ಸ್ಮಾರ್ಟ್ ವಾಚ್​ನಿಂದ ಬಯಲಾಯಿತು ಪ್ರಿಯಕರನ ಕಳ್ಳ ಸಂಬಂಧ; ಹೇಗೆ?, ಈ ಸ್ಟೋರಿ ಓದಿ

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಜೇನ್ ಸ್ಲಾಟರ್ ಬಾಯ್​ಫ್ರೆಂಡ್ ಫಿಟ್​ಬಿಟ್ ಸ್ಮಾರ್ಟ್ ವಾಚ್ ಗಿಫ್ಟ್ ಮಾಡಿದ್ದ. ಪ್ರಿಯಕರನ ಗಿಫ್ಟ್​ನಿಂದ ಸಹಜವಾಗಿಯೇ ಥ್ರಿಲ್​ ಆಗಿದ್ದ ಜೇನ್, ಅಪ್ಲಿಕೇಶನ್ ಒಂದನ್ನು ವಾಚ್​ಗೆ ಅಳವಡಿಸಿದ್ದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತಂತ್ರಜ್ಞಾನ ಯುಗದಲ್ಲಿ ವ್ಯಕ್ತಿಯನ್ನು ಮೋಸ ಮಾಡಬಹುದು. ಆದರೆ, ಮನುಷ್ಯನೇ ರಚಿಸಿದ ಇಲೆಕ್ಟ್ರಾನಿಕ್ ವಸ್ತುಗಳು ಮಾತ್ರ ನಿಷ್ಠೆಯಿಂದ ಕೆಲಸ ಮಾಡುತ್ತವೆ ಮತ್ತು ಅವುಗಳನ್ನು ಚೀಟ್ ಮಾಡೋದು ಅಸಾಧ್ಯ. ಇದಕ್ಕೆ ಉತ್ತಮ ಉದಾಹರಣೆಯೊಂದು ಇಲ್ಲಿದೆ.

  ವಿಚ್ಛೇದನ ನೀಡಿ ಗಂಡನ ಮಗನನ್ನೇ ಮದುವೆಯಾದ ತಾಯಿ!

  ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಜೇನ್ ಸ್ಲಾಟರ್ ಬಾಯ್​ಫ್ರೆಂಡ್ ಫಿಟ್​ಬಿಟ್ ಸ್ಮಾರ್ಟ್ ವಾಚ್ ಗಿಫ್ಟ್ ಮಾಡಿದ್ದ. ಪ್ರಿಯಕರನ ಗಿಫ್ಟ್​ನಿಂದ ಸಹಜವಾಗಿಯೇ ಥ್ರಿಲ್​ ಆಗಿದ್ದ ಜೇನ್, ಅಪ್ಲಿಕೇಶನ್ ಒಂದನ್ನು ವಾಚ್​ಗೆ ಅಳವಡಿಸಿದ್ದಳು. ಬಾಯ್​ಫ್ರೆಂಡ್ ವಾಚ್ ಸಹ ಈ ಅಪ್ಲಿಕೇಷನ್​ಗೆ ಸಿಂಕ್ ಮಾಡಲಾಗಿತ್ತು.

  ಪರಿಣಾಮ ಇವರಿಬ್ಬರ ಎದೆಬಡಿತ, ದೈಹಿಕ ಕಸರತ್ತು ಒಬ್ಬರಿಗೊಬ್ಬರು ಮಾನಿಟರ್ ಮಾಡುಬಹುದಿತ್ತು. ಇಲ್ಲೇ ಆಗಿದ್ದು ಎಡವಟ್ಟು. ಅಸಲಿಗೆ ಜೇನ್ ಬಾಯ್​ಫ್ರೆಂಡ್ ಕಳ್ಳ ಸಂಬಂಧ ಹೊಂದಿದ್ದ.

  ವಿಶ್ವದ ಅತಿ ಹೆಚ್ಚು ಎತ್ತರದ ಮಾಡೆಲ್​ ಈಕೆ; ಹೈಟ್​ ಎಷ್ಟು ಗೊತ್ತಾ?

  ಒಂದು ರಾತ್ರಿ ಜೇನ್, ತನ್ನ ಪ್ರಿಯಕರನ ಹುಟ್ಟುಹಬ್ಬ ಆಚರಿಸಲು ಆತನ ಮನೆಗೆ ತೆರಳಿ ಸರ್​ಪ್ರೈಸ್ ಆಗಿ ಅದ್ಧೂರಿ ತಯಾರಿ ಮಾಡಿದ್ದಳು. ಮಧ್ಯರಾತ್ರಿ ಕಳೆದರೂ ಬಾಯ್​ಫ್ರೆಂಡ್ ಬರಲೇ ಇಲ್ಲ. ಭಯದಲ್ಲಿ ಜೇನ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದಳು. ನಸುಕಿನ ಜಾವ ನಾಲ್ಕರ ವೇಳೆಗೆ ಬಾಯ್​ಫ್ರೆಂಡ್ ಎದೆ ಬಡಿತ ಜೋರಾಗಿತ್ತು. ತನ್ನ ಪ್ರಿಯಕರ ಬೇರೊಂದು ಹುಡುಗಿಯೊಂದಿಗೆ ಲೈಂಗಿಕ ಸಂಪರ್ಕದಲ್ಲಿದ್ದಾನೆ ಎಂದು ಗೊತ್ತಾಗಲು ಹೆಚ್ಚು ಸಮಯ ತಗುಲಲಿಲ್ಲ.

  ಸೋಷಿಯಲ್ ಮೀಡಿಯಾ ಇದೇ ವಿಚಾರ ಹಂಚಿಕೊಂಡಿರುವ ಜೇನ್, ನನ್ನ ಬಾಯ್​​ಫ್ರೆಂಡ್ ನಸುಕಿನ ನಾಲ್ಕು ಗಂಟೆಗೆ ಯಾವ ಜಿಮ್​ಗೂ ತೆರಳುವುದಿಲ್ಲ ಎಂದು ಹಾಸ್ಯವಾಗಿ ಬರೆದಿದ್ದಾಳೆ. ವಾಚ್ ಕೈನಿಂದ ತೆಗೆಯದ ಪರಿಣಾಮ ಬಾಯ್​ಫ್ರೆಂಡ್ ಅಸಲಿ ಮುಖ ಅನಾವರಣವಾಗಿದೆ.
  Published by:Vinay Bhat
  First published: