್ದು ಮಾತ್ರಾ ನಿಜ, ಮಧ್ಯಮ ವರ್ಗದ ಜನರಿಗೆ ಹೊಸ ಆಶಾಭಾವನೆ ಮೂಡಿಸಿದ ಕಾರುಗಳಲ್ಲಿ ನ್ಯಾನೊ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...