ಮೈಕ್ರೋಸಾಫ್ಟ್‌ನ Windows 11 ಓಎಸ್ ಬಿಡುಗಡೆ; ಹೇಗಿದೆ?

Microsoft Windows 11 update: ಅಕ್ಟೋಬರ್ ನಂತರ ಇದು ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ಮಾಹಿತಿ ಇದೆ. ಈಗಾಗಲೇ ವಿಂಡೋಸ್ 10 ಬಳಸುವವರಿಗೆ ವಿಂಡೋಸ್ 11 ಉಚಿತವಾಗಿ ಅಪ್‌ಡೇಟ್ ಆಗಲಿದೆಯೇ ಎಂಬುದನ್ನು ನಿರೀಕ್ಷಿಸಬೇಕಾಗಿದೆ.

Windows 11

Windows 11

  • Share this:

ಮೈಕ್ರೋಸಾಫ್ಟ್ ತನ್ನ ನೆಕ್ಸ್ಟ್ ಜನರೇಶನ್ Windows 11 OS ಅನ್ನು ಬಿಡುಗಡೆ ಮಾಡಿದ್ದು ಕಳೆದ ತಿಂಗಳು ನಡೆದ ಬಿಲ್ಡ್ 2021 ಕಾನ್ಫರೆನ್ಸ್‌ನಲ್ಲಿ ಪರಿಶೀಲನೆ ನಡೆಸಿದೆ. ಹೊಸ ಆವೃತ್ತಿಯ ವಿಂಡೋಸ್ 11 ಹೊಸ ಫೀಚರ್‌ಗಳನ್ನು ಒಳಗೊಂಡಿದ್ದು, ಪ್ರಾಡಕ್ಟಿವಿಟಿ ಟೂಲ್ಸ್ ಮತ್ತು ಮುಖ್ಯವಾಗಿ ಆಧುನಿಕ ಪಿಸಿಗಳು ಮತ್ತು ವರ್ಕ್‌ಸ್ಟೇಶನ್‌ಗಳಿಗಾಗಿ ಅತ್ಯಾಧುನಿಕ ಲುಕ್ ಅನ್ನು ಪಡೆದುಕೊಂಡಿದೆ. ಮೈಕ್ರೋಸಾಫ್ಟ್ ತನ್ನ ಇತ್ತೀಚಿನ ಟಚ್-ಸಕ್ರಿಯಗೊಳಿಸಿದ ಲ್ಯಾಪ್‌ಟಾಪ್‌ಗಳಿಗಾಗಿ ಓಎಸ್ ಅನ್ನು ಸಮನಾಗಿ ಹೊಂದಿಕೊಳ್ಳುವಂತೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಇದೇ ಸಮಯದಲ್ಲಿ ಡೆಲ್ ತನ್ನ ಪಿಸಿಗಳು ವಿಂಡೋಸ್ 11 ಅನ್ನು ಚಾಲನೆ ಮಾಡಲಿದೆ ಎಂದು ಘೋಷಿಸಿದೆ. ಡೆಲ್‌ನ ಹೊಸ ಪಿಸಿಗಳನ್ನು ಖರೀದಿಸುವ ಗ್ರಾಹಕರು ಉಚಿತ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗೆ ಅರ್ಹರಾಗಿರುತ್ತಾರೆ ಎಂದು ಡೆಲ್ ತಿಳಿಸಿದೆ.


ಇದರ ವಿನ್ಯಾಸವನ್ನು ನೋಡಹೊರಟಾಗ ಸಿಸ್ಟಮ್ ವೈಡ್ ಡಾರ್ಕ್ ಮತ್ತು ಲೈಟ್ ಮೋಡ್‌ಗಳನ್ನು ಸಹ ಈ ಓಎಸ್ ಪಡೆಯುತ್ತದೆ. ವಿಂಡೋಸ್ 11 ನಲ್ಲಿನ ಹೊಸ ಆ್ಯಪ್ ಸ್ಟೋರ್ ಮೂಲಕ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಸಹ ಸಪೋರ್ಟ್ ಮಾಡುತ್ತದೆ. ಸ್ನ್ಯಾಪ್ ಲೇಔಟ್ ಎಂಬ ಹೊಸ ವೈಶಿಷ್ಟ್ಯ ಇದರಲ್ಲಿದ್ದು ಬಳಕೆದಾರರು ಪಿಕ್ಚರ್ ಇನ್ ಪಿಕ್ಚರ್ ಮೋಡ್‌ಗೆ ಹೋಲುವ ಸ್ಮಾರ್ಟ್‌ಫೋನ್ ಸ್ವರೂಪದಲ್ಲಿ ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತದೆ.


ಬಳಕೆದಾರರ ವ್ಯವಹಾರಿಕ ಉದ್ದೇಶಗಳಿಗೆ ಇದನ್ನು ರೂಪಿಸಲಾಗಿದ್ದು ಹೊಸ ವೈಶಿಷ್ಟ್ಯಗಳೊಂದಿಗೆ ವಿಂಡೋಸ್ 11 ಬರುತ್ತಿದೆ. ಆಪರೇಟಿಂಗ್ ಸಿಸ್ಟಮ್ ಬಾಹ್ಯ ಮಾನಿಟರ್ ಹೊಂದಿರುವವರಿಗೆ ರೂಪುಗೊಂಡಿರುವುದು ಎಂದು ಸಾಫ್ಟ್‌ವೇರ್ ಕಂಪೆನಿ ಮೈಕ್ರೋಸಾಫ್ಟ್ ಹೇಳಿದೆ. ಡಾರ್ಕ್ ಮೋಡ್ ಇದರಲ್ಲಿದ್ದು ಬಳಕೆದಾರರಿಗೆ ಇದು ಹೆಚ್ಚು ಉಪಯೋಗಕಾರಿ ಎಂದು ತಿಳಿಸಲಾಗಿದೆ. ಇಂಟರ್‌ಫೇಸ್‌ ಸ್ಪಷ್ಟವಾಗಿದ್ದು ಮರುವಿನ್ಯಾಸಗೊಳಿಸಲಾದ ಆ್ಯಪ್ ಐಕಾನ್ ಇದರಲ್ಲಿದೆ. ವಿಂಡೋಸ್ ಕಂಡ ಅಪ್‌ಡೇಟ್‌ಗಳಲ್ಲಿ ಇದು ಹೆಚ್ಚು ಮಹತ್ವದ್ದಾಗಿದ್ದು ಡೆವಲಪರ್ಸ್ ಮತ್ತು ಕ್ರಿಯೇಟರ್ಸ್‌ಗೆ ಇದು ಅತ್ಯುತ್ತಮ ಅವಕಾಶವನ್ನು ಒದಗಿಸಲಿದೆ. ಹೊಸ ವಿಂಡೋಸ್ 11 ವೆಬ್ ಕಂಟೆಂಟ್, ನ್ಯೂಸ್ ಮತ್ತು ಹವಾಮಾನ ಮಾಹಿತಿಯನ್ನು ತಕ್ಷಣ ಪಡೆದುಕೊಳ್ಳಲು ಸಾಧ್ಯವಾಗುವಂತಹ ವಿಡ್ಜೆಟ್ ಐಕಾನ್‌ಗಳನ್ನು ಹೊಂದಿರಲಿದೆ. ಅಪ್ಲಿಕೇಶನ್‌ಗಳನ್ನು ಮ್ಯಾಕ್ಸಿಮೈಸ್ ಮಾಡುವ ಮೂಲಕ ಆ್ಯಕ್ಸೆಸ್ ಪಡೆಯುವ ಕಿರು ನಿಯಂತ್ರಣಗಳನ್ನು ಓಎಸ್ ಹೊಂದಿದೆ.


ಅಕ್ಟೋಬರ್ ನಂತರ ಇದು ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ಮಾಹಿತಿ ಇದೆ. ಈಗಾಗಲೇ ವಿಂಡೋಸ್ 10 ಬಳಸುವವರಿಗೆ ವಿಂಡೋಸ್ 11 ಉಚಿತವಾಗಿ ಅಪ್‌ಡೇಟ್ ಆಗಲಿದೆಯೇ ಎಂಬುದನ್ನು ನಿರೀಕ್ಷಿಸಬೇಕಾಗಿದೆ. ಆನ್‌ಲೈನ್ ಮಾಧ್ಯಮಗಳಿಗೆ ದೊರಕಿರುವ ಸುದ್ದಿಯ ಪ್ರಕಾರ ಮೈಕ್ರೋಸಾಫ್ಟ್ ಈ ಹಿಂದೆ ಡ್ಯುಯಲ್ ಸ್ಕ್ರೀನ್‌ಗಳಿಗೆ ನಿರ್ಮಿಸಿದ್ದ ವಿಂಡೋಸ್ 10 ಓಎಸ್ ಈ ಹೊಸ ವಿಂಡೋಸ್ 11 ಓಎಸ್ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಅಲ್ಲಿಯದೇ ಅನೇಕ ವಿನ್ಯಾಸಗಳನ್ನು ಇಲ್ಲಿ ಕೂಡ ನಾವು ಕಾಣಬಹುದಾಗಿದ್ದು ಇದರಿಂದ ಓಎಸ್ 11, ಓಎಸ್ 10 ರ ಪ್ರಭಾವಕ್ಕೊಳಗಾಗಿದೆ ಎಂಬುದು ನಿಚ್ಚಳವಾಗಿದೆ. ಆ್ಯಪ್ ಐಕಾನ್‌ಗಳು ಕೂಡ ಟಾಸ್ಕ್ ಬಾರ್‌ನ ಮಧ್ಯದಲ್ಲಿ ಕಂಡುಬರಲಿದ್ದು ಸ್ಟಾರ್ಟ್ ಬಟನ್ ಮತ್ತು ಮೆನುಗಳನ್ನು ಒಗ್ಗೂಡಿಸಲಾಗಿದೆ.


First published: