• Home
  • »
  • News
  • »
  • tech
  • »
  • World's First All-Electric Airplane: ವಿಶ್ವದ ಮೊದಲ ಎಲೆಕ್ಟ್ರಿಕ್‌ ವಿಮಾನ ಹಾರಾಟ ಯಶಸ್ವಿ! ಇಲ್ಲಿದೆ ಮಾಹಿತಿ

World's First All-Electric Airplane: ವಿಶ್ವದ ಮೊದಲ ಎಲೆಕ್ಟ್ರಿಕ್‌ ವಿಮಾನ ಹಾರಾಟ ಯಶಸ್ವಿ! ಇಲ್ಲಿದೆ ಮಾಹಿತಿ

ವಿಶ್ವದ ಮೊದಲ ಎಲೆಕ್ಟ್ರಿಕ್‌ ವಿಮಾನ

ವಿಶ್ವದ ಮೊದಲ ಎಲೆಕ್ಟ್ರಿಕ್‌ ವಿಮಾನ

ಜಾಗತಿಕ ತಾಪಮಾನ ಏರಿಕೆ ತಪ್ಪಿಸಲು ಹಾಗೂ ಪರಿಸರ ಮಾಲಿನ್ಯ ತಪ್ಪಿಸಲು ಪ್ರಮುಖ ಪಾತ್ರ ವಹಿಸುವ ಈ ಎಲೆಕ್ಟ್ರಿಕ್‌ ವಾಹನಗಳ ಖರೀದಿಯಲ್ಲಿ ಜನರೂ ಒಲವು ತೋರಿಸುತ್ತಿದ್ದಾರೆ. ಈ ಮಧ್ಯೆ ಇದೀಗ ಎಲೆಕ್ಟ್ರಿಕ್‌ ವಿಮಾನವೂ ಕೂಡ ಬಂದಿದ್ದು ಯಶಸ್ವಿಯಾಗಿ ಹಾರಾಟ ನಡೆಸಿದೆ.

  • Share this:

ಇಡೀ ಜಗತ್ತು ಎಲೆಕ್ಟ್ರಿಕ್‌ ವಾಹನಗಳತ್ತ (Electric Vehicle) ಮುಖ ಮಾಡುತ್ತಿದೆ. ಜಾಗತಿಕ ತಾಪಮಾನ ಏರಿಕೆ ತಪ್ಪಿಸಲು ಹಾಗೂ ಪರಿಸರ ಮಾಲಿನ್ಯ ತಪ್ಪಿಸಲು ಪ್ರಮುಖ ಪಾತ್ರ ವಹಿಸುವ ಈ ಎಲೆಕ್ಟ್ರಿಕ್‌ ವಾಹನಗಳ ಖರೀದಿಯಲ್ಲಿ ಜನರೂ ಒಲವು ತೋರಿಸುತ್ತಿದ್ದಾರೆ. ಈ ಮಧ್ಯೆ ಇದೀಗ ಎಲೆಕ್ಟ್ರಿಕ್‌ ವಿಮಾನವೂ (Electric Aircraft) ಕೂಡ ಬಂದಿದ್ದು ಯಶಸ್ವಿಯಾಗಿ ಹಾರಾಟ ನಡೆಸಿದೆ. ಹೌದು, ವಿಶ್ವದ ಮೊದಲ ಎಲೆಕ್ಟ್ರಿಕ್‌ ವಿಮಾನವು ತನ್ನ ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ವಿಮಾನದ ಹೆಸರು ಅಲಿಸ್‌ (Alice) ಅಂತ. ಇದು ಎವಿಯೇಷನ್ ​​ಏರ್‌ಕ್ರಾಫ್ಟ್‌ನಿಂದ ತಯಾರಿಸಲ್ಪಟ್ಟಿದೆ. ಈ ವಿಮಾನ, ಅಮೆರಿಕದ ಗ್ರಾಂಟ್ ಕೌಂಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7:10 ಕ್ಕೆ ಹೊರಟು, 3,500 ಅಡಿ ಎತ್ತರದಲ್ಲಿ 8 ನಿಮಿಷಗಳ ಕಾಲ ಹಾರಾಟ ನಡೆಸಿದೆ.


ಈ ವಿಮಾನದಲ್ಲೇನಿದೆ ವಿಶೇಷ?
ಅಲಿಸ್‌ ಹೊಗೆ ಮುಕ್ತ ವಿಮಾನವಾಗಿದೆ. ಅಲ್ದೇ, ಇದರ ವೆಚ್ಚ ಕೂಡ ಕಡಿಮೆಯೇ. ಲೈಟ್ ಜೆಟ್‌ಗಳು ಅಥವಾ ಉನ್ನತ-ಮಟ್ಟದ ಟರ್ಬೊಪ್ರೊಪ್‌ಗಳಿಗೆ ಹೋಲಿಸಿದರೆ ಅಲಿಸ್‌ ನ ಒಂದು ಗಂಟೆಯ ಪ್ರತಿ ಹಾರಾಟದ ನಿರ್ವಹಣಾ ವೆಚ್ಚ ಕೇವಲ ಒಂದು ಭಾಗವಷ್ಟೇ. ಇದು 260 ನಾಟ್‌ ಗಳ ಗರಿಷ್ಠ ವೇಗದಲ್ಲಿ ಚಲಿಸುತ್ತದೆ. 9-ಸೀಟರ್ ಕಮ್ಯೂಟರ್, 6-ಸೀಟರ್ ಎಕ್ಸಿಕ್ಯೂಟಿವ್ ಕ್ಯಾಬಿನ್ ಮತ್ತು ಇಕಾರ್ಗೋ ಎಂಬ ಮೂರು ವಿಭಾಗ ಇದರಲ್ಲಿದೆ. ಇದು ಪ್ರಯಾಣಿಕರ ಆವೃತ್ತಿಗೆ 1,134 ಕೆಜಿ ಮತ್ತು ಇಕಾರ್ಗೋ ಆವೃತ್ತಿಗೆ 1179 ಕೆಜಿ ಗರಿಷ್ಠ ಲೋಡ್ ಸಾಮರ್ಥ್ಯ ಹೊಂದಿದೆ.


ಇದನ್ನೂ ಓದಿ: White Car: ಭಾರತದಲ್ಲಿ ಬಿಳಿ ಬಣ್ಣದ ಕಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​! ಯಾಕೆ ಅಷ್ಟೊಂದು ಬೇಡಿಕೆ?


“ನಾವು ವಾಯುಯಾನದ ಮುಂದಿನ ಯುಗವನ್ನು ಪ್ರಾರಂಭಿಸುತ್ತಿದ್ದೇವೆ. ಆಲಿಸ್‌ನ ಮರೆಯಲಾಗದ ಮೊದಲ ಹಾರಾಟ ಇದಾಗಿದೆ. ಈ ಮೂಲಕ ನಾವು ಆಕಾಶವನ್ನು ಯಶಸ್ವಿಯಾಗಿ ವಿದ್ಯುದ್ದೀಕರಿಸಿದ್ದೇವೆ” ಎಂದು ಎವಿಯೇಷನ್ ​​ಅಧ್ಯಕ್ಷ ಮತ್ತು ಸಿಇಒ ಗ್ರೆಗೊರಿ ಡೇವಿಸ್ ಹೇಳಿದ್ದಾರೆ. “ಈ ನೆಲದಲ್ಲಿ ನಾವು ಮೈಲಿಗಲ್ಲು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಎಲೆಕ್ಟ್ರಿಕ್‌ ವಿಮಾನ ಪ್ರಯಾಣಿಕರನ್ನು ಮಾತ್ರವಲ್ಲದೇ ಸರಕುಗಳನ್ನೂ ಸಾಗಿಸುತ್ತವೆ” ಎಂದು ಅವರು ಹೇಳಿದ್ದಾರೆ.


ಈ ವಿಮಾನದಲ್ಲಿ ಕಾರ್ಯನಿರ್ವಾಹಕ ಕ್ಯಾಬಿನ್ ಮತ್ತು eCargo ಇದೆ. ಅಲಿಸ್, ಎವಿಎಲ್‌ನಿಂದ ಬ್ಯಾಟರಿ ಬೆಂಬಲ, ಜಿಕೆಎನ್‌ನಿಂದ ರೆಕ್ಕೆಗಳು ಮತ್ತು ಪೊಟೆಜ್‌ನಿಂದ ಬಾಗಿಲುಗಳನ್ನು ಸಹ ಹೊಂದಿದೆ. ಅಲ್ಲದೇ ಸುಧಾರಿತ ಫ್ಲೈ-ಬೈ-ವೈರ್ ವ್ಯವಸ್ಥೆ, ವಿಮಾನ ನಿಯಂತ್ರಣಗಳು ಮತ್ತು ಏವಿಯಾನಿಕ್ಸ್ ಅನ್ನು ಹನಿವೆಲ್‌ನಿಂದ ಪಡೆಯಲಾಗಿದೆ. ಆಲ್‌ ಎಲೆಕ್ಟ್ರಿಕ್ ಅಲಿಸ್ ಅನ್ನು ವಿಮಾನ ನಿಲ್ದಾಣಗಳಿಂದ ನಿರ್ವಹಿಸಬಹುದಾಗಿದೆ. ಇವುಗಳನ್ನು ಪ್ರಸ್ತುತ ಕಮರ್ಷಿಯಲ್‌ ವಿಮಾನಗಳು ಶಬ್ದದ ಕಾಳಜಿ ಅಥವಾ ನಿರ್ಬಂಧಿತ ಕಾರ್ಯಾಚರಣೆಯ ಸಮಯದ ಕಾರಣದಿಂದಾಗಿ ಬಳಸುವುದಿಲ್ಲ. ಎವಿಯೇಶನ್ ಅಲಿಸ್, ಪ್ರಯಾಣಿಕ ಮತ್ತು ಸರಕು ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡಿದೆ ಮತ್ತು ಸಾಮಾನ್ಯವಾಗಿ 150 ಮೈಲಿಗಳಿಂದ 250 ಮೈಲುಗಳವರೆಗಿನ ಹಾರಾಟ ಈ ವಿಮಾನ ನಡೆಸುತ್ತದೆ.


ಅಲಿಸ್‌ ಗೆ ಬರುತ್ತಿದೆ ಸಾಕಷ್ಟು ಬೇಡಿಕೆ!
ಯುಎಸ್ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳಾದ ಕೇಪ್ ಏರ್ ಮತ್ತು ಗ್ಲೋಬಲ್ ಕ್ರಾಸಿಂಗ್ ಏರ್‌ಲೈನ್ಸ್ ಕ್ರಮವಾಗಿ 75 ಮತ್ತು 50 ಯುನಿಟ್ ಆಲಿಸ್ ವಿಮಾನಗಳಿಗೆ ಆರ್ಡರ್ ಮಾಡಿವೆ ಅಂತ ತಿಳಿದು ಬಂದಿದೆ. ಮತ್ತೊಂದೆಡೆ DHL ಎಕ್ಸ್‌ ಪ್ರೆಸ್‌ 12 ಅಲಿಸ್‌ ಇ ಕಾರ್ಗೊ ವಿಮಾನಗಳಿಗೆ ಬೇಡಿಕೆ ಇಟ್ಟ ಮೊದಲ ಗ್ರಾಹಕ ಕಂಪನಿಯಾಗಿದೆ. ಇನ್ನು, ಆಲಿಸ್‌ನ ಮೊದಲ ಹಾರಾಟವು ವಾಯುಯಾನ ಉದ್ಯಮಕ್ಕೆ ಪರಿವರ್ತನೆಯ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ ಎಂದು ಕೇಪ್ ಏರ್ ಸಂಸ್ಥಾಪಕ ಮತ್ತು ಮಂಡಳಿಯ ಅಧ್ಯಕ್ಷ ಡಾನ್ ವುಲ್ಫ್ ಹೇಳಿದ್ದಾರೆ.


ಅಲ್ಲದೇ, “ನಾವು ದಿನಕ್ಕೆ 400 ಕ್ಕೂ ಹೆಚ್ಚು ಪ್ರಾದೇಶಿಕ ವಿಮಾನಗಳನ್ನು ಹಾರಿಸುತ್ತೇವೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೆರಿಬಿಯನ್‌ನಾದ್ಯಂತ 30 ಕ್ಕೂ ಹೆಚ್ಚು ನಗರಗಳನ್ನು ಸಂಪರ್ಕಿಸುತ್ತೇವೆ. ಆಲಿಸ್ ನಮ್ಮ ಫ್ಲೈಟ್ ಕಾರ್ಯಾಚರಣೆಗಳಲ್ಲಿ 80 ಪ್ರತಿಶತವನ್ನು ಸುಲಭವಾಗಿ ಕವರ್ ಮಾಡಬಹುದು, ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೆ ಸುಸ್ಥಿರ, ಹೊಗೆ ಮುಕ್ತ ಪ್ರಯಾಣ ಇದರಿಂದ ಸಾಧ್ಯವಾಗುತ್ತದೆ” ಎಂದರು.


ಇದನ್ನೂ ಓದಿ:  Kitty Hawk: ಬಾಗಿಲು ಮುಚ್ಚಲು ಮುಂದಾದ ಲ್ಯಾರಿ ಪೇಜ್​ ಅವರ ಹಾರುವ ಕಾರಿನ ಕಂಪನಿ!


ಒಟ್ಟಾರೆ, ಎಲೆಕ್ಟ್ರಿಕ್‌ ವಿಮಾನ ದಿಂದ ನಮಗಷ್ಟೇ ಅಲ್ಲ ಪ್ರಕೃತಿಗೂ ಸಾಕಷ್ಟು ಪ್ರಯೋಜನಗಳಿವೆ. ಹಾಗಾಗಿ ಇದರ ಬಳಕೆಯಿಂದ ನಿಸರ್ಗವನ್ನೂ ನಾವು ರಕ್ಷಿಸಬಹುದು ಅನ್ನೋದ್ರಲ್ಲಿ ಎರಡು ಮಾತಿಲ್ಲ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು