ಇತ್ತೀಚೆಗೆ ಎಲ್ಲಿ ಹೋದರೂ ಸೈಬರ್ ವಂಚನೆಯ (Cyber Crime) ಸುದ್ದಿಯೇ ಕೇಳುತ್ತಿದೆ. ಯಾಕೆ ಹೀಗಾಗುತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ ಕೆಲವೊಂದು ಸ್ಮಾರ್ಟ್ಫೋನ್ ಬಳಕೆದಾರರ (Smartphone Users) ಅತಿಯಾದ ಬಳಕೆಯಿಂದ ಹೀಗಾದರೆ, ಕೆಲವೊಬ್ರು ಅಮಾಯಕರು ಇದಕ್ಕೆ ಗುರಿಯಾಗುತ್ತಿದ್ದಾರೆ. ಸ್ಮಾರ್ಟ್ಫೋನ್ ಬಳಕೆ ಹೆಚ್ಚಾದಂತೆ ಹ್ಯಾಕರ್ಸ್ಗಳ ಸಂಖ್ಯೆಯೂ ಹೆಚ್ಚಾಗಿದೆ. ಹ್ಯಾಕರ್ಸ್ಗಳಂತೂ (Hackers) ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಂಡು ಮೊಬೈಲ್ ಬಳಕೆದಾರರಿಂದ ಹಣವನ್ನು ದೋಚುತ್ತಿದ್ದಾರೆ. ಇತ್ತೀಚೆಗೆ ಕೆಲವೊಂದು ನಗರಗಳಲ್ಲಿ ಓಟಿಪಿ, ಯೂಟ್ಯೂಬ್, ಕರೆ ಮಾಡುವ ಮೂಲಕ ವಂಚನೆ ಮಾಡುವುದನ್ನು ನೋಡಿದ್ದೇವೆ. ಆದರೆ ಈಗ ಮತ್ತೊಂದು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಈ ಮೂಲಕ ಒಬ್ಬ ಮಹಿಳೆಯಿಂದ ಬರೋಬ್ಬರಿ 81 ಸಾವಿರ ಹಣ ದೋಚಿದ್ದಾರೆ.
ಮೊಬೈಲ್ ಬಳಕೆದಾರರೇ ಎಚ್ಚರ. ರೀಚಾರ್ಜ್ ಮಾಡುವ ನೆಪದಲ್ಲಿ ಇದೀಗ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದಾರೆ. ಇಲ್ಲೊಂದು ಮಹಿಳೆ ತನ್ನ ಮನೆಯ ಟಿವಿಯ ರೀಚಾರ್ಜ್ ಖಾಲಿಯಾಗಿದೆಯೆಂದು ರೀಚಾರ್ಜ್ ಮಾಡಲು ಮೂದಾದಾಗ ಬರೋಬ್ಬರಿ 81 ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.
ಮುಂಬೈನ ಮಹಿಳೆ
ಮುಂಬೈನ 47 ವರ್ಷದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಡಿಟಿಹೆಚ್ ರೀಚಾರ್ಜ್ ಮಾಡಲು ಬಯಸಿದ್ದರು. ಟಿವಿ ಆನ್ ಆಗದ ಕಾರಣ, ರೀಚಾರ್ಜ್ ಮಾಡಬೇಕಾಯಿತು. ಹಾಗಾಗಿ ಆಕೆ ಆನ್‌ಲೈನ್‌ನಲ್ಲಿ ಡಿಟಿಹೆಚ್ ರೀಚಾರ್ಜ್ ಮಾಡಲು ಬಯಸಿದ್ದಳು. ಅದೇ ರೀತಿ ರೀಚಾರ್ಜ್ ಮಾಡಿದಳು. ಆದರೆ ಮೊಬೈಲ್ನಲ್ಲಿ ರೀಚಾರ್ಜ್ ಮಾಡಿದ ನಂತರ ರೀಚಾರ್ಜ್ ಆಗಿದೆ ಎಂಬ ಮೆಸೇಜ್ ಬರ್ಲಿಲ್ಲ. ಅಲ್ಲದೆ ಟಿವಿ ಸಹ ಆನ್ ಆಗಿರಲಿಲ್ಲ. ಇದಕ್ಕಾಗಿ ಆಕೆ ಕಸ್ಟಮರ್ ಕೇರ್‌ಗೆ ಕರೆ ಮಾಡಲು ಮುಂದಾದಳು.
ಇದನ್ನೂ ಓದಿ: ಪಿಡಿಎಫ್ ಫೈಲ್ ಪಾಸ್ವರ್ಡ್ ಮರೆತೋಗಿದ್ಯಾ? ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್
ಹ್ಯಾಕ್ ಆಗಲು ಕಾರಣವೇನು?
ಕಸ್ಟಮರ್ ಕೇರ್‌ಗೆ ಕರೆ ಮಾಡಲು ಮುಂದಾದಾಗ, ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿದಳು. ನಂತರ ಗೂಗಲ್‌ನಲ್ಲಿ ಸಿಕ್ಕ ಸಂಖ್ಯೆಗೆ ಕರೆ ಮಾಡಿದಳು. ಆದರೆ ಅದು ಕನೆಕ್ಟ್ ಆಗಲಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಆಕೆಗೆ ಡಿಟಿಹೆಚ್ ಪ್ರತಿನಿಧಿಯಿಂದ ಕಾಲ್ ಬರುತ್ತದೆ. ಆಕೆ ಡಿಟಿಹೆಚ್ ಪ್ರತಿನಿಧಿಯೆಂದು ಆದ ಸಮಸ್ಯೆಗಳನ್ನೆಲ್ಲಾ ಹೇಳುತ್ತಾಳೆ. ಆ ಸಂದರ್ಭದಲ್ಲಿ ಅವನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಆ್ಯಪ್ ಒಂದನ್ನು ಡೌನ್ಲೋಡ್ ಮಾಡುವಂತೆ ಸಲಹೆ ನೀಡುತ್ತಾನೆ. ಅವನು ಹೇಳಿದಂತೆ ಆಕೆಯೂ ಆ ಆ್ಯಪ್ ಡೌನ್ಲೋಡ್ ಮಾಡಿ, ಎಲ್ಲಾ ಡೀಟೇಲ್ಸ್ ಅನ್ನು ಫಿಲ್ ಮಾಡುತ್ತಾಳೆ.
ಇದಾದ ನಂತರ ಅವಳ ಸ್ಮಾರ್ಟ್ಫೋನ್ ಹ್ಯಾಕ್ ಆಗುತ್ತದೆ. ಜೊತೆಗೆ ಎಲ್ಲಾ ಡೇಟಾವು ಅವನ ಕೈಸೇರುತ್ತದೆ. ಅಷ್ಟೇ ಅಲ್ಲದೇ ಆಕೆಯ ಬ್ಯಾಂಕ್ ಖಾತೆಯಿಂದ 81 ಸಾವಿರ ರೂಪಾಯಿ ಹಣವನ್ನೂ ದೋಚಿದ್ದಾನೆ. ಇದರಿಂದ ತಕ್ಷಣ ಎಚ್ಚೆತ್ತ ಮಹಿಳೆ ಆಗಲೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.
ಎಚ್ಚರಿಕೆ
ಯಾವುದೇ ಅಪರಿಚಿತರಿಂದ ಕಾಲ್ ಬಂದಾಗ ಅಥವಾ ಮೆಸೇಜ್ ಬಂದಾಗ ಸರಿಯಾಗಿ ನೋಡಿಕೊಂಡು ಕ್ಲಿಕ್ ಮಾಡಬೇಕು. ಆತುರದಲ್ಲಿ ಒಂದು ವೇಳೆ ಅದರಲ್ಲಿದ್ದ ಲಿಂಕ್ ಓಪನ್ ಮಾಡಿದ್ರೆ ನಿಮ್ಮ ಮೊಬೈಲ್ ಹ್ಯಾಕ್ ಆಗೋದು ಗ್ಯಾರಂಟಿ. ಜೊತೆಗೆ ಬ್ಯಾಂಕ್ ಖಾತೆ ಹಣವೂ ಖಾಲಿ ನಾಡಿಬಿಡುತ್ತಾರೆ. ಇದಕ್ಕಾಗಿ ಯಾರೇ ಅಪರಿಚಿತರು ಕರೆ ಅಥವಾ ಮೆಸೇಜ್ ಮಾಡಿ ಓಟಿಪಿ, ಇನ್ಯಾವುದೇ ಮಾಹಿತಿ ಕೇಳಿದ್ರೆ ತಕ್ಷಣ ನೀಡಲು ಹೋಗ್ಬೇಡಿ. ಯಾವುದೇ ರೀತಿಯ ಇಂತ ಸಂದರ್ಭಗಳು ಎದುರಾದ್ರೆ ಸಂಬಂಧಪಟ್ಟ ಕಂಪೆನಿಗಳಿಗೆ, ಬ್ಯಾಂಕ್ಗಳಿಗೆ ಹೋಗಿ ಕೇಳುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ