Facebookನಲ್ಲಿ ಹೆಸರು ಬದಲಾಯಿಸಿಕೊಂಡು ಮೋಸ ಮಾಡುವ ಮಹಿಳೆಯರಿದ್ದಾರೆ ಹುಷಾರ್​!

ನವದೆಹಲಿಯ 29 ವರ್ಷದ ಮಹಿಳೆಯೊಬ್ಬರು ತನ್ನ ಹೆಸರನ್ನು ಬದಲಿಸುವ ಮೂಲಕ ಆನ್‌ಲೈನ್‌ನಲ್ಲಿ ಹುಡುಗರಿಗೆ ಆಮಿಷ ಒಡ್ಡಿ ನಂತರ ಅವರಿಂದ ಹಣವನ್ನು ಪಡೆದು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿತ್ತು. ಆದರೀಗ ಪೊಲೀಸರು ಆ ಮಹಿಳೆಯನ್ನು ಕೊನೆಗೂ ಹಿಡಿದು ಬಂಧಿಸಿದ್ದಾರೆ.

ಫೇಸ್​ಬುಕ್

ಫೇಸ್​ಬುಕ್

 • Share this:
  ಇಂಟರ್ನೆಟ್ (Internet) ಮತ್ತು ಸಾಮಾಜಿಕ ಮಾಧ್ಯಮಗಳು (Social Media) ನಮ್ಮ ಜೀವನವನ್ನು ಸುಲಭಗೊಳಿಸಿವೆ. ಆದರೆ ಇವುಗಳಿಂದಲೇ ಬಹಳಷ್ಟು ಅಪಾಯಗಳು ನಮ್ಮ ಮೇಲೆ ಬೀಳಲು ಪ್ರಾರಂಭಿಸಿವೆ. ಅದರಲ್ಲೂ ದೇಶದಲ್ಲಿ ಸೈಬರ್ ಕ್ರೈಮ್ (Cyber Crime) ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಪ್ರತಿದಿನ ಸಾಕಷ್ಟು ಜನರು ಸಂಕಷ್ಟದಲ್ಲಿ (Harship) ಸಿಲುಕಿಕೊಳ್ಳುತ್ತಿದ್ದಾರೆ. ಜನರ ಖಾಸಗಿ ಮಾಹಿತಿ ಮತ್ತು ಹಣವನ್ನು (Money) ಎಗರಿಸುವ ಮೂಲಕ ಜನಸಾಮಾನ್ಯರನ್ನು ಕಷ್ಟದ ಪರಿಸ್ಥಿತಿಗೆ ತಳ್ಳುತ್ತಿದ್ದಾರೆ. ಅದರಂತೆ ಇಲ್ಲೊಂದು ಮೋಸದ ಜಾಲದ ಪ್ರಕರಣ ಬೆಳಕಿಗೆ ಬಂದಿದೆ.

  ಮಹಿಳೆಯ ಮೋಸದ ಬಲೆಗೆ ಸಿಲುಕಿದ ಪುರುಷ

  ನವದೆಹಲಿಯ 29 ವರ್ಷದ ಮಹಿಳೆಯೊಬ್ಬರು ತನ್ನ ಹೆಸರನ್ನು ಬದಲಿಸುವ ಮೂಲಕ ಆನ್‌ಲೈನ್‌ನಲ್ಲಿ ಹುಡುಗರಿಗೆ ಆಮಿಷ ಒಡ್ಡಿ ನಂತರ ಅವರಿಂದ ಹಣವನ್ನು ಪಡೆದು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿತ್ತು. ಆದರೀಗ ಪೊಲೀಸರು ಆ ಮಹಿಳೆಯನ್ನು ಕೊನೆಗೂ ಹಿಡಿದು ಬಂಧಿಸಿದ್ದಾರೆ. ಮಹಿಳೆಯನ್ನು ದೆಹಲಿಯ ತಿಲಕ್ ನರ್ಗ್‌ನ ಕೃಷ್ಣ ಪುರಿ ಪ್ರದೇಶದಲ್ಲಿ ಬಂಧಿಸಲಾಗಿದೆ. ಮಹಿಳೆಯು ಯುಕೆಯಲ್ಲಿ ನೆಲೆಸಿರುವ 'ಅಮರ ಗುಜ್ರಾಲ್' ಎಂಬ ಹೆಸರಿನಿಂದ ಫೇಸ್‌ಬುಕ್‌ನಲ್ಲಿ ಶ್ರೀ ಧರಂ ರಾಜ್ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದಳು. ನಂತರ ಆತನಿಗೆ ಮೋಸ ಮಾಡಿದ್ದಾಳೆ.

  ಅಷ್ಟಕ್ಕೂ ಏನಾಯಿತು?

  ಫೇಸ್‌ಬುಕ್‌ನಲ್ಲಿ  ಫ್ರೆಂಡ್​ ರಿಕ್ವೆಷ್ಟ್​​ ಕಳುಹಿಸುವ ಮೂಲಕ ಸ್ನೇಹ ಬೆಳೆಸಿದ ನಂತರ, ಈ ಹುಡುಗಿ ಯುಕೆಯಿಂದ ಭಾರತಕ್ಕೆ ಬರಲು ಯೋಜಿಸುತ್ತಿರುವುದಾಗಿ ಧರಂ ರಾಜ್​ ಬಳಿ ಹೇಳುತ್ತಾಳೆ. ಕೆಲವು ದಿನಗಳ ನಂತರ, ರಾಜ್‌ಗೆ 'ಅಮರ ಗುಜ್ರಾಲ್‘ ಅವರನ್ನು ಏರ್​ಪೋರ್ಟ್​ನಲ್ಲಿ ಬಂಧಿಸಿದ್ದು, ಕಸ್ಟಮ್ಸ್ ಅಧಿಕಾರಿಯ ರೂಪದಲ್ಲಿ ರಾಜ್​ಗೆ ಹೊಸ ನಂಬರ್​ನಿಂದ ಕರೆ ಮಾಡಿಸುತ್ತಾಳೆ ಮತ್ತು ಆಕೆಯೊಂದಿಗೆ ಕೆಲವು ಬೆಲೆಬಾಳುವ ವಸ್ತುಗಳಿದ್ದ ಕಾರಣ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ ಎಂದು ಹೇಳುವ ಮೂಲಕ ಆಕೆ ಹೊರಡಲು ತಕ್ಷಣ ಹಣ ಬೇಕು ಎಂದು ರಾಜ್​ಗೆ ಕರೆಯಲ್ಲಿ ವಿವರಿಸಲಾಗುತ್ತದೆ. ಮಹಿಳೆಯ ಮೋಸದ ಕಥೆಯನ್ನು ಕೇಳಿದ ರಾಜ್ ಆಕೆ ನೀಡಿದ ಖಾತೆ ಸಂಖ್ಯೆಗೆ 34 ಸಾವಿರ ರೂ.ಗಳನ್ನು ವರ್ಗಾಯಿಸುತ್ತಾನೆ. ಆ ಬಳಿಕ ಮಹಿಳೆ ರಾಜ್​ನನ್ನು ಫೇಸ್‌ಬುಕ್ ಮತ್ತು ವಾಟ್ಸಾಪ್‌ನಿಂದ ಬ್ಲಾಕ್ ಮಾಡುತ್ತಾಳೆ.

  ಬಂಧನದ ಬಳಿಕ ಮಹಿಳೆ ಈ ವಿಷಯವನ್ನು ಬಹಿರಂಗಪಡಿಸಿದ್ದಾಳೆ

  ಬಂಧಿಸಿದ ನಂತರ, ಈ ಮಹಿಳೆ ತನ್ನ ಆಫ್ರಿಕನ್ ಸ್ನೇಹಿತರಿಂದ ಹುಡುಗಿಗೆ ಈ ಆಲೋಚನೆ ಬಂದಿದ್ದು, ಜನರನ್ನು ಅದೇ ರೀತಿಯಲ್ಲಿ ಮೋಸ ಮಾಡುತ್ತಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಮಹಿಳೆ ಅನೇಕ ಸ್ಥಳೀಯ ಮತ್ತು ಯುಕೆ ಸಿಮ್ ಕಾರ್ಡ್‌ಗಳನ್ನು ಖರೀದಿಸಿದ್ದಾಳೆ ಮತ್ತು ಅಮರಾ ಗುಜ್ರಾಲ್, ಲಖಿಖಾ ಚೌಧರಿ, ಅವ್ನಿ ಚೋಪ್ರಾ, ಆವಂತಿಕಾ ಚೋಪ್ರಾ, ಅನಾಮಿಕಾ ಗುಜ್ರಾಲ್ ಮತ್ತು ಎಮಿಲಿ ರೋಸ್‌ನಂತಹ ಅನೇಕ ಹೆಸರುಗಳೊಂದಿಗೆ ನಕಲಿ ಫೇಸ್‌ಬುಕ್ ಪ್ರೊಫೈಲ್‌ಗಳನ್ನು ಸಹ ರಚಿಸಿದ್ದಾಳೆ.

  ಇದನ್ನು ಓದಿ: Siri: ಸರಳ ಪ್ರಶ್ನೆಗೆ ತಪ್ಪು ಉತ್ತರ ನೀಡುತ್ತಿರುವ ಸಿರಿ! ಬೇಸರಗೊಂಡು ಆ್ಯಪಲ್​ ಕಂಪನಿಗೆ ದೂರು ನೀಡಿದ ಬಳಕೆದಾರರು

  ಈ ರೀತಿ ಮಾಡಿದ ನಂತರ ಮಹಿಳೆ ಫೇಸ್‌ಬುಕ್‌ನಲ್ಲಿ ವಿವಿಧ ಜನರೊಂದಿಗೆ ಸ್ನೇಹ ಬೆಳೆಸುತ್ತಿದ್ದಳು ಮತ್ತು ನಂತರ ಕ್ರಮೇಣ ವಾಟ್ಸಾಪ್‌ನಲ್ಲಿಯೂ ಮಾತನಾಡಲು ಪ್ರಾರಂಭಿಸಿದಳು. ಮಹಿಳೆ ಫೇಸ್‌ಬುಕ್ ಪ್ರೊಫೈಲ್‌ಗಳಲ್ಲಿ ಬಳಸಿದ ಚಿತ್ರಗಳು ವಾಸ್ತವವಾಗಿ ಯುಕೆ ನಿವಾಸಿಗಳಾದ್ದಾಗಿದೆ.

  ಇದನ್ನು ಓದಿ: Smartphone: ಸ್ಮಾರ್ಟ್​​ಫೋನ್ ಕಳೆದುಹೋದರೆ ಚಿಂತೆ ಮಾಡ್ಬೇಡಿ! ಹೀಗೆ ಟ್ರ್ಯಾಕ್ ಮಾಡಿ ಹುಡುಕಬಹುದು

  ಇಂತಹ ಅಪಾಯಕಾರಿ ವಂಚನೆಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಜಾಗರೂಕತೆ. ಸ್ನೇಹಿತರು ಅಥವಾ ಸಂಬಂಧಿಕರಾಗಿದ್ದರೂ ಸಹ, ಸಂಪೂರ್ಣ ತನಿಖೆ ಮಾಡದೆ ಯಾರಿಗೂ ಹಣವನ್ನು ವರ್ಗಾಯಿಸಬಾರದು. ಪ್ರತಿದಿನ ಇಂತಹ ಘಟನೆಗಳು ನಡೆಯುತ್ತಿದ್ದರೂ ಸಹ ಜನರ ಈ ಮೋಸದ ಕೂಪಕ್ಕೆ ಬೀಳುತ್ತಿದ್ದಾರೆ. ಕೊನೆಗೆ ಅವರಿಗೆ ಇದು ವಂಚನೆ ಎಂಬ ಅರಿವಾಗುತ್ತದೆ. ಪುರುಷರು ಮಾತ್ರವಲ್ಲದೆ ಇಂತಹ ಮೋಸದ ವಂಚನೆ ಜಾಲದಲ್ಲಿ ಮಹಿಳೆಯರೂ ಕೂಡ ಕೈಚಳ ತೋರಿಸುತ್ತಿದ್ದಾರೆ. ಈಗಾಗಲೇ ಮಹಿಳೆಯರನ್ನು ಒಳಗೊಂಡ ಇಂತಹ ಅನೇಕ ವರದಿಗಳು ಬೆಳಕಿಗೆ ಬಂದಿದೆ.
  Published by:Harshith AS
  First published: