ದೇಶದಲ್ಲಿ ಮತ್ತೆ ಕೊರೊನಾದ (Corona) ಅಟ್ಟಹಾಸ ಪ್ರಾರಂಭವಾಗುವ ಮುನ್ಸೂಚನೆಯಲ್ಲಿದೆ. ಇದಕ್ಕಾಗಿ ಸರ್ಕಾರಗಳೂ ಕೂಡ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಧ್ಯೆ ಇನ್ನೇನು ಕೆಲವರು ವರ್ಕ್ ಫ್ರಮ್ ಹೋಮ್ (Work From Home) ಬರಬಹುದೆಂಬ ಯೋಚನೆಯಲ್ಲೂ ಇರಬಹುದು. ಆ ಸಂದರ್ಭದಲ್ಲಿ ನೆಟ್ವರ್ಕ್ (Network) ಸಮಸ್ಯೆ, ಡೇಟಾ (Data) ಸಮಸ್ಯೆಗಳು ಕಂಡು ಬರುವುದು ಸಹಜ. ಆದರೆ ಈ ಎಲ್ಲಾ ತೊಂದರೆಗಳಿಗೆ ಬಿಎಸ್ಎನ್ಎಲ್ (BSNL) ಪರಿಹಾರವನ್ನು ತಂದಿದೆ. ವರ್ಕ್ ಫ್ರಮ್ ಹೋಮ್ನಲ್ಲಿರುವವರಿಗಾಗಿ ಬಿಎಸ್ಎನ್ಎಲ್ ಹೊಸ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಬಾರೀ ಅಗ್ಗದಲ್ಲಿದ್ದು ಮನೆಯಲ್ಲಿಯೇ ಕುಳಿತು ಆಫೀಸ್ ಕೆಲಸ ಮಾಡುವವರಿಗೆ ಈ ರೀಚಾರ್ಜ್ ಪ್ಲಾನ್ ಸೂಕ್ತವಾಗಿದೆ.
ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ ತನ್ನ ಅಗ್ಗದ ರೀಚಾರ್ಜ್ ಪ್ಲಾನ್ ಮೂಲಕ ಎಲ್ಲರ ಗಮನಸೆಳೆದಿದೆ. ಇದು ಟೆಲಿಕಾಂ ವಲಯದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿದ್ದು ಇದೀಗ ಇನ್ನಷ್ಟು ಗಮನಸೆಳೆಯುವ ಉದ್ದೇಶದಿಂದ ವರ್ಕ್ ಫ್ರಮ್ ಹೋಮ್ನಲ್ಲಿರುವವರಿಗೆ ಸೂಕ್ತವಾಗುವಂತೆ ಎರಡು ರೀಚಾರ್ಜ್ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ.
ಏನಿದು ವರ್ಕ್ ಫ್ರಮ್ ಹೋಮ್ ಡೇಟಾ ಪ್ಲಾನ್?
ಜಿಯೋ, ಏರ್ಟೆಲ್, ವಿಐ ಟೆಲಿಕಾಂ ಕಂಪನಿಗಳು ಇದುವರೆಗೆ ನೀಡದ ಡೇಟಾ ಪ್ಲಾನ್ ಅನ್ನು ಇದೀಗ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ ಬಿಡುಗಡೆ ಮಾಡಿದೆ. ಯಾವುದೇ ಟೆಲಿಕಾಂ ಕಂಪನಿಗಳು ವರ್ಕ್ ಪ್ರಮ್ ಹೋಮ್ ಮಾಡುವವರಿಗಾಗಿ ಬಿಡುಗಡೆ ಮಾಡುವಂತಹ ರೀಚಾರ್ಜ್ ಪ್ಲಾನ್ಗಳು ಆದಷ್ಟು ದುಬಾರಿಯಾಗಿಯೇ ಇರುತ್ತದೆ.
ಇದನ್ನೂ ಓದಿ: ಫೆಬ್ರವರಿ 14 ರಿಂದ ‘ಇಂಟರ್ನೆಟ್ ಎಕ್ಸ್ಪ್ಲೋರರ್‘ ಕಾರ್ಯನಿರ್ವಹಿಸುವುದಿಲ್ಲವಂತೆ! ಕಾರಣವೇನು ಗೊತ್ತಾ?
ಆದರೆ ಇದೀಗ ಬಿಎಸ್ಎನ್ಎಲ್ ಭಾರೀ ಅಗ್ಗದ ರಿಯಾತಯಿತಿ ದರದಲ್ಲಿ ಡೇಟಾ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದೀಗ ಬಿಎಸ್ಎನ್ಎಲ್ ಕಂಪನಿಯು 151 ರೂಪಾಯಿ ಮತ್ತು 251 ರೂಪಾಯಿಗಳ ಎರಡು ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದ್ದು ಮನೆಯಿಂದಲೇ ಇಂಟರ್ನೆಟ್ ಬಳಕೆ ಮಾಡಿ ಕೆಲಸ ಮಾಡುವವರಿಗೆ ಇದು ಬಹಳಷ್ಟು ಸಹಕಾರಿಯಾಗಲಿದೆ.
ಬಿಎಸ್ಎನ್ಎಲ್ನ 151 ರೂಪಾಯಿ ಯೋಜನೆ
ಈ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ರೀಚಾರ್ಜ್ ಅನ್ನು ಮಾಡಿದ್ರೆ ಒಟ್ಟಾಗಿ 40ಜಿಬಿ ಡೇಟಾ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಈ ಪ್ಲ್ಯಾನ್ನಲ್ಲಿ ಜಿಂಗ್ ಚಂದಾದಾರಿಕೆ ಸಹ ಹೊಂದಬಹುದಾಗಿದೆ.
ಬಿಎಸ್ಎನ್ಎಲ್ನ 251 ರೂಪಾಯಿ ಯೋಜನೆ
ಬಿಎಸ್ಎನ್ಎಲ್ನ 251 ರೂಪಾಯ ಗಳ ಯೋಜನೆಯಲ್ಲಿ ಬಳಕೆದಾರರು ಒಟ್ಟು 70ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಹಾಗೆಯೇ ಇದರಲ್ಲೂ ಸಹ ಜಿಂಗ್ ಚಂದಾದಾರಿಕೆ ಆಫರ್ ಅನ್ನು ನೀಡಲಾಗಿದೆ. ಇನ್ನು ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲು ಕಾರಣ
ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವಂತಹ ಎರಡೂ ಯೋಜನೆಗಳು 28 ದಿನಗಳವರೆಗಿನ ವ್ಯಾಲಿಡಿಯನ್ನು ಮಾತ್ರ ಹೊಂದಿರುತ್ತದೆ. ಇದಕ್ಕಿಂತ ಹೆಚ್ಚಿನ ಅವಧಿಯನ್ನು ಇದಕ್ಕೆ ನೀಡಲಾಗಿಲ್ಲ. ಏಕೆಂದರೆ ವರ್ಕ್ ಫ್ರಮ್ ಹೋಮ್ನಲ್ಲಿರುವವರು ಕಡಿಮೆ ದಿನದಲ್ಲಿ ಹೆಚ್ಚು ಡೇಟಾವನ್ನು ಬಳಸುತ್ತಾರೆ. ಹಾಗಿರುವಾಗ ಅವರಿಗೆ 28 ದಿನಗಳ ವ್ಯಾಲಿಡಿಟಿ ಸಾಕಾಗುತ್ತದೆ.
ಹೆಚ್ಚು ವ್ಯಾಲಿಡಿಟಿ ಹೊಂದಿರುವ ಬಿಎಸ್ಎನ್ಎಲ್ನ ಯೋಜನೆಗಳು
ಹೆಚ್ಚಿನ ಡೇಟಾ ರೀಚಾರ್ಜ್ ಪ್ಲಾನ್ ಬೇಕಿದ್ದರೆ 198 ರೂಪಾಯಿಗಳಷ್ಟು ರೀಚಾರ್ಜ್ ಮಾಡಬೇಕು. ಇದರಲ್ಲಿ ದಿನವೂ 2GB ಡೇಟಾವನ್ನು ಪಡೆಯಬಹುದಾಗಿದೆ. ಇನ್ನು ಈ ಯೋಜನೆ 40 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
485 ರೂಪಾಯಿಗಳ ಯೋಜನೆ
ಬಿಎಸ್ಎನ್ಎಲ್ನ 485 ರೂಪಾಯಿಗಳ ಯೋಜನೆಯಲ್ಲಿ ಗ್ರಾಹಕರು ದಿನವೂ 1.5 ಜಿಬಿ ಡೇಟಾ ಪಡೆಯಬಹುದು. ಇದರೊಂದಿಗೆ ಅನ್ಲಿಮಿಟೆಡ್ ಕಾಲ್ ಹಾಗೂ ದಿನವೂ 100 ಎಸ್ಎಮ್ಎಸ್ ಅನ್ನು ಉಚಿತವಾಗಿ ಮಾಡಬಹುದಾಗಿದೆ. ಈ ಯೋಜನೆ ಬರೋಬ್ಬರಿ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
499 ರೂಪಾಯಿಗಳ ಯೋಜನೆ
ಬಿಎಸ್ಎನ್ಎಲ್ನ 499 ರೂಪಾಯಿಗಳ ಯೋಜನೆಯಲ್ಲಿ ದಿನವೂ 2 ಜಿಬಿ ಡೇಟಾ ಬಳಸಬಹುದಾಗಿದೆ. ಹಾಗೆಯೇ ಅನ್ಲಿಮಿಟೆಡ್ ಕಾಲ್ ಸೌಲಭ್ಯದ ಜೊತೆಗೆ ದಿನವೂ 100 ಎಸ್ಎಮ್ಎಸ್ ಮಅಡಬಹುದಾಗಿದೆ. ವಿಶೇಷವಾಗಿ ಈ ಪ್ಲಾನ್ 80 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ