• Home
  • »
  • News
  • »
  • tech
  • »
  • Tata Group: ಐಫೋನ್ ತಯಾರಕ ವಿಸ್ಟ್ರಾನ್‌ನ ಭಾರತೀಯ ಘಟಕ ಖರೀದಿಗೆ ಟಾಟಾ ಮಾತುಕತೆ!

Tata Group: ಐಫೋನ್ ತಯಾರಕ ವಿಸ್ಟ್ರಾನ್‌ನ ಭಾರತೀಯ ಘಟಕ ಖರೀದಿಗೆ ಟಾಟಾ ಮಾತುಕತೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಭಾರತದಲ್ಲಿ ಐಫೋನ್‌ಗಳ ನಿರ್ಮಿಸುವ ಮೊದಲ ಭಾರತೀಯ ಕಂಪನಿಯಾಗಿ ಟಾಟಾ ಗುರುತಿಸಿಕೊಳ್ಳಲಿದೆ. ಪ್ರಸ್ತುತ ವಿಸ್ಟ್ರಾನ್ ಮತ್ತು ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನಂತಹ ತೈವಾನ್‌ನ ಉತ್ಪಾದನಾ ದೈತ್ಯ ಸಂಸ್ಥೆಗಳು ಭಾರತ ಹಾಗೂ ಚೀನಾದಲ್ಲಿ ಐಫೋನ್ ನಿರ್ಮಾಣಗಳ ಹೊಣೆ ಹೊತ್ತುಕೊಂಡಿವೆ.

  • News18 Kannada
  • Last Updated :
  • New Delhi, India
  • Share this:

ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಂಟಿ ವ್ಯವಹಾರವನ್ನು ಸ್ಥಾಪಿಸಲು ಟಾಟಾ ಗ್ರೂಪ್ ಆ್ಯಪಲ್ ಇಂಕ್‌ನ ಅಗ್ರ ಮಾರಾಟಗಾರ  ತೈಪೆಯ ವಿಸ್ಟ್ರಾನ್‌ ಕಾರ್ಪೊರೇಟ್ (Corporate) ನೊಂದಿಗೆ ಮಾತುಕತೆ ನಡೆಸುತ್ತಿದ್ದು ಸಂಸ್ಥೆಯ ತಯಾರಕಾ ಘಟಕವನ್ನು ಕರ್ನಾಟಕದಲ್ಲಿ ರೂ 5,000 ಕೋಟಿಗೆ ($612.6 ಮಿಲಿಯನ್) ಖರೀದಿಸಲು ಚರ್ಚೆ ನಡೆಸುತ್ತಿದೆ ಎಂದು ವರದಿಯಾಗಿದೆ. ದಕ್ಷಿಣ ಏಷ್ಯಾ ದೇಶದಲ್ಲಿ ಐಫೋನ್‌ಗಳ (IPhone) ತಯಾರಿಕೆಯ ಬೃಹತ್ ಉದ್ಯಮವನ್ನು (Big Industry) ಸ್ಥಾಪಿಸುವ ಇರಾದೆಯಲ್ಲಿ ಟಾಟಾ ವಿಸ್ಟ್ರಾನ್‌ ಘಟಕದೊಂದಿಗೆ ಕೈಜೋಡಿಸುವ ಇಚ್ಛೆ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.


ಐಫೋನ್ ನಿರ್ಮಿಸುವ ಮೊದಲ ಭಾರತೀಯ ಕಂಪನಿ
ಈ ಒಪ್ಪಂದವು ಎಲ್ಲಿಯಾದರೂ ಯಶಸ್ವಿಯಾದಲ್ಲಿ ಭಾರತದಲ್ಲಿ ಐಫೋನ್‌ಗಳ ನಿರ್ಮಿಸುವ ಮೊದಲ ಭಾರತೀಯ ಕಂಪನಿಯಾಗಿ ಟಾಟಾ ಗುರುತಿಸಿಕೊಳ್ಳಲಿದೆ. ಪ್ರಸ್ತುತ ವಿಸ್ಟ್ರಾನ್ ಮತ್ತು ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನಂತಹ ತೈವಾನ್‌ನ ಉತ್ಪಾದನಾ ದೈತ್ಯ ಸಂಸ್ಥೆಗಳು ಭಾರತ ಹಾಗೂ ಚೀನಾದಲ್ಲಿ ಐಫೋನ್ ನಿರ್ಮಾಣಗಳ ಹೊಣೆ ಹೊತ್ತುಕೊಂಡಿವೆ.


ಚೀನಾಗೆ ಭರ್ಜರಿ ಪೈಪೋಟಿ ನೀಡಲಿರುವ ಭಾರತ
ಕೋವಿಡ್ ಲಾಕ್‌ಡೌನ್ ಹಾಗೂ ಯುಎಸ್‌ನೊಂದಿಗೆ ರಾಜಕೀಯ ಸಮಸ್ಯೆಗಳಿಂದಾಗಿ ಪ್ರಸ್ತುತ ಸವಾಲುಗಳನ್ನು ಎದುರಿಸುತ್ತಿರುವ ಚೀನಾಗೆ ಭಾರತ ಈ ದಿಸೆಯಲ್ಲಿ ಭರ್ಜರಿ ಪೈಪೋಟಿ ನೀಡಲಿದೆ ಎಂದು ಸುದ್ದಿಮೂಲಗಳು ತಿಳಿಸಿವೆ. ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಪ್ರಾಬಲ್ಯ ಹೊಂದಿರುವ ಚೀನಾಕ್ಕೆ ಸವಾಲು ಹಾಕುವ ಪ್ರಕ್ರಿಯೆಗೆ ಭಾರತವು ಐಫೋನ್‌ಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡರೆ ಇದಕ್ಕಿಂತ ಇನ್ನೊಂದು ಉತ್ತೇಜನಕಾರಿಯಾದ ಅಂಶ ಇನ್ನೊಂದಿರಲಿಕ್ಕಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.


ಇದನ್ನೂ ಓದಿ: ಬಿಡುಗಡೆಗೆ ಸಿದ್ಧವಾಗಿದೆ 1ಪ್ಲಸ್​ನ ಹೊಸ ವರ್ಷನ್​! ಏನೆಲ್ಲಾ ಫೀಚರ್ಸ್​ ಇದೆ ನೋಡಿ


ಇತರ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳ ಮನವೊಲಿಸುವುದು
ಏರಿಕೆಯಾಗುತ್ತಿರುವ ರಾಜಕೀಯ ಭಿನ್ನಾಭಿಪ್ರಾಯಗಳು ಹಾಗೂ ಕಲಹಗಳ ನಡುವೆಯೇ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಭಾರತದಲ್ಲಿ ಐಫೋನ್ ತಯಾರಿಕೆಯನ್ನು ಪರಿಗಣಿಸುವುದಕ್ಕಾಗಿ ಇತರ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳ ಮನವೊಲಿಸಲು ಇದೊಂದು ಸುವರ್ಣವಕಾಶವಾಗಿದೆ ಎಂದು ಭಾರತದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


ಭಾರತದ ಅಗ್ರ ಸಂಸ್ಥೆ ಟಾಟಾ ಗ್ರೂಪ್
ಟಾಟಾ ಗ್ರೂಪ್ 128 ಶತಕೋಟಿ ಆದಾಯದೊಂದಿಗೆ ಭಾರತದ ಅಗ್ರ ಸಮೂಹವಾಗಿ ಹೆಸರುವಾಸಿಯಾಗಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ಉತ್ಪಾದನೆಯು ಕಂಪನಿಯ ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳಾಗಿವೆ ಎಂದು ಗ್ರೂಪ್ ಅಧ್ಯಕ್ಷರಾದ ನಟರಾಜನ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಟಾಟಾ ಗ್ರೂಪ್ ಎಲೆಕ್ಟ್ರಾನಿಕ್ಸ್ ಅಲ್ಲದೆಯೇ ಸಾಫ್ಟ್‌ವೇರ್, ಸ್ಟೀಲ್ ಹಾಗೂ ಕಾರುಗಳ ಉದ್ಯಮ ಕ್ಷೇತ್ರಗಳಲ್ಲಿಯೂ ಹೆಚ್ಚಿನ ವ್ಯವಹಾರವನ್ನು ಹೊಂದಿದ್ದು, ದಕ್ಷಿಣ ಭಾರತದಲ್ಲಿ ಐಫೋನ್ ನಿರ್ಮಾಣ ಘಟಕಗಳನ್ನು ತಯಾರಿಯನ್ನು ಆರಂಭಿಸುವ ಮೂಲಕ ಸ್ಮಾರ್ಟ್‌ಫೋನ್ ಪೂರೈಕೆ ಸರಪಳಿಯಲ್ಲಿ ಆರಂಭಿಕ ಹಂತಗಳನ್ನು ತೆಗೆದುಕೊಂಡಿದೆ.


ಅಸಾಧಾರಣ ಸಾಮರ್ಥ್ಯವುಳ್ಳ ಉದ್ಯಮಿ ಟಾಟಾ
ವಿಸ್ಟ್ರಾನ್‌ನ ಭಾರತೀಯ ಉದ್ಯಮ ರಂಗವು ಸತತ ನಷ್ಟದೊಂದಿಗೆ ಹೋರಾಡುತ್ತಿರುವ ಈ ಸಮಯದಲ್ಲಿ ಟಾಟಾ ಜೊತೆಗಿನ ಕಂಪನಿಯ ಒಪ್ಪಂದವು ಉತ್ತಮ ಹೂಡಿಕೆಯ ಅಸಾಧಾರಣ ಸಾಮರ್ಥ್ಯವುಳ್ಳ ಸ್ಥಳೀಯ ಪಾಲುದಾರನನ್ನು ಒದಗಿಸಬಹುದು ಎಂದು ಮಾರುಕಟ್ಟೆ ಪರಿಣಿತರು ಭವಿಷ್ಯ ನುಡಿದಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಆಟೋಮೊಬೈಲ್‌ ಕ್ಷೇತ್ರವನ್ನು ಆವರಿಸಿರುವ ಟಾಟಾದ ಖ್ಯಾತಿಯು ವಿಶ್ವದ ಅನೇಕ ಟೆಕ್ ದೈತ್ಯರನ್ನು ಆಕರ್ಷಿಸಿದೆ ಹಾಗೂ ಟಾಟಾ ಸಮೂಹದೊಂದಿಗೆ ತಮ್ಮ ಉದ್ಯಮವನ್ನು ವಿಸ್ತರಿಸಲು ಉತ್ಸುಕರಾಗಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.


ಸರಕಾರದ ಮಹತ್ವದ ಯೋಜನೆ
ವಿಸ್ಟ್ರಾನ್ ಇನ್ಫೋಕಾಮ್ ರೂ 1,250 ಕೋಟಿಗಳ ಲಾಭವನ್ನುಂಟು ಮಾಡುವ ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಸರಕಾರದ ಉತ್ಪಾದನಾ-ಸಂಯೋಜಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಡಿಯಲ್ಲಿ ಏಕೈಕ ಅತಿದೊಡ್ಡ ಹೂಡಿಕೆದಾರನಾಗಿ ಹೊರಹೊಮ್ಮಿದೆ. ಸ್ಯಾಮ್‌ಸಂಗ್ ಮತ್ತು ಫಾಕ್ಸ್‌ಕಾನ್‌ನ ಸ್ಥಳೀಯ ಘಟಕಗಳು ರೂ 900 ಕೋಟಿ ಮತ್ತು ರೂ 600 ಕೋಟಿ ಹೂಡಿಕೆ ಮಾಡುತ್ತಿವೆ. ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರವು ಮಾರ್ಚ್ 2020 ರಲ್ಲಿ ಯೋಜನೆಯನ್ನು ಪ್ರಾರಂಭಿಸಿತು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು