Wireless Smartwatch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ವೈರ್​ಲೆಸ್​ ಸ್ಮಾರ್ಟ್​ವಾಚ್​! ಫೀಚರ್ಸ್​ ಹೇಗಿದೆ ಗೊತ್ತಾ?

ಗಾರ್ಮಿನ್​ ವಿವೋಮೂವ್ ಟ್ರೆಂಡ್​ ಸ್ಮಾರ್ಟ್​ವಾಚ್

ಗಾರ್ಮಿನ್​ ವಿವೋಮೂವ್ ಟ್ರೆಂಡ್​ ಸ್ಮಾರ್ಟ್​ವಾಚ್

ಗಾರ್ಮಿನ್​ ಕಂಪೆನಿಯಿಂದ ಬಿಡುಗಡೆಯಾಗುತ್ತಿರುವ ಸ್ಮಾರ್ಟ್​​ವಾಚ್​ ಗಾರ್ಮಿನ್​ ವಿವೋಮೂವ್​ ಟ್ರೆಂಡ್​ ಸ್ಮಾರ್ಟ್​ವಾಚ್​ ಎಂದು ಹೆಸರಿಸಲಾಗಿದೆ. ಇದು ಗುಣಮಟ್ಟದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಒಳಗೊಂಡಿದೆ. ಹಾಗಿದ್ರೆ ಈ ಸ್ಮಾರ್ಟ್​ವಾಚ್​ನ ಸ್ಪೆಷಲ್​ ಫೀಚರ್ಸ್​ ಏನೆಂಬುದನ್ನು ಈ ಲೇಖನದಲ್ಲಿ ಓದಿ.

ಮುಂದೆ ಓದಿ ...
  • Share this:

    ಟೆಕ್​ ಮಾರುಕಟ್ಟೆಯಲ್ಲಿ (Tech Market) ಭಾರೀ ಮುಂಚೂಣಿಯಲ್ಲಿರುವ ಸಾಧನವೆಂದರೆ ಸ್ಮಾರ್ಟ್​​​ವಾಚ್​ಗಳು. ಈ ಸಾಧನಗಳು ಇತ್ತೀಚಿನ ಕೆಲವರ್ಷಗಳ ಹಿಂದೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಅಗಾಧ ಗ್ರಾಹಕರನ್ನು ಹೊಂದಿದೆ. ಸ್ಮಾರ್ಟ್​​ವಾಚ್​ಗಳು (Smartwatches) ತನ್ನ ಕಲರ್​ಫುಲ್​ ವಿನ್ಯಾಸದ ಮೂಲಕ, ವಿಭಿನ್ನ ಫೀಚರ್ಸ್​ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತದೆ. ಅದರಲ್ಲೂ ಮಾರುಕಟ್ಟೆಯಲ್ಲಿ ಈಗಿರುವಂತಹ ವಾಚ್​ಗಳು ಸ್ಮಾರ್ಟ್​ಫೋನ್​ಗಳಂತೆಯೇ ಫೀಚರ್ಸ್​ಗಳನ್ನು ಒಳಗೊಂಡಿದೆ. ಹೆಚ್ಚಿನ ವಾಚ್​ಗಳು ಬಳಕೆದಾರರ ಆರೋಗ್ಯಕ್ಕೆ ಹೆಚ್ಚು ಗಮನ ಹರಿಸುತ್ತದೆ. ಇದರಿಂದ ಎಷ್ಟೋ ಜನರ ಆರೋಗ್ಯದ ಮೇಲೆ ನಿಗಾವಹಿಸಲು ಸಹಕಾರಿಯಾಗಿದೆ. ಇದೀಗ ಮಾರುಕಟ್ಟೆಗೆ ಜನಪ್ರಿಯ ಸ್ಮಾರ್ಟ್​​ವಾಚ್​ ಕಂಪೆನಿಯಾಗಿರುವ ಗಾರ್ಮಿನ್​ ಬ್ರಾಂಡ್​ನಿಂದ (Garmin Brand) ಹೊಸ ಸ್ಮಾರ್ಟ್​​ವಾಚ್ ಬಿಡುಗಡೆಯಾಗುತ್ತಿದ್ದು, ಬಹಳಷ್ಟು ಫಿಚರ್ಸ್​ಗಳನ್ನು ಇದು ಹೊಂದಿದೆ.


    ಗಾರ್ಮಿನ್​ ಕಂಪೆನಿಯಿಂದ ಬಿಡುಗಡೆಯಾಗುತ್ತಿರುವ ಸ್ಮಾರ್ಟ್​​ವಾಚ್​ ಗಾರ್ಮಿನ್​ ವಿವೋಮೂವ್​ ಟ್ರೆಂಡ್​ ಸ್ಮಾರ್ಟ್​ವಾಚ್​ ಎಂದು ಹೆಸರಿಸಲಾಗಿದೆ. ಇದು ಗುಣಮಟ್ಟದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಒಳಗೊಂಡಿದೆ. ಹಾಗಿದ್ರೆ ಈ ಸ್ಮಾರ್ಟ್​ವಾಚ್​ನ ಸ್ಪೆಷಲ್​ ಫೀಚರ್ಸ್​ ಏನೆಂಬುದನ್ನು ಈ ಲೇಖನದಲ್ಲಿ ಓದಿ.


    ಗಾರ್ಮಿನ್​ ವಿವೋಮೂವ್​ ಟ್ರೆಂಡ್​ ಸ್ಮಾರ್ಟ್​​ವಾಚ್​


    ಗಾರ್ಮಿನ್​ ವಿವೋಮೂವ್​ ಟ್ರೆಂಡ್​ ಸ್ಮಾರ್ಟ್​​ವಾಚ್ 254 x 346 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಬೆಂಬಲಿಸುವ ಫುಲ್‌ ಡಯಲ್‌ ಹಿಡನ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ ಆಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಸ್ಟೇನ್‌ಲೆಸ್-ಸ್ಟೀಲ್ ಎಡ್ಜ್‌,  ಕ ಸಿಲಿಕೋನ್ ಮಾದರಿಯ ಬ್ಯಾಂಡ್​ನೊಂದಿಗೆ ವಿನ್ಯಾಸವನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿ ಸ್ಮಾರ್ಟ್‌ ನೋಟಿಫಿಕೇಶನ್‌ಗಳನ್ನು ಕೂಡ ಕಾಣಬಹುದಾಗಿದೆ. ಅಲ್ಲದೆ ಟೆಕ್ಸ್ಟ್‌ ಮೆಸೇಜ್‌ಗಳನ್ನು ಕೂಡ ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡಲಿದೆ ಎಂದು ಕಂಪೆನಿ ಹೇಳಿದೆ.




    ಸೆನ್ಸಾರ್​ ಸಾಮರ್ಥ್ಯ ಹೇಗಿದೆ?


    ಇನ್ನು ಗಾರ್ಮಿನ್ ಕಂಪೆನಿಯ ಈ ಸ್ಮಾರ್ಟ್‌ವಾಚ್‌ ಹೆಸರಿಗೆ ತಕ್ಕಂತೆ ಸಾಕಷ್ಟು ಟ್ರೆಂಡ್​ ಆಗಿದ್ದು, ಸ್ಮಾರ್ಟ್‌ ಹೆಲ್ತ್‌ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಹಾರ್ಟ್‌ ಬೀಟ್‌ ಸೆನ್ಸಾರ್‌, ಸ್ಲಿಪ್‌ ಮಾನಿಟರ್‌, ಪಲ್ಸ್‌ ಆಕ್ಸಿಲೋಮೀಟರ್‌, ಸ್ಟ್ರೇಸ್‌ ಟ್ರ್ಯಾಕರ್‌ ಮತ್ತು ಮಹಿಳೆಯರ ಆರೋಗ್ಯ ಸಂಬಂಧಿತ ಫೀಚರ್ಸ್‌ಗಳನ್ನು ಪಡೆದಿದೆ. ಇದಲ್ಲದೆ ಬ್ಯಾರೊಮೆಟ್ರಿಕ್‌ ಆಲ್ಟಿಮೀಟರ್‌, ಅಕ್ಸಿಲೆರೊಮೀಟರ್‌ ಮತ್ತು ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನ ರಕ್ಷಣೆಗಾಗಿ  5 ಎಟಿಎಂ ರೇಟಿಂಗ್ ಅನ್ನು ಸಹ ಹೊಂದಿದೆ.


    ಬ್ಯಾಟರಿ ಫೀಚರ್ಸ್


    ಗಾರ್ಮಿನ್​ ವಿವೋಮೂವ್​ ಟ್ರೆಂಡ್​ ಸ್ಮಾರ್ಟ್​​ವಾಚ್​ ಅನ್ನು ಒಮ್ಮೆ ಫುಲ್​ ಚಾರ್ಜ್ ಮಾಡಿದ್ರೆ 5 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ.


    ಗಾರ್ಮಿನ್​ ವಿವೋಮೂವ್ ಟ್ರೆಂಡ್​ ಸ್ಮಾರ್ಟ್​ವಾಚ್


    ಇತರೆ ಫೀಚರ್ಸ್


    ಇನ್ನು ಈ ಸ್ಮಾರ್ಟ್​​ವಾಚ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ ಮತ್ತು ಜಿಪಿಎಸ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಲೈವ್ ಜಿಪಿಎಸ್​ ಲೊಕೇಶನ್‌ ಅನ್ನು ಆಯ್ದ ಕಾಂಟ್ಯಾಕ್ಟ್​ಗಳಿಗೆ ಸೆಂಡ್ ಮಾಡುವ ಅವಕಾಶವನ್ನು ಸಹ ನೀಡುತ್ತದೆ.


    ಬೆಲೆ ಮತ್ತು ಲಭ್ಯತೆ


    ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಗಾರ್ಮಿನ್ ವಿವೋಮೂವ್ ಟ್ರೆಂಡ್ ಸ್ಮಾರ್ಟ್‌ವಾಚ್‌ ಬೆಲೆ $299 ಅಂದರೆ ಭಾರತದಲ್ಲಿ ಸುಮಾರು 24,000 ರೂಪಾಯಿ ಆಗಿದೆ. ಇದನ್ನು ಯುಎಸ್​ ನಲ್ಲಿನ ಗಾರ್ಮಿನ್ ಕಂಪೆನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದು. ಇನ್ನು ಈ ಸ್ಮಾರ್ಟ್‌ವಾಚ್‌ ಬ್ಲ್ಯಾಕ್, ಪೀಚ್ ಗೋಲ್ಡ್, ಕ್ರೀಮ್ ಗೋಲ್ಡ್, ಗ್ರೇ ಮತ್ತು ಸಿಲ್ವರ್ ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.


    ಇದನ್ನೂ ಓದಿ: ಇವ್ರು ನಿಜವಾದ ಬಾಸ್​ ಅಂದ್ರೆ, ತನ್ನ ಉದ್ಯೋಗಿಗಳಿಗೆ ಕಾರ್​ ಗಿಫ್ಟ್​ ನೀಡಿದ ದಾನ ಶೂರ ಕರ್ಣ!


    ಇನ್ನು ಈ ಸ್ಮಾರ್ಟ್​​ವಾಚ್​ ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪೆನಿ ಬಹಿರಂಗ ಮಾಡಿಲ್ಲ. ಆದರೆ ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಇದು ಎಂಟ್ರಿ ನೀಡುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು