ಇತ್ತೀಚೆಗೆ ಎಲ್ಲಿ ಹೋದರೂ ವಂಚಕರದ್ದೇ ಸುದ್ದಿ ಹರಿದಾಡುತ್ತಿದೆ. ಟೆಕ್ನಾಲಜಿ (Technology) ಪ್ರಗತಿ ಕಂಡಂತೆ ವಂಚಕರ ಸಂಖ್ಯೆ ಕೂ ಹೆಚ್ಚಾಗುತ್ತಿದೆ. ಹಿಂದೆಲ್ಲಾ ಈ ವಂಚಕರು ದಾರಿ ಬದಿಗಳಲ್ಲೋ, ಮನೆಗೆ ನುಗ್ಗಿಯೋ ಕಳ್ಳತನ ಮಾಡುತ್ತಿದ್ದರು. ಆದರೆ ಈ ಕಾಲ ಬದಲಾಗಿದೆ. ಕಣ್ಣಮುಚ್ಚಿ ತೆರೆಯೋದ್ರ ಒಳಗೆ ಬ್ಯಾಂಕ್ ಹಣವನ್ನು (Bank Money) ದೋಚಿ ಬಿಡುತ್ತಾರೆ. ಕೆಲ ಅಮಾಯಕರನ್ನು ಬ್ಯಾಂಕ್ಗೆ ಸಂಬಂಧಿಸಿ ಕಾಲ್ ಮಾಡುವ ಮೂಲಕ ವಂಚನೆ ಮಾಡಿದರೆ, ಇನ್ನೂ ಕೆಲವರು ಕೇವಲ ಓಟಿಪಿ (OTP Scam) ಮೂಲಕ ವಂಚನೆ ಎಸಗಲು ಆರಂಭಿಸಿದ್ದಾರೆ. ಓಟಿಪಿ ಸ್ಕ್ಯಾಮ್ಗಳು ಇತ್ತೀಚೆಗೆ ಭಾರೀ ಸದ್ದಿನಲ್ಲಿದೆ. ಕೇವಲ ಒಂದು ಓಟಿಪಿ ಮೂಲಕ ಜನರ ಬ್ಯಾಂಕ್ ಖಾತೆಗೆ ಪ್ರವೇಶವನ್ನು ಪಡೆದು, ಅದರಲ್ಲಿದ್ದ ಹಣವನ್ನೆಲ್ಲಾ ಖಾಲಿ ಮಾಡುತ್ತಾರೆ.
ಇದೀಗ ಸೈಬರ್ ಕ್ರೈಮ್ ವಂಚನೆ ಗುರುಗ್ರಾಮದಲ್ಲಿ ನಡೆದಿದ್ದು, ಮಹಿಳೆಯೊಬ್ಬರು ಓಟಿಪಿ ಶೇರ್ ಮಾಡುವ ಮೂಲಕ ಬರೋಬ್ಬರಿ 1 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಅಷ್ಟಕ್ಕೂ 1 ಲಕ್ಷ ಹೇಗೆ ಕಳೆದುಕೊಂಡರು ಎಂದು ತಿಳಿಬೇಕಾದರೆ ಈ ಲೇಖನವನ್ನು ಓದಿ.
ಅಷ್ಟಕ್ಕೂ ಏನಾಯ್ತು?
ಪಿಟಿಐ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಗುರುಗ್ರಾಮದಲ್ಲಿ ಮಾಧ್ವಿ ದತ್ತಾ ಎಂಬ ಮಹಿಳೆಯೊಬ್ಬರು ವಾಸ ಮಾಡುತ್ತಿದ್ದರು. ಇವರಿಗೆ ಜನವರಿ 21 ರಮದು ತನ್ನ ಮೊಬೈಲ್ನ ಇನ್ಬಾಕ್ಸ್ಗೆ ಬ್ಯಾಂಕ್ಗೆ ಸಂಬಂಧಪಟ್ಟ ಒಂದು ಎಸ್ಎಮ್ಎಸ್ ಬರುತ್ತದೆ. ಆ ಎಸ್ಎಮ್ಎಸ್ನಲ್ಲಿ ‘ನಿಮ್ಮ ಹೆಚ್ಡಿಎಫ್ಸಿ ಬ್ಯಾಂಕ್ ಅಕೌಂಟ್ನ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತದೆ, ತಕ್ಷಣವೇ ಈ ಕ್ಲಿಕ್ ಮಾಡಿ ಮತ್ತು ನಿಮ್ಮ ಫೋನ್ ನಂಬರ್, ಪಾನ್ ಕಾರ್ಡ್ ನಂಬರ್ಗೆ ಲಿಂಕ್ ಮಾಡಿ‘ ಎಂದು ಬರೆದಿರುತ್ತದೆ.
ಆದರೆ ಇದು ಅಧಿಕೃತ ಬ್ಯಾಂಕ್ನಿಂದ ಮೆಸೇಜ್ ಆಗಿರುವುದಿಲ್ಲ. ಆದರೆ ಬ್ಯಾಂಕ್ನಿಂದಲೇ ಬಂದ ಮೆಸೇಜ್ ಎಮದು ನಂಬಿದ ಮಹಿಳೆ ಆ ಲಿಂಕ್ಗೆ ಕ್ಲಿಕ್ ಮಾಡುತ್ತಾರೆ. ಆಗ ಒಂದು ವೆಬ್ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನೀಡಿದ ಮಾಹಿತಿಗಳಿಗೆ ತಕ್ಕಂತೆ ವಿವರಗಳನ್ನು ಭರ್ತಿ ಮಾಡುತ್ತಾರೆ. ನಂತರ ಓಟಿಪಿ ನಮೂದಿಸಲು ಕೇಳುತ್ತಾರೆ. ಓಟಿಪಿ ನಮೂದಿಸಿದ ತಕ್ಷಣವೇ ಮಾಧ್ವಿ ದತ್ತಾ ಅವರ ಬ್ಯಾಂಕ್ ಖಾತೆಯಿಂದ 1 ಲಕ್ಷ ಹಣ ಖಾಲಿಯಾಗುತ್ತದೆ.
ಈ ಬಗ್ಗೆ ಮಹಿಳೆಯ ಪ್ರತಿಕ್ರಿಯೆ
ಈ ಸೈಬರ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, ‘ನಾನು ಓಟಿಪಿ ಹಾಕಿದ ತಕ್ಷಣ 1 ಲಕ್ಷ ರೂಪಾಯಿ ನನ್ನ ಖಾತೆಯಿಂದ ಕಳೆದುಕೊಂಡಿದ್ದೇನೆ. ಕೂಡಲೇ ಸೈಬಲ್ ಸಹಾಯವಾಣಿ 1930 ಗೆ ಕರೆ ಮಾಡಿದೆ. ಆದರೆ, ಅವರಿಂದ ನನಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ತಕ್ಷಣವೇ ಸೈಬಲ್ ಠಾಣೆಗೆ ತೆರಳಿ ದೂರು ನೀಡಿದೆ,” ಎಂದು ಹೇಳಿದ್ದಾರೆ.
6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು
ಭಾರತದಲ್ಲಿ ಆಗಸ್ಟ್ 2019 ರಿಂದ ಡಿಸೆಂಬರ್ 12, 2022 ರವರೆಗೆ ಸೈಬರ್ ವಂಚನೆಯ ದೂರುಗಳು 6 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಠಾಣೆಗಳಲ್ಲಿ ದಾಖಲಾಗಿವೆ ಎಂದು ವರದಿಯಾಗಿದೆ. ಇನ್ನು ಇದರಲ್ಲಿ 1 ಲಕ್ಷದ 11 ಸಾವಿರ ದೂರುಗಳಲ್ಲಿ 188 ಸಾವಿರ ಕೋಟಿ ರೂಪಾಯಿ ಹಣವನ್ನು ವಂಚಕರಿಂದ ಮರುಪಡೆದುಕೊಂಡು ಉಳಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಐಫೋನ್ ಬಳಕೆದಾರರಿಗೆ ಅಚ್ಚರಿಯ ಫೀಚರ್ ಬಿಡುಗಡೆ ಮಾಡಿದ ವಾಟ್ಸಾಪ್! ಹೇಗಿದೆ ಗೊತ್ತಾ?
1930 ಕ್ಕೆ ಕರೆ ಮಾಡಿ
ಈ ಸೈಬರ್ ವಂಚನೆಗೆ ಒಳಗಾಗಿ ಯಾರಾದರೂ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ನಂಬರ್ ಆದ 1930 ಕ್ಕೆ ಕರೆ ಮಾಡಬೇಕು. ಇಲ್ಲಿ ಸೈಬರ್ ಕ್ರೈಂ ಪೊಲೀಸ್ ವಿಭಾಗದ ಸಿಬ್ಬಂದಿ ಪ್ರಕರಣವನ್ನು ದಾಖಲಿಸಿಕೊಂಡು, ನಿಮ್ಮ ವಿವರಗಳನ್ನು ಪರಿಶೀಲಿಸಿ ಹ್ಯಾಕ್ ಆದ ಖಾತೆಯನ್ನು ತಕ್ಷಣ ಬ್ಲಾಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಯಾರಿಗೂ ನಿಮ್ಮ ಬ್ಯಾಂಕ್ ಅಕೌಂಟ್ನಿಂದ ಹಣವನ್ನು ತೆಗೆಯಲು ಸಾಧ್ಯವಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ