• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Video: ಇನ್ಮುಂದೆ ಬ್ಯಾಟ್​ಮನ್​ನಂತೆ ಆಕಾಶದಲ್ಲಿ ಹಾರಾಡಬಹುದು!; ಎಲೆಕ್ಟ್ರಿಕ್​​ ವಿಂಗ್​ಸೂಟ್​​ ಅಭಿವೃದ್ಧಿ ಪಡಿಸಿದ BMW ಸಂಸ್ಥೆ

Video: ಇನ್ಮುಂದೆ ಬ್ಯಾಟ್​ಮನ್​ನಂತೆ ಆಕಾಶದಲ್ಲಿ ಹಾರಾಡಬಹುದು!; ಎಲೆಕ್ಟ್ರಿಕ್​​ ವಿಂಗ್​ಸೂಟ್​​ ಅಭಿವೃದ್ಧಿ ಪಡಿಸಿದ BMW ಸಂಸ್ಥೆ

ಎಲೆಕ್ಟ್ರಿಕ್​​ ವಿಂಗ್​ಸೂಟ್

ಎಲೆಕ್ಟ್ರಿಕ್​​ ವಿಂಗ್​ಸೂಟ್

BMW: ಈಗಾಗಲೇ ಹಲವಾರು ವಾಹನ ಉತ್ಪಾದಕ ಸಂಸ್ಥೆಗಳು ಎಲೆಕ್ಟ್ರಿಕ್​ ಸ್ಕೂಟರ್​, ಬೈಕ್​ಗಳನ್ನು ಉತ್ಪಾದಿಸುತ್ತಿದೆ. ಬ್ಯಾಟರಿ ಚಾಲಿತ ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ  ಬಿಡುಗಡೆ ಮಾಡುತ್ತಿದೆ. ಅದರಂತೆ ಜನಪ್ರಿಯ  BMW ಸಂಸ್ಥೆ ಎಲೆಕ್ಟ್ರಿಕ್​ ವಿಂಗ್​ಸೂಟನ್ನು ಅಭಿವೃದ್ಧಿ ಪಡಿಸಿದೆ. 

ಮುಂದೆ ಓದಿ ...
  • Share this:

    ಇನ್ಮುಂದೆ ಬ್ಯಾಟ್​ಮನ್​ನಂತೆ ಹಾರಾಡಬಹುದಾಗಿದೆ!. ಅಂತಹದೊಂದು ಎಲೆಕ್ಟ್ರಿಕ್​ ವಿಂಗ್​ಸೂಟನ್ನು BMW ಸಂಸ್ಥೆ ಅಭಿವೃದ್ಧಿಪಡಿಸಿದೆ. ಅಷ್ಟು ಮಾತ್ರವಲ್ಲದೆ, ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಬಹುದಾಗಿದೆ. ಅಂದಹಾಗೆಯೇ, ಬಿಎಮ್​ಡಬ್ಲು ಸಂಸ್ಥೆ ಉತ್ಪಾದಿಸಿದ ಎಲೆಕ್ಟ್ರಿಕ್​​ ವಿಂಗ್​ಸೂಟ್​ ಎಷ್ಟು ದೂರ ಕ್ರಮಿಸುತ್ತೆ ಗೊತ್ತಾ?.


    ಈಗಾಗಲೇ ಹಲವಾರು ವಾಹನ ಉತ್ಪಾದಕ ಸಂಸ್ಥೆಗಳು ಎಲೆಕ್ಟ್ರಿಕ್​ ಸ್ಕೂಟರ್​, ಬೈಕ್​ಗಳನ್ನು ಉತ್ಪಾದಿಸುತ್ತಿದೆ. ಬ್ಯಾಟರಿ ಚಾಲಿತ ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ  ಬಿಡುಗಡೆ ಮಾಡುತ್ತಿದೆ. ಅದರಂತೆ ಜನಪ್ರಿಯ  BMW ಸಂಸ್ಥೆ ಎಲೆಕ್ಟ್ರಿಕ್​ ವಿಂಗ್​ಸೂಟನ್ನು ಅಭಿವೃದ್ಧಿ ಪಡಿಸಿದೆ.  300 ಕಿ.ಮೀ ಚಲಿಸುವ ಸಾಮರ್ಥವನ್ನು ಈ ಎಲೆಕ್ಟ್ರಿಕ್​ ವಿಂಗ್​ಸೂಟ್​ ಹೊಂದಿದೆ.


    ಪೀಟರ್​ ಸಾಲ್ಜ್​ಮನ್​ ಎಂಬರು ವೃತ್ತಿಪರ ವಿಂಗ್​ಸೂಟ್​​ ಪೈಲಟ್​ ಮತ್ತು ಸ್ಕೈಡ್ರೈವರ್​ ಭೋದಕರಾಗಿದ್ದಾರೆ. ಮೂರು ವರ್ಷಗಳಿಂದ ಈ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಇದೀಗ BMW ಜೊತೆಗೆ ಎಲೆಕ್ಟ್ರಿಕ್​ ವಿಂಗ್​ಸೂಟ್​​ ಅಭಿವೃದ್ಧಿ ಪಡಿಸಲು ನೆರವು ನೀಡಿದ್ದಾರೆ.


    ಎಲೆಕ್ಟ್ರಿಕ್​ ವಿಂಗ್​ಸೂಟಿನ​ ಎದೆಯ ಭಾಗದಲ್ಲಿ ಕಾರ್ಬನ್​ ಪ್ರೊಪೆಲ್ಲರ್​ ಅನ್ನು ಅಳವಡಿಸಲಾಗಿದ್ದು,  7.5 ಹೆಚ್​ಪಿ ಅಧಿಕ ಪವರ್​ ನೀಡಲು ಸಹಾಯಕವಾಗಿದೆ. ಇನ್ನು 25 ಸಾವಿರ ಆರ್​ಪಿಎಮ್​ ವೇಗ ಮತ್ತು  ಐದು ನಿಮಿಷದಲ್ಲಿ 20ಹೆಚ್​ಪಿ ಉತ್ಪಾದಿಸುತ್ತದೆ.




    ಜರ್ಮನಿಯ ಅಟೋಮೇಕರ್​ ತನ್ನ ಯ್ಯೂಟೂಬ್ ಖಾತೆಯಲ್ಲಿ ಎಲೆಕ್ಟ್ರಿಕ್​ ವಿಂಗ್​ಸೂಟಿನ ವಿಡಿಯೋವನ್ನು ಅಪ್ಲೋಡ್​ ಮಾಡಿದ್ದಾರೆ. ಸಾಲ್ಜ್​ಮನ್​ ಎಲೆಕ್ಟ್ರಿಕ್​ ವಿಂಗ್​ಸೂಟ್​ ಧರಿಸಿ ಯಶಸ್ವಿಯಾಗಿ ಹಾರಡುತ್ತಿರುವುದನ್ನು ದೃಶ್ಯದಲ್ಲಿ ಸೆರೆಹಿಡಿಯಲಾಗಿದೆ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು