ಹೊಸ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅದರಂತೆ ಡೆಟೆಲ್ ಸಂಸ್ಥೆ ತಯಾರಿಸಿದ ಈಸಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಇಂಡಿಯಾ ಅಟೋ ಶೋ 2021 ಕಾರ್ಯಕ್ರಮದಲ್ಲಿ ಡೆಟೆಲ್ ಈಸಿ ಪ್ಲಸ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಮುಂಬೈನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಈ ನೂತನ ಸ್ಕೂಟರ್ ಅನ್ನು ಏಪ್ರಿಲ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪೆನಿ ಸಜ್ಜಾಗಿದೆ.
ಡೆಟೆಲ್ ಈಸಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ಗೆ 60 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದ್ದು, 20ಎಹೆಚ್ ಬ್ಯಾಟರಿಯನ್ನು ಇದರಲ್ಲಿ ಅಳವಡಿಸಾಗಿದೆ. ಡೆಟೆಲ್ ಕಂಪೆನಿ ಏಪ್ರಿಲ್ನಲ್ಲಿ ಈ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸುವದರ ಜೊತೆಗೆ ಗ್ರಾಹಕ ಸ್ನೇಹಿಯಾಗಲು ಮುಂದಾಗಿದೆ.
ಅಂದಹಾಗೆಯೇ ಕಂಪೆನಿ ನಾಲ್ಕು ಬಣ್ಣಗಳಲ್ಲಿ ಈಸಿ ಪ್ಲಸ್ ಸ್ಕೂಟತರ್ ಅನ್ನು ಸಿದ್ಧಪಡಿಸಿದೆ. ಹಳದಿ, ಕೆಂಪು, ನೀಲಿ ಮತ್ತು ರಾಯಲ್ ಬ್ಲೂ ಬಣ್ಣದಲ್ಲಿ ಸಿಗಲಿದೆ.
ನಾವು ಭಾರತದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಜಾರಿಗೆ ತರಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಅಟೋ ಶೋ ಕಾರ್ಯಕ್ರಮದ ಮೂಲಕ ಡೆಟೆಲ್ ಕಂಪೆನಿ ಉತ್ಪಾದಿಸಿದ ವಾಹನವನ್ನು ಪ್ರದರ್ಶಿಸಲು ನಮಗೆ ಸಹಾಯಕವಾಗಿದೆ. ಎಂದು ಡೆಟೆಲ್ ಸಂಸ್ಥಾಪಕ ಡಾ.ಯೊಗೇಶ್ ಭಾಟಿಯಾ ಹೇಳಿದರು.
2021ರ ಅಂತ್ಯದ ವೇಳೆಗೆ ಇ-ವಾಹನ ಡೆಟೆಲ್ ಈಸ್ಟ್ ಲೋಡರ್ ಅನ್ನು ತರುವ ಯೋಜನೆ ಹೊಂದಿದ್ದೇವೆ. ಈ ಬ್ರಾಂಡ್ ಭಾರತದಲ್ಲಿ ಶ್ರೇಣಿ2 ಮತ್ತು ಶ್ರೇಣಿ 3 ಮಾರುಕಟ್ಟೆಯನ್ನು ಗುರಿಯಾಗಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ