ಇದು ವಿಶ್ವದ ಮೊದಲ ಎಲೆಕ್ಟ್ರಿಕ್​ ಹಾರುವ ರೇಸಿಂಗ್​ ಕಾರು!; ಗಂಟೆಗೆ ಎಷ್ಟು ಕಿ.ಮೀ ಕ್ರಮಿಸುತ್ತದೆ ಗೊತ್ತಾ?

Airspeeder Mk3: ಹಾರುವ ಕಾರುಗಳ ಅಭಿವೃದ್ಧಿಯತ್ತ ಹಲವು ಕಂಪನಿಗಳು ತೊಡಗಿಸಿಕೊಂಡಿದೆ. ಭವಿಷ್ಯದಲ್ಲಿ ಆಕಾಶದಲ್ಲಿ ಸ್ವಚ್ಚಂಧವಾಗಿ ಕಾರುವ ಕಾಲ ಬರುಲಿದೆ. ಅದಕ್ಕೆ ಉದಾಹರಣೆ ಎಂಬಂತೆ ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿರುವ ಅಲೌಡಾದ ಏರ್​ಸ್ಪೀಡರ್​ ಕಂಪನಿ ತಯಾರಿಸುವ ವಿದ್ಯುತ್​ ಚಾಲಿತ ಕಾರು ಈ ಸಾಲಿಗೆ ಸೇರಿದೆ.

Airspeeder Mk3

Airspeeder Mk3

 • Share this:
  ಅಟೋ ಉದ್ಯಮ ಬದಲಾಗುತ್ತಿದೆ ಇಂಧನ ಚಾಲಿತ ವಾಹನಗಳಿಂದ ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆಯತ್ತ  ಕಂಪನಿಗಳು ತೊಡಗಿಕೊಂಡಿದೆ. ಈಗಾಗಲೇ ಕೆಲವು ಕಂಪನಿ ಎಲೆಕ್ಟ್ರಿಕ್​ ವಾಹನಗಳನ್ನು ಜಗತ್ತಿಗೆ ಅನಾವರಣಗೊಳಿಸಿದಲ್ಲದೆ, ರಸ್ತೆಗೂ ಇಳಿಸಿದೆ. ಇಂತಹ ಬದಲಾವಣೆಯತ್ತ ವಿಶ್ವವೇ ಮುನ್ನಗ್ಗುತ್ತಿರುವ ಸಮಯದಲ್ಲಿ ಹಾರುವ ಕಾರುಗಳ ಉತ್ಪಾದನೆಯಲ್ಲಿ ಕೆಲ ದೇಶಗಳು ತೊಡಗಿಸಿಕೊಂಡಿದೆ. ಅದರಂತೆ ಇಂಗ್ಲೆಂಡ್​ ಮೂಲದ ಕಂಪೆನಿಯೊಂದು ಆಸ್ಟ್ರೇಲಿಯಾದಲ್ಲಿ ವಿಶ್ವದ ಮೊದಲ ಎಲೆಕ್ಟ್ರಿಕ್​​ ಹಾರುವ ರೇಸಿಂಗ್​ ಕಾರನ್ನು ಅನಾವರಣಗೊಳಿಸಿದೆ.

  ಹೌದು. ಹಾರುವ ಕಾರುಗಳ ಅಭಿವೃದ್ಧಿಯತ್ತ ಹಲವು ಕಂಪನಿಗಳು ತೊಡಗಿಸಿಕೊಂಡಿದೆ. ಭವಿಷ್ಯದಲ್ಲಿ ಆಕಾಶದಲ್ಲಿ ಸ್ವಚ್ಚಂಧವಾಗಿ ಕಾರುವ ಕಾಲ ಬರುಲಿದೆ. ಅದಕ್ಕೆ ಉದಾಹರಣೆ ಎಂಬಂತೆ ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿರುವ ಅಲೌಡಾದ ಏರ್​ಸ್ಪೀಡರ್​ ಕಂಪನಿ ತಯಾರಿಸುವ ವಿದ್ಯುತ್​ ಚಾಲಿತ ಕಾರು ಈ ಸಾಲಿಗೆ ಸೇರಿದೆ.

  ಏರ್​ಸ್ಪೀಡರ್​ ಉತ್ಪಾದಿಸಿರುವ ಈ ಕಾರಿನ ಹೆಸರು ಏರ್​ಸ್ಪೀಡರ್​ ಎಂಕೆ 3. ಇದೊಂದು ರಿಮೋಟ್​ ಚಾಲಿತ ಮತ್ತು ಲ್ಯಾಂಡಿಂಗ್​ ಎಲೆಕ್ಟ್ರಿಕ್​ ಕಾರಾಗಿದ್ದು, ಇದೇ ವರ್ಷ ದ್ವಿತಿಯಾರ್ಧದ ಮುಂಬರುವ ರೇಸಿಂಗ್​ ಸರಣಿಯಲ್ಲಿ ಪ್ರದರ್ಶಿಸಲಾಗುವುದು ಹೇಳಲಾಗುತ್ತಿದೆ.

  ರಿಮೋಟ್​ ಆಪರೇಟರ್ ಮೂಲಕ​ ನಿರ್ವಹಿಸಲಿರುವ ಏರ್​​​ಸ್ಪೀಡರ್​ ಎಂಕೆ 3 ರೇಸಿಂಗ್​ ಕಾರು ಇವಿಟಿಒಎಲ್​ ಕ್ರಾಫ್ಟ್​​ನಲ್ಲಿ ಹಿಂದೆಂದೂ ನೋಡಿರದ ತಂತ್ರಜ್ನಾನ ಮತ್ತು ಎಂಜಿನಿಯರ್​ ಅಂಶಗಳನ್ನು ಒಳಗೊಂಡಿದೆ. ಕಾರ್ಬನ್​ ಫೈಬರ್​ ಟಬ್​ನಲ್ಲಿ ನಿರ್ಮಿಸಲಾಗಿದ್ದು, ಕಾರಿನ ಪ್ರತಿಯೊಂದು ಮೂಲೆಯಲ್ಲಿ ರೋಟರ್​ ಬ್ಲೇಡ್​ ನೀಡಲಾಗಿದೆ.

  ಕಾರ್​ಆ್ಯಂಡ್​ಬೈಕ್​ ವರದಿಯ ಪ್ರಕಾರ, ‘ಇಂಗ್ಲೆಂಡ್​ನಲ್ಲಿ ಮೂಲದ ಕಂಪನಿ ಇದಾಗಿದ್ದು, ಪ್ರಸ್ತುತ ಎಂಕೆ ಫ್ಲೈಯಿಂಗ್​ ರೇಸಿಂಗ್​ ಕಾರನ್ನು ಸಂಪೂರ್ಣವಾಗಿ ಆಸ್ಟ್ರೇಲಿಯದ ಅಡಿಲೇಡ್​ನಲ್ಲಿರುವ ಅಲೌಡಾದ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ. ಈ ಎಲೆಕ್ಟ್ರಿಕ್​ ಕಾರನ್ನು ಮುಂಬರುವ ರೇಸಿಂಗ್​ ಸರಣೆಯಲ್ಲಿ ಭಾಗವಹಿಸುವ ತಂಡಗಳಿಗೆ ನೀಡಲಾಗುತ್ತದೆ’ ಎಂದು ತಿಳಿಸಿದೆ.

  ಎಂಕೆ 3 ಹಾರುವ ಕಾರು 96ಕೆಡಬ್ಲ್ಯು ಎಲೆಕ್ಟ್ರಿಕ್​ ಪವರ್​ಟ್ರೇನ್​  ಮತ್ತು 429 ಬಿಎಸ್​ಪಿ ಉತ್ಪಾದಿಸುತ್ತದೆ. ಇದು ಆಡಿಕ್ಯೂ 7ಗಿಂತ ಹೆಚ್ಚಿನ ಶಕ್ತಿ ಉತ್ಪಾದಿಸುವುದಲ್ಲದೆ ರೋಟರ್​ ಬ್ಲೇಡ್​ಗೆ ಶಕ್ತಿಯನ್ನು ಕಳುಹಿಸುತ್ತದೆ. ಇನ್ನು ಈ ಕಾರು ಕೇವಲ 2.8 ಸೆಕೆಂಡುಗಳಲ್ಲಿ ಗಂಟೆಗೆ 0 ಯಿಂದ 100 ಕಿ.ಮೀ ವೇಗವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಮತ್ತು ಗಂಟೆಗೆ 120 ಕಿ.ಮೀ ಹೆಚ್ಚಿನ ವೇಗವನ್ನು ತಲುಪುತ್ತದೆ.
  Published by:Harshith AS
  First published: